India
 • search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್‌ ಕೊರತೆಯಿಂದ ಶಾಲೆಗಳನ್ನೇ ಮುಚ್ಚಿದ ಶ್ರೀಲಂಕಾ!

|
Google Oneindia Kannada News

ಕೊಲಂಬೋ, ಜು.4: ದೇಶದಲ್ಲಿ ಇಂಧನ ಬಿಕ್ಕಟ್ಟಿನ ಸಂಕಷ್ಟದಿಂದಾಗಿ ಶ್ರೀಲಂಕಾದ ಶಿಕ್ಷಣ ಸಚಿವಾಲಯವು ಜುಲೈ 4 ರಿಂದ ಎಲ್ಲಾ ಸರ್ಕಾರಿ ಮತ್ತು ರಾಜ್ಯ ಅನುಮೋದಿತ ಖಾಸಗಿ ಶಾಲೆಗಳಿಗೆ ರಜೆಯ ವಾರವನ್ನು ಘೋಷಿಸಿದೆ. ರಜೆಯ ಮುಂದಿನ ಅವಧಿಯ ನಂತರ ಶಾಲೆಯು ಆರಂಭವಾಗುತ್ತದೆ ಎಂದು ಶ್ರೀಲಂಕಾದ ಶಿಕ್ಷಣ ಸಚಿವರು ಹೇಳಿದ್ದಾರೆ.

ಈ ಹಿಂದೆ ಜೂನ್ 18ರಂದು ಶ್ರೀಲಂಕಾ ಸರ್ಕಾರವು ಎಲ್ಲಾ ಶಾಲೆಗಳನ್ನು ಒಂದು ವಾರ ಮುಚ್ಚುವುದಾಗಿ ಘೋಷಿಸಿತ್ತು. ಶ್ರೀಲಂಕಾ ಶಿಕ್ಷಣ ಸಚಿವಾಲಯವು ಕೊಲಂಬೋ ನಗರ ಮಿತಿಗಳಲ್ಲಿನ ಎಲ್ಲಾ ಸರ್ಕಾರಿ ಮತ್ತು ಸರ್ಕಾರಿ ಅನುಮೋದಿತ ಖಾಸಗಿ ಶಾಲೆಗಳು ಮತ್ತು ಇತರ ಪ್ರಾಂತ್ಯಗಳ ಇತರ ಪ್ರಮುಖ ನಗರಗಳಲ್ಲಿನ ಶಾಲೆಗಳನ್ನು ದೀರ್ಘಾವಧಿಯ ವಿದ್ಯುತ್ ಕಡಿತದ ಕಾರಣ ಮುಂದಿನ ವಾರದಲ್ಲಿ ಮುಚ್ಚಲಾಗುವುದು ಎಂದು ಡೈಲಿ ಮಿರರ್ ವರದಿ ಮಾಡಿದೆ.

Breaking; ತೈಲ ಖಾಲಿ, ಶ್ರೀಲಂಕಾದಲ್ಲಿ ವಾಹನ ಸಂಚಾರಕ್ಕೆ ಹೊಸ ನಿಯಮBreaking; ತೈಲ ಖಾಲಿ, ಶ್ರೀಲಂಕಾದಲ್ಲಿ ವಾಹನ ಸಂಚಾರಕ್ಕೆ ಹೊಸ ನಿಯಮ

ಶ್ರೀಲಂಕಾ ಶಿಕ್ಷಣ ಸಚಿವಾಲಯದ ಕಾರ್ಯದರ್ಶಿ ನಿಹಾಲ್ ರಣಸಿಂಗ್ ಅವರು ಶಾಲೆಗಳಿಗೆ ಆನ್‌ಲೈನ್ ತರಗತಿಗಳನ್ನು ನಡೆಸುವಂತೆ ಕೇಳಿಕೊಂಡಿದ್ದಾರೆ. ಸಾರಿಗೆಯಲ್ಲಿನ ತೊಂದರೆಗಳಿಂದಾಗಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪ್ರಾಂಶುಪಾಲರ ಮೇಲೆ ಪರಿಣಾಮ ಬೀರದಂತೆ ವಿಭಾಗೀಯ ಮಟ್ಟದಲ್ಲಿ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳೊಂದಿಗೆ ತರಗತಿಗಳನ್ನು ನಡೆಸಲು ಅನುಮತಿಸಲಾಗುವುದು ಎಂದು ಹೇಳಿದರು.

ಜುಲೈ 04ರಂದು ಭಾರತದಲ್ಲಿ ಪೆಟ್ರೋಲ್-ಡೀಸೆಲ್ ದರದಲ್ಲಿ ಕೊಂಚ ಏರುಪೇರು ಜುಲೈ 04ರಂದು ಭಾರತದಲ್ಲಿ ಪೆಟ್ರೋಲ್-ಡೀಸೆಲ್ ದರದಲ್ಲಿ ಕೊಂಚ ಏರುಪೇರು

ಇನ್ನಿಲ್ಲದ ಆರ್ಥಿಕ ಬಿಕ್ಕಟ್ಟು

ಇನ್ನಿಲ್ಲದ ಆರ್ಥಿಕ ಬಿಕ್ಕಟ್ಟು

ವಾರದ ದಿನಗಳಲ್ಲಿ ಆನ್‌ಲೈನ್ ಬೋಧನೆಗೆ ಅನುಕೂಲವಾಗುವಂತೆ ಶ್ರೀಲಂಕಾದ ಲೋಕೋಪಯೋಗಿ ಆಯೋಗವು ಬೆಳಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿದ್ಯುತ್ ಕಡಿತಗೊಳಿಸದಿರಲು ಒಪ್ಪಿಕೊಂಡಿದೆ ಎಂದು ಅವರು ಘೋಷಿಸಿದ್ದಾರೆ. ಈ ವರ್ಷದ ಮಾರ್ಚ್‌ನಿಂದ ಹಿಂದೆ ಮೇಲ್ಮಧ್ಯಮ ಆದಾಯದ ದೇಶವಾಗಿದ್ದ ಶ್ರೀಲಂಕಾ, 1948ರಲ್ಲಿ ದೇಶವು ಸ್ವಾತಂತ್ರ್ಯ ಗಳಿಸಿದಾಗಿನಿಂದ ಇನ್ನಿಲ್ಲದ ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿದೆ.

ಪ್ರಧಾನಿ ಸ್ಥಾನಕ್ಕೆ ಮಹಿಂದಾ ರಾಜಪಕ್ಸೆ ರಾಜೀನಾಮೆ

ಪ್ರಧಾನಿ ಸ್ಥಾನಕ್ಕೆ ಮಹಿಂದಾ ರಾಜಪಕ್ಸೆ ರಾಜೀನಾಮೆ

ಈ ಮಧ್ಯೆ ತೀವ್ರ ಪ್ರತಿಭಟನೆಗಳು ರಾಜಕೀಯ ಅಶಾಂತಿಯನ್ನು ಹುಟ್ಟುಹಾಕಿದ್ದು, ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರ ಸಹೋದರ ಮಹಿಂದಾ ರಾಜಪಕ್ಸೆ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಮೇ ತಿಂಗಳಲ್ಲಿ ರನಿಲ್ ವಿಕ್ರಮಸಿಂಘೆ ಅವರನ್ನು ದೇಶದ ಪ್ರಧಾನಿಯಾಗಿ ನೇಮಿಸಿದರು. ಮೇ ತಿಂಗಳಲ್ಲಿ ಆಹಾರ ಹಣದುಬ್ಬರವು ಶೇಕಡಾ 57.4 ರಷ್ಟಿದೆ. ಪ್ರಮುಖ ಆಹಾರ ಪದಾರ್ಥಗಳ ಕೊರತೆ, ಹಾಗೆಯೇ ಅಡುಗೆ, ಸಾರಿಗೆ ಮತ್ತು ದೈನಂದಿನ ವಿದ್ಯುತ್ ಕಡಿತದೊಂದಿಗೆ ಉದ್ಯಮಕ್ಕೆ ಇಂಧನದ ಕೊರತೆ ವ್ಯಾಪಕವಾಗಿ ಇದೆ.

ಸಾಲದ ಬಾಧ್ಯತೆ ಪೂರೈಸುವಲ್ಲಿ ವಿಫಲತೆ

ಸಾಲದ ಬಾಧ್ಯತೆ ಪೂರೈಸುವಲ್ಲಿ ವಿಫಲತೆ

ಉತ್ಪಾದನೆಗೆ ಮೂಲ ಒಳಹರಿವಿನ ಅಲಭ್ಯತೆ, ಮಾರ್ಚ್ 2022ರಿಂದ ಕರೆನ್ಸಿಯ ಶೇಕಡಾ 80ರಷ್ಟು ಕುಸಿತ, ವಿದೇಶಿ ಮೀಸಲು ಕೊರತೆ ಮತ್ತು ಅದರ ಅಂತರರಾಷ್ಟ್ರೀಯ ಸಾಲದ ಬಾಧ್ಯತೆಗಳನ್ನು ಪೂರೈಸುವಲ್ಲಿ ದೇಶದ ವಿಫಲತೆಯಿಂದಾಗಿ ಆರ್ಥಿಕತೆಯು ತೀಕ್ಷ್ಣವಾದ ಸಂಕಷ್ಟಕ್ಕೆ ಒಳಗಾಗುತ್ತಿದೆ. ಆರ್ಥಿಕ ಬಿಕ್ಕಟ್ಟು ವಿಶೇಷವಾಗಿ ಆಹಾರ ಭದ್ರತೆ, ಕೃಷಿ, ಜೀವನೋಪಾಯ ಮತ್ತು ಆರೋಗ್ಯ ಸೇವೆಗಳ ಮೇಲೆ ಪ್ರಭಾವ ಬೀರಿದೆ. ಕಳೆದ ಸುಗ್ಗಿಯ ಋತುವಿನಲ್ಲಿ ಆಹಾರ ಉತ್ಪಾದನೆಯು ಕಳೆದ ವರ್ಷಕ್ಕಿಂತ ಶೇ. 40ರಿಂದ 50ರಷ್ಟು ಕಡಿಮೆಯಾಗಿದೆ. ಪ್ರಸ್ತುತ ಕೃಷಿ ಋತುವಿನಲ್ಲಿ ಬೀಜಗಳು, ರಸಗೊಬ್ಬರಗಳು, ಇಂಧನ ಮತ್ತು ಸಾಲದ ಕೊರತೆಯೊಂದಿಗೆ ದೇಶವು ಭಾರೀ ಸಂಕಷ್ಟಕ್ಕೆ ತುತ್ತಾಗಿದೆ.

ತೈಲ ಸಂಗ್ರಹ ಸಂಪೂರ್ಣ ಖಾಲಿ

ತೈಲ ಸಂಗ್ರಹ ಸಂಪೂರ್ಣ ಖಾಲಿ

ಕಳೆದ ತಿಂಗಳು ಇದೇ ಇಂಧನ ಕೊರೆತೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಶೀಲಂಕಾ ತುರ್ತು ವಾಹನಗಳ ಸಂಚಾರಕ್ಕೆ ಮಾತ್ರ ಅನುಮತಿ ನೀಡಿತ್ತು. ಆರೋಗ್ಯ, ಕಾನೂನು & ಸುವ್ಯವಸ್ಥೆ, ಬಂದರು, ವಿಮಾನ ನಿಲ್ದಾಣ, ಆಹಾರ ಸರಬರಾಜು ಮತ್ತು ಕೃಷಿ ಸಂಬಂಧಿತ ವಾಹನಗಳಿಗೆ ಮಾತ್ರ ಅವಕಾಶವನ್ನು ನೀಡಲಾಗಿತ್ತು. ಅವಾಗಲು ಕೂಡ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿರುವ ಕಾರಣ ಶಾಲೆಗಳನ್ನು ಮುಚ್ಚಲಾಗಿತ್ತು. ದೇಶದಲ್ಲಿ ತೈಲ ಸಂಗ್ರಹ ಸಂಪೂರ್ಣ ಖಾಲಿಯಾಗಿ ಶೀಲಂಕಾದ 22 ಮಿಲಿಯನ್ ಜನರಿಗೆ ಭಾರೀ ಸಮಸ್ಯೆಗಳು ಉಂಟಾಗಿದ್ದವು.

   Kohli ಆಟದ ಬಗ್ಗೆ ಚರ್ಚೆ, Rohit ವಾಪಸ್ Reverse swing 01 | *CricketWrap | OneIndia Kannada
   English summary
   SriLanka's Ministry of Education has declared a holiday week for all government and state approved private schools from July 4 due to the woes of the energy crisis.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X