ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಕಿದ ನಾಯಿಗಳನ್ನೇ ಉಗ್ರರ ವಿರುದ್ಧದ ಹೋರಾಟಕ್ಕೆ ಕಾಣಿಕೆ ನೀಡಿದ ಮಹಿಳೆ

|
Google Oneindia Kannada News

ಕೊಲಂಬೋ, ಏಪ್ರಿಲ್ 29: ಶ್ರೀಲಂಕಾದ ಮಹಿಳೆಯೊಬ್ಬರು ತಮ್ಮ ಬಳಿ ಇರುವ ಐದು ಜರ್ಮನ್ ಷೆಫರ್ಡ್ ನಾಯಿಗಳನ್ನು ಸ್ಫೋಟಕ ಸಾಧನಗಳ ಪತ್ತೆ ತರಬೇತಿಗಾಗಿ ಅಲ್ಲಿನ ಸೇನೆಗೆ ಉಡುಗೊರೆಯಾಗಿ ನೀಡಿದ್ದಾರೆ.

ಈಸ್ಟರ್‌ ಭಾನುವಾರದಂದು ನಡೆದ ಭೀಕರ ಸರಣಿ ಬಾಂಬ್ ಸ್ಫೋಟ ಶ್ರೀಲಂಕಾ ಮಾತ್ರವಲ್ಲ, ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ದೇಶದ ರಕ್ಷಣೆಗಾಗಿ ಲಂಕಾದ ಜನರು ಇಂತಹ ನಡೆಗಳನ್ನು ತೆಗೆದುಕೊಳ್ಳುವ ಮೂಲಕ ದೇಶಪ್ರೇಮ ಮೆರೆಯುತ್ತಿದ್ದಾರೆ.

30 ಮಂದಿ ಜೀವ ಉಳಿಸಿ, ಬೆಂಕಿಯಲ್ಲಿ ಬೆಂದು ಪ್ರಾಣಬಿಟ್ಟ ಶ್ವಾನ30 ಮಂದಿ ಜೀವ ಉಳಿಸಿ, ಬೆಂಕಿಯಲ್ಲಿ ಬೆಂದು ಪ್ರಾಣಬಿಟ್ಟ ಶ್ವಾನ

ಅಂತಾರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯವೊಂದರ ಉಪನ್ಯಾಸಕಿಯಾಗಿರುವ ಡಾ. ಶಿರು ವಿಜೆಮನ್ನೆ ತಾವು ಸಾಕಿದ್ದ ಐದು ನಾಯಿಗಳನ್ನು ತುರ್ತು ಸಂದರ್ಭಗಳಿಗೆ ಬಳಸಿಕೊಳ್ಳಲು ಅನುಕೂಲವಾಗುವಂತೆ ಸೇನಾ ಪಡೆಗೆ ನೀಡಿದ್ದಾರೆ. ಈ ಐದೂ ಜರ್ಮನ್ ಷೆಫರ್ಡ್ ನಾಯಿಗಳು ಒಂದೇ ಕುಟುಂಬಕ್ಕೆ ಸೇರಿವೆ. ಎರಡು ವರ್ಷದ ಎರಡು ದೊಡ್ಡ ನಾಯಿಗಳು ಮತ್ತು ಅರು ತಿಂಗಳ ಮೂರು ಮರಿಗಳನ್ನು ಕೊಲಂಬೋದ ನರೆಹೆನ್ಪಿಟಾದಲ್ಲಿರುವ ತಮ್ಮ ನಿವಾಸದಲ್ಲಿ ಮಹಿಳೆ, ಬ್ರಿಗೇಡಿಯರ್ ಎಎನ್ ಅಮರಶೇಖರ್ ಅವರಿಗೆ ಹಸ್ತಾಂತರಿಸಿದರು.

Sri lanka woman gifts five German shepherd dogs to Army for bomb detection training

ಸ್ಫೋಟಕಗಳು ಮತ್ತು ಮಾದಕ ದ್ರವ್ಯಗಳನ್ನು ಪತ್ತೆಹಚ್ಚುವುದರಲ್ಲಿ ಸೇನೆ ನಿರ್ವಹಿಸುತ್ತಿರುವ ಪಾತ್ರದಿಂದ ತಾವು ಪ್ರಭಾವಿತರಾಗಿರುವುದಾಗಿ ಮಹಿಳೆ ತಿಳಿಸಿದ್ದಾರೆ.

ಬುದ್ಧಿ ಕೌಶಲ್ಯ ಪ್ರದರ್ಶಿಸಿ ಜನರ ಚಪ್ಪಾಳೆ ಗಿಟ್ಟಿಸಿದ ಪೊಲೀಸ್ ನಾಯಿಗಳುಬುದ್ಧಿ ಕೌಶಲ್ಯ ಪ್ರದರ್ಶಿಸಿ ಜನರ ಚಪ್ಪಾಳೆ ಗಿಟ್ಟಿಸಿದ ಪೊಲೀಸ್ ನಾಯಿಗಳು

ಈ ನಾಯಿಗಳನ್ನು ಸ್ಕ್ವಾಡ್ರನ್ ಆಫ್ ಶ್ರೀಲಂಕಾ ಎಂಜಿನಿಯರ್ಸ್ (ಎಸ್‌ಎಲ್‌ಇ)ದಲ್ಲಿ ಸ್ಫೋಟಕ ಸಾಧನಗಳನ್ನು ವಿಫಲಗೊಳಿಸುವುದರಲ್ಲಿ ತರಬೇತುಗೊಳಿಸಲಾಗುತ್ತದೆ. ಕೆಲವು ವಾರಗಳಲ್ಲಿಯೇ ಅವುಗಳಿಗೆ ನಿರ್ದಿಷ್ಟ ಕಾರ್ಯಗಳನ್ನು ವಹಿಸಲಾಗುತ್ತದೆ ಎಂದು ಸೇನೆ ತಿಳಿಸಿದೆ.

English summary
A woman has gifted her five German Shepherd dogs to Sri Lankan army for explosive detection training.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X