ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರು ನಾನಕ್ ಜನ್ಮಸ್ಥಳದಲ್ಲಿ ಕೆರಳಿದ ಪ್ರತಿಭಟನಾಕಾರರಿಂದ ಕಲ್ಲುತೂರಾಟ

|
Google Oneindia Kannada News

ಇಸ್ಲಮಾಬಾದ್, ಜನವರಿ.03: ಪಾಕಿಸ್ತಾನ್ ನಲ್ಲಿ ಗುರುನಾನಕ್ ರ ಜನ್ಮಸ್ಥಳದ ದರ್ಶನಕ್ಕೆ ತೆರಳಿದ ಯಾತ್ರಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಂಜಾಬ್ ಜಿಲ್ಲೆ ಗುರುದ್ವಾರ್ ದ ನಾಂಕನ್ ಸಾಹೇಬ್ ನಗರದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.

ಸಿಖ್ ರ ವಿರುದ್ಧ ಕೆರಳಿದ ಮುಸ್ಲಿಮರು ಕಲ್ಲುತೂರಾಟ ನಡೆಸಿದ್ದು, ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಪವಿತ್ರ ಕ್ಷೇತ್ರ ದರ್ಶನಕ್ಕೆ ತೆರಳಿದ ಭಾರತೀಯರಿಗೆ ಬೆದರಿಕೆಯೊಡ್ಡಲಾಗುತ್ತಿರುವ ಬಗ್ಗೆ ವರದಿಯಾಗಿದೆ. ಈ ಸಂಬಂಧ ಗುಜರಾತ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರಿಗೆ ಚರ್ಚಿಸಿದ್ದಾರೆ.

ಫೇಕ್ ವಿಡಿಯೋ ಹಾಕಿ ನೆಟ್ಟಿಗರಿಂದ ಉಗಿಸಿಕೊಂಡ ಇಮ್ರಾನ್ ಖಾನ್!ಫೇಕ್ ವಿಡಿಯೋ ಹಾಕಿ ನೆಟ್ಟಿಗರಿಂದ ಉಗಿಸಿಕೊಂಡ ಇಮ್ರಾನ್ ಖಾನ್!

ತಕ್ಷಣವೇ ಪಾಕಿಸ್ತಾನ ಸರ್ಕಾರ ಮಧ್ಯಪ್ರವೇಶಿಸಬೇಕು. ಗುರುದ್ವಾರದಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕು ಎಂದು ಟ್ವಿಟರ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇನ್ನೊಂದೆಡೆ ಪ್ರತಿಭಟನೆ ನಡೆಸುತ್ತಿರುವ ಮುಸ್ಲಿಮರು ನಾಂಕನ್ ನಲ್ಲಿ ಒಬ್ಬರೇ ಒಬ್ಬ ಸಿಖ್ಖರು ಇರುವುದಕ್ಕೆ ಬಿಡುವುದಿಲ್ಲ ಎಂದು ಬೆದರಿಕೆಯೊಡ್ಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

Stone Pelting From Protesters At Gurudwara In Pakistan

ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣಕ್ಕೆ ಕಾರಣವೇನು?:

ಜಗ್ಜಿತ್ ಕೌರ್ ಎಂಬ ಸಿಖ್ ಯುವತಿಯನ್ನು ಮೊಹಮ್ಮದ್ ಹಸ್ಸನ್ ಎಂಬ ಯುವಕ ಅಪಹರಿಸಿದ್ದು, ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಲು ಮುಂದಾಗಿದ್ದ ಎಂದು ಆರೋಪಿಸಲಾಗಿದೆ. ಈ ಸಂದರ್ಭದಲ್ಲಿ ಪೊಲೀಸರು ಯುವಕನ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೆರಳಿರುವ ಮುಸ್ಲಿಮರು ತಮ್ಮ ಧರ್ಮಕ್ಕೆ ಮತಾಂತರಗೊಂಡ ಯುವತಿಯನ್ನು ಹೇಗೆ ವಾಪಸ್ ಕರೆದುಕೊಂಡು ಹೋದರು ಎಂದು ಪ್ರಶ್ನೆ ಮಾಡುತ್ತಿದ್ದಾರೆ.

Stone Pelting From Protesters At Gurudwara In Pakistan

ಇದಿಷ್ಟೇ ಅಲ್ಲದೇ, ಗುರು ನಾನಕ್ ರ ಜನ್ಮಸ್ಥಳ ನಾಂಕನ್ ಸಾಹೇಬ್ ನ ಹೆಸರನ್ನು ಗುಲಾಮನ್-ಇ-ಮುಸ್ತಫಾ ಆಗಿ ಬದಲಾಯಿಸಲಾಗುತ್ತದೆ. ಯಾವೊಬ್ಬ ಸಿಖ್ಖರನ್ನು ಇಲ್ಲಿ ಇರುವುದಕ್ಕೆ ಬಿಡುವುದಿಲ್ಲ ಎಂದು ಬೆದರಿಕೆಯೊಡ್ಡಲಾಗುತ್ತಿದೆ ಎಂದು ವರದಿಯಾಗಿದೆ.

English summary
Stone Pelting From Protesters At Gurudwara In Pakistan. Punjab CM Amarinder Singh Ask PM Imran Khan To Save Indian Devotees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X