ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಲಂಕಾದಲ್ಲಿ ಮತ್ತೆ ಮಹೀಂದಾ ರಾಜಪಕ್ಸೆ ಅಧಿಕಾರ ಶುರು

|
Google Oneindia Kannada News

ಕೊಲಂಬೊ, ನವೆಂಬರ್.20: ನೆರೆ ರಾಷ್ಟ್ರ ಶ್ರೀಲಂಕಾಗೆ ನೂತನ ಸಾರಥಿ ಆಯ್ಕೆಯಾಗಿದ್ದಾರೆ. ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಮಹೀಂದಾ ರಾಜಪಕ್ಸೆ ಮುಂದಿನ ಪ್ರಮಾನಮಂತ್ರಿ ಎಂದು ಘೋಷಿಸಲಾಗಿದೆ.

ಇಂದು ರಾಷ್ಟ್ರಪತಿ ಗೊಟಬಯಾ ರಾಜಪಕ್ಸೆ ಈ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದಾರೆ. ಶ್ರೀಲಂಕಾದ ಮುಂದಿನ ಪ್ರಧಾನಮಂತ್ರಿಯಾಗಿ ಮಹೀಂದಾ ರಾಜಪಕ್ಸೆ ಆಯ್ಕೆಯಾಗಿದ್ದು, ನವೆಂಬರ್.21ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದ್ದಾರೆ.

IRCTC ಹೊಸ ಆಫರ್: ಶ್ರೀಲಂಕಾ-ಶ್ರೀರಾಮಾಯಣ ಯಾತ್ರೆ ಪ್ಯಾಕೇಜ್ IRCTC ಹೊಸ ಆಫರ್: ಶ್ರೀಲಂಕಾ-ಶ್ರೀರಾಮಾಯಣ ಯಾತ್ರೆ ಪ್ಯಾಕೇಜ್

ಶ್ರೀಲಂಕಾದಲ್ಲಿ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಪ್ರಧಾನಮಂತ್ರಿ ರಾನಿಲ್ ವಿಕ್ರಂ ಸಿಂಘೆ ನೇತೃತ್ವದ ಪಕ್ಷ ತೀವ್ರ ಮುಖಭಂಗ ಅನುಭವಿಸಿದೆ. ಈ ಹಿನ್ನೆಲೆಯಲ್ಲಿ ನವೆಂಬರ್.21ರಂದು ಪ್ರಧಾನಮಂತ್ರಿ ಸ್ಥಾನಕ್ಕೆ ರಾನಿಲ್ ವಿಕ್ರಮ ಸಿಂಘೆ ರಾಜೀನಾಮೆ ಸಲ್ಲಿಸಲಿದ್ದಾರೆ. ಇದರ ಬೆನ್ನಲ್ಲೇ ಮಹೀಂದಾ ರಾಜಪಕ್ಸೆ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

SriLanka Election: Mahinda Rajapakse Elected As Prime Minister

ಈ ಹಿಂದೆ ಶ್ರೀಲಂಕಾದ ಪ್ರಧಾನಮಂತ್ರಿಯಾಗಿದ್ದ ಮಹೀಂದಾ ರಾಜಪಕ್ಸೆ ಎರಡು ದಶಕಗಳ ಕಾಲ ಆಡಳಿತ ನಡೆಸಿದ್ದರು. ಜೊತೆಗೆ ಲಂಕೆಯಲ್ಲಿ ಶಾಂತಿ ಸ್ಥಾಪನೆಗೆ ಪ್ರಮುಖ ಪಾತ್ರ ವಹಿಸಿದ್ದರು. ತೆಮಿಳ್ ಟೈಗರ್ಸ್ ಅಟ್ಟಹಾಸವನ್ನು ಮಟ್ಟ ಹಾಕಲು ಶ್ರೀಲಂಕಾ ಸೇನಾ ಪಡೆಗೆ ಸಂಪೂರ್ಣ ಬೆಂಬಲ ನೀಡಿದ್ದರು.

ತಮ್ಮ ಅಧಿಕಾರದ ಅವಧಿಯಲ್ಲೇ ಈಗಿನ ಶ್ರೀಲಂಕಾ ಅಧ್ಯಕ್ಷ ಗೊಟಬಯಾ ರಾಜಪಕ್ಸೆಯನ್ನು ಸೇನೆಯ ರಕ್ಷಣಾ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದರು. ಅಂದು ಎಲ್ ಟಿಟಿಇ ಮುಖ್ಯಸ್ಥ ಪ್ರಭಾಕರ್ ರನ್ನು ಹೊಡೆದುರುಳಿಸುವ ಮೂಲಕ ತೆಮಿಳ್ ಟೈಗರ್ಸ್ ಗೆ ಸೇನಾಪಡೆ ತಕ್ಕ ಪಾಠ ಕಲಿಸಿತ್ತು.

English summary
Mahinda Rajapakse Elected As Next Prime Minister Of Srilanka. President Gotabaya rajapakse Announs Today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X