ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದುವರೆಗೂ ಈ ದೇಶದಲ್ಲಿ ಒಂದೇ ಒಂದು ಕೊರೊನಾ ಪ್ರಕರಣಗಳಿಲ್ಲವಂತೆ!

|
Google Oneindia Kannada News

ಸಿಯೋಲ್, ಮೇ 11: ನಮ್ಮ ದೇಶದಲ್ಲಿ ಈವರೆಗೂ ಒಂದೇ ಒಂದು ಕೊರೊನಾ ಪ್ರಕರಣಗಳು ದಾಖಲಾಗಿಲ್ಲ ಎಂದು ದೇಶವೊಂದು ವಿಶ್ವ ಆರೋಗ್ಯ ಸಂಸ್ಥೆಗೆ ಮಾಹಿತಿ ನೀಡಿದೆ.
ಏಪ್ರಿಲ್ ನಿಂದ ಈ ವರೆಗೂ ಉತ್ತರ ಕೊರಿಯಾದಲ್ಲಿ 25,986 ಜನರನ್ನು ಕೊರೊನಾ ವೈರಸ್ ಸೋಂಕು ಪರೀಕ್ಷೆಗೊಳಪಡಿಸಲಾಗಿದ್ದು, ಈ ವರೆಗೂ ಒಂದೇ ಒಂದು ಸೋಂಕು ಪ್ರಕರಣ ಪತ್ತೆಯಾಗಿಲ್ಲ.

ಏಪ್ರಿಲ್ 23-29ರ ಅವಧಿಯಲ್ಲಿ ಪರೀಕ್ಷಿಸಲಾದ 751 ಜನರ ಪೈಕಿ 139 ಜನರಿಗೆ ಇನ್ಫ್ಲುಯೆನ್ಸ ತರಹದ ಕಾಯಿಲೆಗಳು ಅಥವಾ ತೀವ್ರ ಉಸಿರಾಟದ ಸೋಂಕು ಇರುವುದು ಪತ್ತೆಯಾಗಿತ್ತು. ಆದರೆ ಇದು ಕೊರೋನಾ ಸೋಂಕು ಅಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ ಎಂದು ಉತ್ತರ ಕೊರಿಯಾ ವಿಶ್ವಸಂಸ್ಥೆಗೆ ಮಾಹಿತಿ ನೀಡಿದೆ.

ಯುದ್ಧಕ್ಕೂ ಮೊದಲೇ ಉತ್ತರ ಕೊರಿಯಾ ಎಸ್ಕೇಪ್? ಸರ್ವಾಧಿಕಾರಿ ನಿರ್ಧಾರ ಕೇಳಿ ಶಾಕ್!ಯುದ್ಧಕ್ಕೂ ಮೊದಲೇ ಉತ್ತರ ಕೊರಿಯಾ ಎಸ್ಕೇಪ್? ಸರ್ವಾಧಿಕಾರಿ ನಿರ್ಧಾರ ಕೇಳಿ ಶಾಕ್!

ಇಡೀ ಜಗತ್ತೇ ಮಾರಕ ಕೊರೊನಾ ಸೋಂಕಿನಿಂದ ತತ್ತರಿಸುತ್ತಿದ್ದು, ಸೋಂಕಿತರ ನಿರ್ವಹಣೆ ಸಾಧ್ಯವಾಗದೇ ಪರದಾಡುತ್ತಿವೆ, ಈ ಸಮಯದಲ್ಲಿ ಈ ದೇಶದಲ್ಲಿ ಒಂದೇ ಒಂದು ಸೋಂಕು ಪ್ರಕರಣವಿಲ್ಲವೇ... ಇಂತಹುದೊಂದು ಪ್ರಶ್ನೆ ಮೂಡುವುದು ಸಹಜ.

Still No Coronavirus Infections In country: North Korea Tells WHO

ಆದರೆ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆಡಳಿತವಿರುವ ಉತ್ತರ ಕೊರಿಯಾದಲ್ಲಿ ಒಂದೇ ಒಂದು ಕೊರೊನಾ ಸೋಂಕು ಪ್ರಕರಣ ದಾಖಲಾಗಿಲ್ಲವಂತೆ. ಈ ಬಗ್ಗೆ ಉತ್ತರ ಕೊರಿಯಾ ಸರ್ಕಾರವೇ ವಿಶ್ವ ಆರೋಗ್ಯ ಸಂಸ್ಥೆಗೆ ಮಾಹಿತಿ ನೀಡಿದೆ.

ಇನ್ನು ಜಗತ್ತಿನಲ್ಲಿ ಕೊವಿಡ್ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆಯೇ ಉತ್ತರ ಕೊರಿಯಾ ವಿದೇಶಗರಿಗೆ ತನ್ನ ದೇಶದ ಪ್ರವೇಶಕ್ಕೆ ನಿರ್ಬಂಧ ಹೇರಿತ್ತು. ಅಲ್ಲದೆ ಪ್ರವಾಸೋದ್ಯಮ ಬಂದ್ ಮಾಡಿತ್ತು. ಅಲ್ಲದೆ ಈ ಹಿಂದೆ ರೋಗಲಕ್ಷಣಗಳಿರುವ ತನ್ನದೇ ದೇಶದ ಪ್ರಜೆಗಳನ್ನೂ ಕೂಡ ದೇಶ ಪ್ರವೇಶಕ್ಕೆ ಸರ್ವಾಧಿಕಾರಿ ಸರ್ಕಾರ ನಿರ್ಬಂಧ ಹೇರಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಇನ್ನು ಒಂದೇ ಒಂದು ಕೊರೊನಾ ಸೋಂಕು ಇಲ್ಲ ಎಂಬ ಉತ್ತರ ಕೊರಿಯಾದ ಮಾಹಿತಿಯನ್ನು ಜಗತ್ತು ಅನುಮಾನದಿಂದ ನೋಡುತ್ತಿದ್ದು, ಉತ್ತರ ಕೊರಿಯಾ ಚೀನಾದೊಂದಿಗೆ ಆರೋಗ್ಯ ಮೂಲಸೌಕರ್ಯ ಹಂಚಿಕೊಂಡಿದೆ. ಜಗತ್ತಿನಲ್ಲಿ ಮೊದಲು ಕೊರೋನಾ ವೈರಸ್ ಸೋಂಕು ಕಾಣಿಸಿಕೊಂಡಿದ್ದೇ ಚೀನಾದಲ್ಲಿ. ಹೀಗಿರುವಾಗ ಉತ್ತರ ಕೊರಿಯಾದಲ್ಲಿ ಸೋಂಕಿತರು ಇಲ್ಲ ಎಂಬ ಕಿಮ್ ಜಾಂಗ್ ಉನ್ ಸರ್ಕಾರದ ಹೇಳಿಕೆ ಅನುಮಾನಕ್ಕೀಡಾಗಿದೆ.

English summary
North Korea has told the World Health Organization that it has tested 25,986 people for the coronavirus through April but still has yet to find a single infection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X