ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಮುಂದೆ ಶ್ರೀಲಂಕಾದ ಎಲ್ಲಾ ಮದರಸಾಗಳು ಧಾರ್ಮಿಕ ಇಲಾಖೆ ವ್ಯಾಪ್ತಿಗೆ

|
Google Oneindia Kannada News

ಕೊಲಂಬೋ, ಮೇ 4: ಇನ್ನುಮುಂದೆ ಶ್ರೀಲಂಕಾದ ಎಲ್ಲಾ ಮದರಸಾಗಳು ಧಾರ್ಮಿಕ ಇಲಾಖೆ ವ್ಯಾಪ್ತಿಗೆ ಒಳಪಡಲಿವೆ ಎಂದು ಶ್ರೀಲಂಕಾ ಸರ್ಕಾರ ತಿಳಿಸಿದೆ.

ಶ್ರೀಲಂಕಾದ ಕೊಲಂಬೋದ ಚರ್ಚ್ , ಹೋಟೆಲ್‌ಗಳ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆದು 250ಕ್ಕೂ ಹೆಚ್ಚು ಅಮಾಯಕರು ಮೃತಪಟ್ಟ ಬಳಿಕ, ಶ್ರೀಲಂಕಾದಲ್ಲಿ ಬುರ್ಖಾ ಅಥವಾ ಮುಖವನ್ನು ಮುಚ್ಚುವ ರೀತಿಯಲ್ಲಿ ಉಡುಗೆ ತೊಡುವಂತಿಲ್ಲ ಎಂದು ಆದೇಶಿಸಿತ್ತು.

ಈ ಉಗ್ರನನ್ನು ಶ್ರೀಲಂಕಾ ಕಡೆಗಣಿಸಿದ್ದೇ 253 ಜೀವಗಳ ಸಾವಿಗೆ ಕಾರಣವಾಯ್ತು ಈ ಉಗ್ರನನ್ನು ಶ್ರೀಲಂಕಾ ಕಡೆಗಣಿಸಿದ್ದೇ 253 ಜೀವಗಳ ಸಾವಿಗೆ ಕಾರಣವಾಯ್ತು

ಇಷ್ಟು ದಿನ ಶಿಕ್ಷಣ ಇಲಾಖೆಯಡಿಯಲ್ಲಿದ್ದ ಮದರಸಾಗಳನ್ನು ಧಾರ್ಮಿಕ ಮತ್ತು ಸಂಸ್ಕೃತಿ ಇಲಾಖೆಯಡಿಗೆ ತಂದಿದೆ.ಈ ಬಗ್ಗೆ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಮಾಹಿತಿ ನೀಡಿದ್ದು, ಉಗ್ರ ದಾಳಿಯಲ್ಲಿ ಕೆಲ ಮದರಸಾಗಳ ಕೈವಾಡದ ಕುರಿತು ತನಿಖಾ ಸಂಸ್ಥೆಗಳು ಶಂಕಿಸಿವೆ.

Sri Lanka to regulate Madrasas under religious and cultural department

ಅಲ್ಲದೆ ಕೆಲ ಮದರಸಾಗಳ ಕಾರ್ಯ ನಿರ್ವಹಣೆ ಮೇಲೂ ತನಿಖಾ ಸಂಸ್ಥೆ ಶಂಕೆ ವ್ಯಕ್ತಪಡಿಸಿದ್ದು, ಈ ಕಾರಣಕ್ಕೆ ಶ್ರೀಲಂಕಾ ಸರ್ಕಾರ ಮದರಸಾಗಳನ್ನು ಶಿಕ್ಷಣ ಇಲಾಖೆಯಿಂದ ಧಾರ್ಮಿಕ ಮತ್ತು ಸಂಸ್ಕೃತಿ ಇಲಾಖೆಯಡಿಗೆ ತಂದಿದೆ.

ಇದೇ ವಿಚಾರವಾಗಿ ಮಾದ್ಯಮಗಳೊಂದಿಗೆ ಮಾತನಾಡಿರುವ ಶ್ರೀಲಂಕಾ ಶಿಕ್ಷಣ ಸಚಿವ ಅಕಿಲ ಕರಿಯಮಸಂ ಅವರು, ಪ್ರಧಾನಿ ವಿಕ್ರಮ ಸಿಂಘೆ ಅವರು, ಮದರಸಾಗಳನ್ನು ಮುಸ್ಲಿಂ ಧಾರ್ಮಿಕ ಮತ್ತು ಸಂಸ್ಕ್ರೃತಿ ಇಲಾಖೆಯಡಿಗೆ ತಂದಿದ್ದಾರೆ. ಅಲ್ಲದೆ ಈ ಕುರಿತ ಯಾವುದೇ ವಿವಾದಗಳನ್ನು ನಿರ್ವಹಿಸುವಂತೆ ಇಲಾಖೆಗೆ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.

ಆತ್ಮಾಹುತಿ ಬಾಂಬ್ ದಾಳಿ: ಶ್ರೀಲಂಕಾದಲ್ಲಿ ಇಂದಿನಿಂದ ಬುರ್ಖಾ ನಿಷೇಧಆತ್ಮಾಹುತಿ ಬಾಂಬ್ ದಾಳಿ: ಶ್ರೀಲಂಕಾದಲ್ಲಿ ಇಂದಿನಿಂದ ಬುರ್ಖಾ ನಿಷೇಧ

ಶ್ರೀಲಂಕಾಗೆ ಪ್ರವಾಸದ ವೀಸಾ ಮೂಲಕ ಪ್ರವೇಶ ಮಾಡಿರುವ ವಿದೇಶಿ ಇಸ್ಲಾಮಿಕ್ ಪ್ರಚಾರಕರನ್ನು ಶೀಘ್ರವೇ ಗುರುತಿಸಿ ಗಡಿಪಾರು ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

English summary
Madarasas in Sri Lanka should be regulate by the Muslim religious and cultural affairs ministry ad not by the education ministry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X