ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಬೈನಲ್ಲಿ ವಿಶ್ವಗುರು ಬಸವಣ್ಣನ ಪ್ರತಿಮೆ ಸ್ಥಾಪನೆ

|
Google Oneindia Kannada News

ಬೆಂಗಳೂರು, ಜು. 06: ಲಂಡನ್‌ನ ಥೇಮ್ಸ್ ನದಿಯ ದಂಡೆ ಮೇಲೆ ವಿಶ್ವಗುರು ಬಸವಣ್ಣ ಪ್ರತಿಮೆ ಸ್ಥಾಪನೆಯಾಗಿದ್ದು ಇತಿಹಾಸ. ಇದೀಗ ಅರಬ್ ಸಂಯುಕ್ತ ಸಂಸ್ಥಾನದ ದುಬೈನಲ್ಲಿ ಬಸವಣ್ಣನರ ಪ್ರತಿಮೆ ಸ್ಥಾಪನೆಯಾಗುವ ಮೂಲಕ ಮಧ್ಯಪ್ರಾಚ್ಯ ರಾಷ್ಟ್ರಗಳಿಗೂ ಬಸವಣ್ಣನವರ ಚಿಂತನೆಗಳು ಹರಡುವಂತಾಗಿದೆ.

ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ದುಬೈ ಬಸವ ಸಮಿತಿ ವತಿಯಿಂದ ಬಸವಣ್ಣನವರ ಪಂಚಲೋಹದ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ್ ಅವರ ಸಹಾಯ ಮತ್ತು ಸಹಕಾರದಿಂದ ದುಬೈ ಬಸವ ಸಮಿತಿಯವರು ಬಸವಣ್ಣನ ಮೂರ್ತಿಯನ್ನು ಬೆಂಗಳೂರಿನ ಗಾಯತ್ರಿ ಶಿಲ್ಪಿ ಅವರಿಂದ ಕೆತ್ತನೆ ಮಾಡಿಸಿ ದುಬೈಗೆ ತೆಗೆದುಕೊಂಡು ಹೋಗಿದ್ದಾರೆ.

ಬಸವಣ್ಣನ ಮೂರ್ತಿಯನ್ನು ಬಸವ ಜಯಂತಿ ಸಂದರ್ಭದಲ್ಲಿ ದುಬೈನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಪ್ರತಿಷ್ಠಾಪಿಸುವ ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ, ಕೊರೊನಾ ವೈರಸ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಸವ ಜಯಂತಿ ಕಾರ್ಯಕ್ರಮ ಮಾಡಲು ಸಾಧ್ಯವಾಗದ್ದರಿಂದ ಶನಿವಾರ (ಜು. 4) ಸರಳವಾಗಿ ಬಸವಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡುವ ಕಾರ್ಯಕ್ರಮ ನಡೆಸಲಾಗಿದೆ.

statue of Vishwaguru Basavanna established in Dubai, United Arab Emirates

ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿ ವಿಪುಲ್ ಶಾ ಸದ್ಯದ ಕೋವಿಡ್ ಪರಿಸ್ಥಿತಿಯಲ್ಲಿ ಈ ಕಾರ್ಯಕ್ರಮವನ್ನು ಅತ್ಯಂತ ಸರಳ ರೀತಿಯಲ್ಲಿ ಮಾಡಲಾಗಿದೆ, ಮುಂಬರುವ ದಿನಗಳಲ್ಲಿ ಕನ್ನಡಿಗರೆಲ್ಲರನ್ನೂ ಸೇರಿಸಿ ಅಧಿಕೃತವಾಗಿ ದೊಡ್ಡ ಪ್ರಮಾಣದ ಕಾರ್ಯಕ್ರಮವನ್ನು ನೆರವೇರಿಸಿ ಜಗಜ್ಯೋತಿ ಬಸವೇಶ್ವರರ ಪುತ್ಥಳಿಯನ್ನು ಅನಾವರಣ ಗೊಳಿಸೋಣ ಎಂದು ಹೇಳಿದರು.

ಕರ್ನಾಟಕದ ಮಹಾನ್ ಸಮಾಜ ಸುಧಾರಕರಾದ ಬಸವಣ್ಣನವರ ವಚನಗಳಿಂದ ನಾವೆಲ್ಲರೂ ಪ್ರೇರೇಪಿತರಾಗಬೇಕೆಂದು ಹೇಳಿ ಬಸವ ಸಮಿತಿ ದುಬೈಗೆ ಶುಭಹಾರೈಸಿದರು.

statue of Vishwaguru Basavanna established in Dubai, United Arab Emirates

ಈ ಸಂದರ್ಭದಲ್ಲಿ ಯುಎಇ ಬಸವ ಸಮಿತಿ ದುಬೈ ಅಧ್ಯಕ್ಷರಾದ ಸತೀಶ್ ಹಿಂಡೇರ, ಸಲಹಾ ಹಾಗೂ ಸ್ಥಾಪಕ ಸಮಿತಿಯ ಸದಸ್ಯರಾದ ಚಂದ್ರಶೇಖರ ಲಿಂಗದಳ್ಳಿ, ಬಸವ ಸಮಿತಿ ಸದಸ್ಯರಾದ ಮಲ್ಲಿಕಾರ್ಜುನ ಮುಳ್ಳೂರ್, ಡಾ. ಮಮತಾ ರೆಡ್ಡೇರ ಹಾಜರಿದ್ದರು.

English summary
With the establishment of a statue of Basavanna in Dubai, the United Arab Emirates, Basavanna's thoughts have spread to the Middle East.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X