ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಲಂಕಾ ಸರಣಿ ಸ್ಫೋಟ ಹಿಂದಿರುವ ಸಂಘಟನೆಗೆ ತಮಿಳುನಾಡಿನ ಲಿಂಕ್?

|
Google Oneindia Kannada News

ಚೆನ್ನೈ, ಏಪ್ರಿಲ್ 22: ಶ್ರೀಲಂಕಾದಲ್ಲಿ ಭಾನುವಾರದಂದು ಈಸ್ಟರ್ ಸಂಭ್ರಮಾಚರಣೆ ಸಂದರ್ಭದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ಏರಿಕೆಯಾಗುತ್ತಲೆ ಇದೆ. ಈ ನಡುವೆ ಈ ವಿಧ್ವಂಸಕ ಸಂಬಂಧ 7 ಮಂದಿ ಶಂಕಿತರನ್ನು ಬಂಧಿಸಲಾಗಿದೆ ಎಂದು ಶ್ರೀಲಂಕಾದ ರಕ್ಷಣಾ ಸಚಿವರು ತಿಳಿಸಿದ್ದಾರೆ. ಇದು ಯಾವ ಉಗ್ರ ಸಂಘಟನೆಯ ಕೃತ್ಯ ಎಂಬುದು ಇನ್ನು ಬಹಿರಂಗವಾಗಿಲ್ಲ. ಆದರೆ, ಸದ್ಯದ ಮಾಹಿತಿಯಂತೆ ತೌಹಿದ್ ಜಮಾತ್ ಸಂಘಟನೆಯ ಕೃತ್ಯ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಇಸ್ಲಾಮಿಕ್ ಉಗ್ರ ಸಂಘಟನೆ ಐಎಸ್ಐಎಸ್ ಕೃತ್ಯದಂತೆ ತೋರುತ್ತಿದೆ. ತೌಹಿದ್ ಜಮಾತ್ ಸಂಘಟನೆ ಬಗ್ಗೆ ಹೆಚ್ಚಿನ ಸಂಶಯವಿದ್ದು, ತಮಿಳುನಾಡಿನಲ್ಲೂ ತನ್ನ ಅಸ್ತಿತ್ವವನ್ನು ಈ ಸಂಘಟನೆ ಹೊಂದಿದೆ ಎಂದು ತನಿಖಾ ಸಂಸ್ಥೆ ಮೂಲಗಳು ಹೇಳಿವೆ.

ಶ್ರೀಲಂಕಾದಲ್ಲಿ ಇಲ್ಲಿ ತನಕ ಸಂಭವಿಸಿದ ಭೀಕರ ಸ್ಫೋಟಗಳು ಶ್ರೀಲಂಕಾದಲ್ಲಿ ಇಲ್ಲಿ ತನಕ ಸಂಭವಿಸಿದ ಭೀಕರ ಸ್ಫೋಟಗಳು

ಸದ್ಯ ಕೆಲವೆಡೆ ಕರ್ಫ್ಯೂ ಹಿಂಪಡೆಯಲಾಗಿದೆ. ಆದರೆ, ಎಲ್ಲೆಡೆ ಸೇನೆಯನ್ನು ನಿಯೋಜಿಸಲಾಗಿದ್ದು, ಕೊಲಂಬೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಮಿಲಿಟರಿ ವಕ್ತಾರರು ತಿಳಿಸಿದ್ದಾರೆ.

ಹತ್ತು ವರ್ಷಗಳ ಹಿಂದೆ ಲಿಬೆರೇಷನ್ ಟಗರ್ಸ್ ಆಫ್ ತಮಿಳ್ ಈಳಂ

ಹತ್ತು ವರ್ಷಗಳ ಹಿಂದೆ ಲಿಬೆರೇಷನ್ ಟಗರ್ಸ್ ಆಫ್ ತಮಿಳ್ ಈಳಂ

ಹತ್ತು ವರ್ಷಗಳ ಹಿಂದೆ ಲಿಬೆರೇಷನ್ ಟಗರ್ಸ್ ಆಫ್ ತಮಿಳ್ ಈಳಂ(ಎಲ್ ಟಿಟಿಇ) ದಾಳಿ ನಡೆದಿದ್ದು ಬಿಟ್ಟರೆ, ಈ ರೀತಿ ದಾಳಿಯನ್ನು ದ್ವೀಪರಾಷ್ಟ್ರ ಕಂಡಿರಲಿಲ್ಲ. ಆದರೆ, ಸರಣಿ ಸ್ಫೋಟದಲ್ಲಿ ಬಳಸಲಾಗಿರುವ ಸ್ಫೋಟಕವಸ್ತುಗಳು ಹಾಗೂ ಸ್ಫೋಟ ಸಂಭವಿಸಿದ ರೀತಿ, ಚರ್ಚ್ ಗುರಿಯನ್ನಾಗಿಸಿರುವುದನ್ನು ಗಮನಿಸಿದರೆ ಇದು ಇಸ್ಲಾಮಿಕ್ ಸಂಘಟನೆ ಕೃತ್ಯ ಎಂದು ಅನುಮಾನ ವ್ಯಕ್ತವಾಗಿದೆ.

ಶ್ರೀಲಂಕಾದಲ್ಲಿ ಇಲ್ಲಿ ತನಕ ಸಂಭವಿಸಿದ ಭೀಕರ ಸ್ಫೋಟಗಳು ಶ್ರೀಲಂಕಾದಲ್ಲಿ ಇಲ್ಲಿ ತನಕ ಸಂಭವಿಸಿದ ಭೀಕರ ಸ್ಫೋಟಗಳು

ವಹಾಬಿ ಜತೆ ಸಖ್ಯ ಹೊಂದಿರುವ ಶ್ರೀಲಂಕಾ ತೌಹೀದ್ ಜಮಾತ್

ವಹಾಬಿ ಜತೆ ಸಖ್ಯ ಹೊಂದಿರುವ ಶ್ರೀಲಂಕಾ ತೌಹೀದ್ ಜಮಾತ್

ವಹಾಬಿ ಜತೆ ಸಖ್ಯ ಹೊಂದಿರುವ ಶ್ರೀಲಂಕಾ ತೌಹೀದ್ ಜಮಾತ್ (ಎಸ್ಎಲ್ ಟಿಜೆ) ಈಗ ಶ್ರೀಲಂಕಾದ ಪೂರ್ವ ಪ್ರಾಂತ್ಯದಲ್ಲಿ ಸಕ್ರಿಯಾಗಿದ್ದು, ಶರಿಯಾರ್ ಕಾನೂನು, ಮಹಿಳೆಯರಿಗೆ ಬುರ್ಖಾ ಕಡ್ಡಾಯ, ಮೂಲಭೂತವಾದ ಪ್ರಸಾರ ಮಾಡಲು ಹೆಚ್ಚು ಮಸೀದಿ ನಿರ್ಮಾಣ ಹೀಗೆ ಅನೇಕ ಕಾರ್ಯಗಳಲ್ಲಿ ತೊಡಗಿಕೊಂಡಿವೆ.

ಶ್ರೀಲಂಕಾ ಸ್ಫೋಟ: ದಾಳಿಗೂ ಮೊದಲು ಉಗ್ರನನ್ನು ಪ್ರಶ್ನಿಸಿದ್ದ ಪಾದ್ರಿ ಶ್ರೀಲಂಕಾ ಸ್ಫೋಟ: ದಾಳಿಗೂ ಮೊದಲು ಉಗ್ರನನ್ನು ಪ್ರಶ್ನಿಸಿದ್ದ ಪಾದ್ರಿ

22 ಮಿಲಿಯನ್ ಜನಸಂಖ್ಯೆಯಲ್ಲಿ 70% ಬೌದ್ಧ ಧರ್ಮಿಯರು

22 ಮಿಲಿಯನ್ ಜನಸಂಖ್ಯೆಯಲ್ಲಿ 70% ಬೌದ್ಧ ಧರ್ಮಿಯರು

ಶ್ರೀಲಂಕಾದ 22 ಮಿಲಿಯನ್ ಜನಸಂಖ್ಯೆಯಲ್ಲಿ 70% ಬೌದ್ಧ ಧರ್ಮಿಯರು, 12.6%ರಷ್ಟು ಹಿಂದು, 9.7% ಮುಸ್ಲಿಮರು ಹಾಗೂ 7.6% ಕ್ರೈಸ್ತರಿದ್ದಾರೆ. ಇತ್ತೀಚೆಗೆ ಬಹುಸಂಖ್ಯಾತ ಬೌದ್ಧ ಧರ್ಮೀಯರು ಹಾಗೂ ಮುಸ್ಲಿಮರ ನಡುವೆ ಸಂಘರ್ಷ ಉಂಟಾಗಿತ್ತು. ಆಗ ಕೂಡಾ ಎಸ್ ಎಲ್ ಟಿ ಜೆ ಮೇಲೆ ಅನುಮಾನ ವ್ಯಕ್ತವಾಗಿತ್ತು.

ಭಾನುವಾರದಂದು ಕ್ರೈಸ್ತರ ಸಂಭ್ರಮ

ಭಾನುವಾರದಂದು ಕ್ರೈಸ್ತರ ಸಂಭ್ರಮ

ಆದರೆ, ಭಾನುವಾರದಂದು ಕ್ರೈಸ್ತರ ಸಂಭ್ರಮವನ್ನು ಹಾಳುಗೆಡವಲು ಯತ್ನಿಸಿದವರು ಸಣ್ಣ ಗುಂಪಾಗಿರಲು ಸಾಧ್ಯವಿಲ್ಲ. ದೊಡ್ಡ ಮಟ್ಟದ ಸಂಘಟನೆಯ ನೆರವು ಸಿಕ್ಕಿರಬಹುದು ಎಂದು ಅನುಮಾನಿಸಲಾಗಿದೆ. ಸದ್ಯ ತನಿಖೆ ಜಾರಿಯಲ್ಲಿದ್ದು, ಭಾರತ ಸರ್ಕಾರ ಕೂಡಾ ಎಲ್ಲಾ ರೀತಿ ನೆರವು ನೀಡಲು ಮುಂದಾಗಿದೆ.

English summary
Sri Lankan Blast : Intelligence experts shortlists Thawheed Jamaat a hardline group with a significant presence in Tamil Nadu too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X