ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೇಲ್ ಧಾರ್ಮಿಕ ಸಭೆಯಲ್ಲಿ ಕಾಲ್ತುಳಿತ: 40ಕ್ಕೂ ಅಧಿಕ ಮಂದಿ ಸಾವು

|
Google Oneindia Kannada News

ಜೆರುಸಲೇಂ, ಏಪ್ರಿಲ್ 30: ಇಸ್ರೇಲ್‌ನ ಧಾರ್ಮಿಕ ಸಭೆಯಲ್ಲಿ ಸಂದರ್ಭದಲ್ಲಿ ಕಾಲ್ತುಳಿತಕ್ಕೆ ಸಿಕ್ಕ 40ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮಾಧ್ಯಮಗಳ ವರದಿ ಪ್ರಕಾರ ಸುಮಾರು 10 ಸಾವಿರ ಮಂದಿ ಸೇರಿದ್ದರು ಎಂದು ತಿಳಿದು ಬಂದಿದೆ, ಮಧ್ಯರಾತ್ರಿ ಈ ದುರಂತ ಸಂಭವಿಸಿದ್ದು, ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಜನರನ್ನು ಚದುರಿಸಲು ಹರಸಾಹಸ ಪಟ್ಟಿದ್ದಾರೆ.

ಶಾಲೆಯಲ್ಲಿ ಕಾಲ್ತುಳಿತ: 14 ಮಕ್ಕಳ ದಾರುಣ ಸಾವುಶಾಲೆಯಲ್ಲಿ ಕಾಲ್ತುಳಿತ: 14 ಮಕ್ಕಳ ದಾರುಣ ಸಾವು

ಅಷ್ಟರಲ್ಲಾಗಲೇ ಕಾಲ್ತುಳಿತದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇಸ್ರೇಲ್‌ನಲ್ಲಿ ನಡೆದ ಯಹೂದಿ ಧಾರ್ಮಿಕ ಸಭೆಯ ವೇಳೆ ಕಾಲ್ತುಳಿತ ದುರಂತ ಸಂಭವಿಸಿದ್ದು, 40 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

Stampede At Israeli Religious Festival Kills Nearly 40

ಲಾಗ್‌ ಬೋಮರ್‌ ಆಚರಿಸಲು ಇಸ್ರೇಲ್‌ ಮೌಂಟ್‌ ಮೆರೂರ್‌ನಲ್ಲಿ ಸಾಮೂಹಿಕ ಸಭೆಯನ್ನು ಆಯೋಜಿಸಲಾಗಿತ್ತು. ಸಂಭ್ರಮದ ವೇಳೆ ಮೆಟ್ಟಿಲುಗಳ ಮೇಲಿಂದ ಜನರು ಒಬ್ಬರ ಮೇಲೊಬ್ಬರು ಬಿದ್ದಿರುವುದು ದುರಂತಕ್ಕೆ ಕಾರಣವಾಗಿದ್ದು ಸುಮಾರು 103 ಮಂದಿ ಗಾಯಗಗೊಂಡಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಘಟನೆ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತಾನ್ಯಾಹು, 'ಭೀಕರ ದುರಂತ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳು ನೀಡಿದ್ದ ಕೋವಿಡ್‌ ನಿಯಮಗಳನ್ನು ಉಲ್ಲಂಘಿಸಿ ಘಟನಾ ಸ್ಥಳದಲ್ಲಿ ಅಧಿಕ ಸಂಖ್ಯೆಯ ಜನಸಮೂಹ ನೆರೆದಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

English summary
A stampede broke out early Friday at a Jewish religious festival attended by tens of thousands of people in northern Israel, killing nearly 40 people and leaving some 150 hospitalized, medical officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X