ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸ್ಥಿಪಂಜರಗಳ ಕುತೂಹಲಗಳ ಸುತ್ತ: ಅವರು ಪ್ರೇಮಿಗಳಲ್ಲ ಇನ್ಯಾರು?

|
Google Oneindia Kannada News

ರೋಮ್, ಸೆಪ್ಟೆಂಬರ್ 20: ಇಟಲಿಯ ಮೊಡೆನಾ ನಗರದಲ್ಲಿ ಕಂಡುಬಂದಿದ್ದ, 4ರಿಂದ 6 ಶತಮಾನದ್ದು ಎನ್ನಲಾದ ಪ್ರೇಮಿಗಳ ಅಸ್ಥಿಪಂಜರವನ್ನು ಒಂದೇ ಲಿಂಗಕ್ಕೆ ಸೇರಿದ್ದು ಎಂದು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

2009ನೇ ಇಸವಿಯಲ್ಲಿ ಇಟಲಿಯ ಉತ್ತರ ಭಾಗದಲ್ಲಿರುವ ಮೊಡೆನಾ ನಗರದಲ್ಲಿ ಕೈಯನ್ನು ಹಿಡಿದುಕೊಂಡ ಸ್ಥಿತಿಯಲ್ಲಿದ್ದ ಜೋಡಿ ಅಸ್ಥಿಪಂಜರ ಸಿಕ್ಕಿತ್ತು. ಇದನ್ನು ಮೊಡೆನಾದ ಪ್ರೇಮಿಗಳೆಂದೇ ಕರೆಯಲಾಗಿತ್ತು.

ಇದೀಗ ಅಲ್ಲಿನ ಬೊಗ್ನಾ ವಿಶ್ವವಿದ್ಯಾಯದ ವಿಜ್ಞಾನಿಗಳು ಹೆಚ್ಚಿನ ಸಂಶೋಧನೆ ನಡೆಸಿ, ಎರಡೂ ಅಸ್ಥಿಪಂಜರಗಳು ಪುರುಷರದ್ದೇ ಎನ್ನುವುದನ್ನು ವಿಜ್ಞಾನಿಗಳು ಸಾಬೀತು ಪಡಿಸಿದ್ದಾರೆ. ಎರಡೂ ವ್ಯಕ್ತಿಗಳ ಹಲ್ಲಿನ ಪ್ರೋಟಿನ್ ನ ಅಂಶಗಳನ್ನು ಹೊರತೆಗೆದು ಪರೀಕ್ಷಿಸಿದಾಗ ಅವರೆಡೆರ ಲಿಂಗವನ್ನು ಕಂಡುಹಿಡಿಯಲು ಸಾಧ್ಯವಾಯಿತೆಂದು ವರದಿಗಳು ಹೇಳಿವೆ.

Story About Hand-Holding Lovers of Modena Skeletons

ಕೇವಲ ಅಸ್ಥಿಪಂಜರದಿಂದಲೇ ಲಿಂಗವನ್ನು ಕಂಡುಹಿಡಿಯುವುದು ಅಸಾಧ್ಯ. ಆದರೂ ತಾವು ಈ ಪ್ರಯತ್ನದಲ್ಲಿ ಸಫಲರಾಗಿದ್ದೇವೆ. ಇವರಿಬ್ಬರೂ ಸ್ನೇಹಿತರು, ಸಹೋದರರು ಅಥವಾ ಯುದ್ಧದಲ್ಲಿ ಭಾಗವಹಿಸಿದ ಒಡನಾಡಿಗಳು ಆಗಿರಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಈ ಇಬ್ಬರು ವ್ಯಕ್ತಿಗಳು ನಿಜವಾಗಿಯೂ ಪ್ರೀತಿಸುತ್ತಿದ್ದರು ಎನ್ನುವುದನ್ನು ತಿಳಿಯುವುದು ಅಸಾಧ್ಯ. ಅವರಿಬ್ಬರ ನಡುವಿನ ಬಂಧನವನ್ನು ಸೂಚಿಸುವುದಕ್ಕೋಸ್ಕರ ಸಮಾಧಿ ಮಾಡುವ ಸಂದರ್ಭದಲ್ಲಿ ಇಬ್ಬರ ಕೈಗಳನ್ನು ಜೋಡಿಸಿರಬಹುದು , ಹಾಗಂತ ಅವರಿಬ್ಬರ ಮಧ್ಯೆ ಸಲಿಂಗ ಕಾಮವಿರಬಹುದು ಎನ್ನುವ ತೀರ್ಮಾನಕ್ಕೆ ಬರುವುದು ಕೂಡ ಸರಿಯಲ್ಲ ಎಂದು ಹೇಳಿದ್ದಾರೆ.

English summary
Story About Hand-Holding Lovers of Modena Skeletons , While this has caused intense interest and speculation, especially regarding the possibility of these skeletons being a homosexual couple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X