ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅದೇ ಜಾಗ, ಅದೇ ಮೊಸಳೆ: 15 ವರ್ಷದ ಬಳಿಕ ಸ್ಟೀವ್ ಇರ್ವಿನ್ ಮಗನ ಮರುಸೃಷ್ಟಿಯ ಸಾಹಸ

|
Google Oneindia Kannada News

ನವದೆಹಲಿ, ಜುಲೈ 4: 'ದಿ ಕ್ರೊಕೊಡೈಲ್ ಹಂಟರ್' ಖ್ಯಾತಿಯ ಸ್ಟೀವ್ ಇರ್ವಿನ್ ಹೆಸರು ನೆನಪಿರಬೇಕು. 'ದಿ ಕ್ರೊಕೊಡೈಲ್ ಹಂಟರ್ ಡೈರೀಸ್', 'ಕ್ರೊಕ್ ಫೈಲ್ಸ್', 'ನ್ಯೂ ಬ್ರೀಡ್ ವೆಟ್ಸ್' ಮುಂತಾದ ಪ್ರಾಣಿಗಳ ಕುರಿತಾದ ಸರಣಿ ಕಾರ್ಯಕ್ರಮಗಳಿಂದ ಖ್ಯಾತರಾಗಿದ್ದ ಸ್ಟೀವ್, ಸಾಕ್ಷ್ಯಚಿತ್ರವೊಂದಕ್ಕೆ ಕೆಲಸ ಮಾಡುತ್ತಿರುವಾಗಲೇ ಅಪಾಯಕಾರಿ ಸ್ಟಿಂಗರೆ ಮೀನು ಕಚ್ಚಿ ಮೃತಪಟ್ಟಿದ್ದರು.

ಆಸ್ಟ್ರೇಲಿಯಾದವರಾದ ಸ್ಟೀವ್, ಅಲ್ಲಿ 'ಆಸ್ಟ್ರೇಲಿಯಾ ಝೂ' ನಿರ್ವಹಣೆ ಮಾಡುತ್ತಿದ್ದರು. ಡಿಸ್ಕವರಿ ಮತ್ತು ಅನಿಮಲ್ ಪ್ಲಾನೆಟ್ ವೀಕ್ಷಕರಿಗೆ ಅವರದು ಚಿರಪರಿಚಿತ ಹೆಸರು. 2006ರಲ್ಲಿ ಅವರು ಮೃತಪಟ್ಟ ಬಳಿಕ ವನ್ಯಜೀವಿ ಲೋಕಕ್ಕೆ ಅವರು ನೀಡಿದ ಕೊಡುಗೆಗಳ ಬಗ್ಗೆ ಅನೇಕ ಕಾರ್ಯಕ್ರಮಗಳು ನಡೆದಿದ್ದವು. ಅವರು ಕೇವಲ ಕ್ರೊಕೊಡೈಲ್ ಹಂಟರ್ ಅಷ್ಟೇ ಆಗಿರಲಿಲ್ಲ.

ಹಾವು ಹಿಡಿಯಲು ಶುರುವಾಗಿದೆ ವೈಜ್ಞಾನಿಕ ತರಬೇತಿ ಹಾವು ಹಿಡಿಯಲು ಶುರುವಾಗಿದೆ ವೈಜ್ಞಾನಿಕ ತರಬೇತಿ

ಅವರ ಕಾರ್ಯಕ್ರಮಗಳನ್ನು ನೋಡಿ ಪೀಳಿಗೆಗಳು ಬೆಳೆದಿವೆ. ಅವರನ್ನು ಅನುಕರಿಸುವ ಪ್ರಯತ್ನ ಮಾಡಿದವರಿದ್ದಾರೆ. ಆದರೂ ಅವರಿಗೆ ಸರಿಸಮನಾದ ಮೊಸಳೆಗಳು ಹಾಗೂ ಇತರೆ ಕೆಲವು ಪ್ರಾಣಿಗಳ ಬಗ್ಗೆ ಜ್ಞಾನವುಳ್ಳ ತಜ್ಞರು ದೊರೆತಿಲ್ಲ. ಹೀಗಾಗಿ ಅವರು ನಿಧನರಾಗಿ ಹದಿಮೂರು ವರ್ಷವಾದರೂ ಈಗಲೂ ನೆನಪಿನಲ್ಲಿ ಉಳಿದಿದ್ದಾರೆ.

Steve irwin son robert clarence irwin recreates pitcure in same place same crocodile

ಈಗ ಅವರ ಸಾಹಸದ ಚರಿತ್ರೆಯ ಪುಟವನ್ನು ಅವರ ಮಗ ಮತ್ತೆ ತೆರೆದಿದ್ದಾರೆ. ಇನ್ನೂ 15 ವರ್ಷದವರಾದ ರಾಬರ್ಟ್ ಕ್ಲಾರೆನ್ಸ್ ಇರ್ವಿನ್, ಈಗಾಗಲೇ ಅಪ್ಪನ ಹೆಜ್ಜೆಯನ್ನೇ ತುಳಿಯುತ್ತಿದ್ದಾರೆ.

ಇದಕ್ಕೆ ರಾಬರ್ಟ್ ಅವರು ಟ್ವಿಟ್ಟರ್ ಖಾತೆಯಲ್ಲಿ ಹಾಕಿರುವ ಫೋಟೊಗಳೇ ಸಾಕ್ಷಿ. ತಂದೆ ಸ್ಟೀವ್ ಅವರಂತೆಯೇ ಪ್ರಾಣಿಗಳೊಂದಿಗೆ ವಿಶಿಷ್ಟ ಬಂಧ ಬೆಳೆಸಿಕೊಳ್ಳುವ ಸೂಚನೆ ನೀಡಿದ್ದಾರೆ. ಈ ಫೋಟೊ ಸ್ಟೀವ್ ಅವರ ಅಭಿಮಾನಿಗಳು ಹಾಗೂ ಪ್ರಾಣಿ ಪ್ರಿಯರನ್ನು ಖುಷಿಗೊಳಿಸಿದೆ.

ಸಾಮಾನ್ಯ ಚಿತ್ರದಂತೆ ಕಂಡರೂ ವಾಸ್ತವವಾಗಿ ಇದು ವಿಶಿಷ್ಟವಾದುದು. 15 ವರ್ಷದ ಬಳಿಕ ಒಂದು ಘಟನೆಯನ್ನು ರಾಬರ್ಟ್ ಮರುಸೃಷ್ಟಿ ಮಾಡಿದ್ದಾರೆ.

ಮೈಸೂರು ಮೃಗಾಲಯದ ಪ್ರವೇಶ ಶುಲ್ಕ ಏರಿಕೆ ಮೈಸೂರು ಮೃಗಾಲಯದ ಪ್ರವೇಶ ಶುಲ್ಕ ಏರಿಕೆ

'ಅಪ್ಪ ಮತ್ತು ನಾನು ಮುರ್ರೇಗೆ ಆಹಾರ ನೀಡುತ್ತಿರುವುದು... ಅದೇ ಸ್ಥಳ, ಅದೇ ಮೊಸಳೆ- 15 ವರ್ಷದ ಅಂತರದಲ್ಲಿ ಎರಡು ಫೋಟೊಗಳು' ಎಂದು ರಾಬರ್ಟ್ ಟ್ವೀಟ್ ಮಾಡಿದ್ದಾರೆ. ತಂದೆ ಸ್ಟೀವ್ ಅವರಂತೆಯೇ ಉಡುಗೆ ತೊಟ್ಟು, ಅವರಂತೆಯೇ ಕಾಣಿಸುತ್ತಿದ್ದ ರಾಬರ್ಟ್, ಮುರ್ರೆ ಎಂಬ ಮೊಸಳೆಗೆ ಮಾಂಸದ ಆಹಾರ ನೀಡುತ್ತಿದ್ದಾರೆ. ಇದೇ ರೀತಿ ಅದೇ ಜಾಗದಲ್ಲಿ ಅದೇ ಮೊಸಳೆಗೆ ಸ್ಟೀವ್ 15 ವರ್ಷಗಳ ಹಿಂದೆ ಆಹಾರ ನೀಡುತ್ತಿದ್ದ ಚಿತ್ರ ಕ್ಲಿಕ್ಕಿಸಲಾಗಿತ್ತು. ಆ ಮೊಸಳೆ ಕೂಡ ಬಹುತೇಕ ಅದೇ ಭಂಗಿಯಲ್ಲಿ ಮಲಗಿ ಆಹಾರಕ್ಕಾಗಿ ಬಾಯಿ ಕಳೆದಿರುವುದನ್ನು ನೋಡಬಹುದು.

ಈ ಚಿತ್ರ ನೆಟ್ಟಿಗರ ಗಮನ ಸೆಳೆದಿದೆ. ಈ ಫೋಟೊವನ್ನು ಸಾವಿರಾರು ಮಂದಿ ಹಂಚಿಕೊಂಡಿದ್ದಾರೆ.

English summary
Son of 'The Crocodile Hunter' Steve Irwin, Robert Clarence Irwin shared a picture of feeding a crocodile which was similar to his father's 15 years old picture.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X