ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಲೆಯಲ್ಲಿ ಕಾಲ್ತುಳಿತ: 14 ಮಕ್ಕಳ ದಾರುಣ ಸಾವು

|
Google Oneindia Kannada News

ನೈರೋಬಿ, ಫೆಬ್ರವರಿ 4: ಪ್ರಾಥಮಿಕ ಶಾಲೆಯೊಂದರಲ್ಲಿ ಕಾಲ್ತುಳಿತ ಉಂಟಾಗಿ ಕನಿಷ್ಠ 14 ಮಕ್ಕಳು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಪಶ್ಚಿಮ ಕೀನ್ಯಾದಲ್ಲಿ ನಡೆದಿದೆ.

ಕೀನಾ ರಾಜಧಾನಿ ನೈರೋಬಿಯ ಆಗ್ನೇಯ ವಾಯವ್ಯ ಭಾಗದಲ್ಲಿರುವ ಕಾಕಮೆಗಾ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಮಧ್ಯಾಹ್ನ ಈ ದುರಂತ ಸಂಭವಿಸಿದೆ. 3 ಗಂಟೆ ಸುಮಾರಿಗೆ ಮಕ್ಕಳು ಶಾಲೆಯಿಂದ ಮನೆಗೆ ಹೊರಡುವ ವೇಳೆ ಕಾಲ್ತುಳಿತ ಉಂಟಾಗಿದೆ. ಆದರೆ ಈ ಘಟನೆಗೆ ಕಾರಣ ತಿಳಿದುಬಂದಿಲ್ಲ.

 ವಿಡಿಯೋ; ಡ್ಯಾನ್ಸ್ ಮಾಡುವಾಗ ಪ್ರಾಣಬಿಟ್ಟ ಕೋಲಾರ ವಿದ್ಯಾರ್ಥಿನಿ ವಿಡಿಯೋ; ಡ್ಯಾನ್ಸ್ ಮಾಡುವಾಗ ಪ್ರಾಣಬಿಟ್ಟ ಕೋಲಾರ ವಿದ್ಯಾರ್ಥಿನಿ

ಕಾಲ್ತುಳಿತದಿಂದ ಕನಿಷ್ಠ 39 ಮಕ್ಕಳಿಗೆ ತೀವ್ರ ಗಾಯಗಳಾಗಿವೆ. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಮುಖ್ಯಸ್ಥ ಡೇವಿಡ್ ಕಬೆನಾ ತಿಳಿಸಿದ್ದಾರೆ.

 Stampede Killed At Least 14 Pupils In Kenya School

ಶಾಲೆ ಮುಗಿಯುತ್ತಿದ್ದಂತೆಯೇ ವಿದ್ಯಾರ್ಥಿಗಳು ತರಗತಿಯಿಂದ ಕೆಳಕ್ಕಿಳಿಯಲು ಮೆಟ್ಟಿಲಿನಿತ್ತ ಒಟ್ಟಿಗೆ ಧಾವಿಸಿದ್ದರು. ಕಿರಿದಾಗಿದ್ದ ಮೆಟ್ಟಿಲು ಕುಸಿದು ಈ ದುರಂತ ಸಂಭವಿಸಿದೆ ಎಂದು ವರದಿಗಳು ಹೇಳಿವೆ. ಇನ್ನು ಕೆಲವು ಮಕ್ಕಳು ಗಾಬರಿಯಿಂದ ಓಡಿದ್ದರಿಂದ ಮೂರನೇ ಮಹಡಿಯಿಂದ ಕೂಡ ಕೆಳಕ್ಕೆ ಬಿದ್ದಿರುವುದು ವರದಿಯಾಗಿದೆ.

 ಅಶ್ಲೀಲ ವೀಡಿಯೋ ತೋರಿಸಿ ಪಾಠ ಮಾಡುವರೆಂದು ಶಿಕ್ಷಕನ ವಿರುದ್ಧ ತಿರುಗಿಬಿದ್ದ ವಿದ್ಯಾರ್ಥಿಗಳು ಅಶ್ಲೀಲ ವೀಡಿಯೋ ತೋರಿಸಿ ಪಾಠ ಮಾಡುವರೆಂದು ಶಿಕ್ಷಕನ ವಿರುದ್ಧ ತಿರುಗಿಬಿದ್ದ ವಿದ್ಯಾರ್ಥಿಗಳು

ನೈರೋಬಿಯ ಶಾಲೆಯೊಂದರಲ್ಲಿ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ತರಗತಿ ಕಟ್ಟಡ ಕುಸಿದು ಎಂಟು ಮಕ್ಕಳು ಮೃತಪಟ್ಟು, 69 ಮಕ್ಕಳು ಗಾಯಗೊಂಡಿದ್ದರು.

ಈ ಘಟನೆ ಕೀನ್ಯಾದಲ್ಲಿನ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಯ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪೊಲೀಸರು ಘಟನೆ ಕುರಿತು ತನಿಖೆ ಆರಂಭಿಸಿರುವುದಾಗಿ ತಿಳಿಸಿದ್ದಾರೆ.

English summary
At least 14 students killed in a stampede at a primary school in Kakamega, Kenya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X