• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಚಿತ.. ಉಚಿತ..! ಶ್ರೀಲಂಕಾಗೆ 5 ಲಕ್ಷ ಡೋಸ್ ಕೊರೊನಾ ಲಸಿಕೆ ಉಚಿತ!

|

ನವದೆಹಲಿ, ಜನವರಿ.24: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಜಗತ್ತಿನಾದ್ಯಂತ ಹೋರಾಟ ಮುಂದುವರಿದಿದೆ. ಶ್ರೀಲಂಕಾಗೆ ಲಸಿಕೆಯನ್ನೇ ಉಡುಗೊರೆಯಾಗಿ ನೀಡುವ ಬಗ್ಗೆ ಭಾರತೀಯ ಕೇಂದ್ರ ಸರ್ಕಾರ ಘೋಷಿಸಿದೆ.

ಮುಂದಿನ ವಾರದಲ್ಲಿ ನೆರೆಯ ಶ್ರೀಲಂಕಾಗೆ 5 ಲಕ್ಷ ಡೋಸ್ ಕೊವಿಶೀಲ್ಡ್ ಲಸಿಕೆಯನ್ನು ಕಳುಹಿಸಿ ಕೊಡಲಾಗುತ್ತದೆ. ಭಾರತವು ಕಳುಹಿಸುವ ಕೊರೊನಾ ಲಸಿಕೆಯು ಜನವರಿ.27ರಂದು ಇಲ್ಲಿಗೆ ತಲುಪಲಿದೆ ಎಂದು ಶ್ರೀಲಂಕಾದ ಅಧ್ಯಕ್ಷ ಗೋತಬಯಾ ರಾಜಪಕ್ಸೆ ತಿಳಿಸಿದ್ದಾರೆ.

ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನಿಕಾ ಸಂಶೋಧಿಸಿರುವ ಮತ್ತು ಮಹಾರಾಷ್ಟ್ರ ಪುಣೆಯ ಸೆರಮ್ ಇನ್ಸ್ ಟಿಟ್ಯೂಟ್ ನಲ್ಲಿ ಉತ್ಪಾದನೆ ಆಗಿರುವ ಕೊವಿಶೀಲ್ಡ್ ಲಸಿಕೆ(Made In India)ಯನ್ನು ಇದುವರೆಗೂ ಏಳು ರಾಷ್ಟ್ರಗಳಿಗೆ ಕಳುಹಿಸಿ ಕೊಡಲಾಗಿದೆ. ಶ್ರೀಲಂಕಾವು ಲಸಿಕೆಯನ್ನು ಉಡುಗೊರೆಯಾಗಿ ಪಡೆಯುತ್ತಿರುವ ಎಂಟನೇ ರಾಷ್ಟ್ರವಾಗಿದೆ.

ಯಾವ ರಾಷ್ಟ್ರಕ್ಕೆ ಎಷ್ಟು ಡೋಸ್ ಕೊರೊನಾ ಲಸಿಕೆ?

ಯಾವ ರಾಷ್ಟ್ರಕ್ಕೆ ಎಷ್ಟು ಡೋಸ್ ಕೊರೊನಾ ಲಸಿಕೆ?

ಕಳೆದ ಜನವರಿ.16ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮೊದಲ ಬಾರಿಗೆ ಕೊರೊನಾ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ್ದರು. ನೆರೆ ರಾಷ್ಟ್ರಗಳಿಗೆ ಲಸಿಕೆಯನ್ನು ಉಡುಗೊರೆಯಾಗಿ ನೀಡುವ ಬಗ್ಗೆ ನಂತರದಲ್ಲಿ ಘೋಷಿಸಲಾಗಿತ್ತು. ಭೂತಾನ್ 1,50,000 ಡೋಸ್, ಮಾಲ್ಡೀವ್ಸ್ 1,00,000 ಡೋಸ್, ನೇಪಾಳಕ್ಕೆ 10 ಲಕ್ಷ ಡೋಸ್, ಬಾಂಗ್ಲಾದೇಶಕ್ಕೆ 20 ಲಕ್ಷ ಡೋಸ್, ಮಯನ್ಮಾರ್ ದೇಶಕ್ಕೆ 1.50 ಲಕ್ಷ ಡೋಸ್, ಸೀಶೆಲ್ಸ್ 50,000 ಡೋಸ್ ಹಾಗೂ ಮಾರಿಷಸ್‌ಗೆ 1,00,000 ಡೋಸ್ ಕೊವಿಶೀಲ್ಡ್ ಲಸಿಕೆಯನ್ನು ರವಾನಿಸಲಾಗಿದೆ.

ಶ್ರೀಲಂಕಾದಲ್ಲಿ ಭಾರತೀಯ ಲಸಿಕೆ ಸ್ವೀಕರಿಸಲು ಅನುಮತಿ

ಶ್ರೀಲಂಕಾದಲ್ಲಿ ಭಾರತೀಯ ಲಸಿಕೆ ಸ್ವೀಕರಿಸಲು ಅನುಮತಿ

ಭಾರತದಲ್ಲಿ ಉತ್ಪಾದನೆ ಆಗಿರುವ ಕೊವಿಶೀಲ್ಡ್ ಲಸಿಕೆ ರವಾನಿಸುವುದಕ್ಕೆ ಶ್ರೀಲಂಕಾದಲ್ಲಿನ ವೈದ್ಯಕೀಯ ಪ್ರಾಧಿಕಾರ ಅನುಮೋದನೆ ನೀಡುವುದಕ್ಕೆ ಎದುರು ನೋಡಲಾಗುತ್ತಿತ್ತು. ಕಳೆದ ಜನವರಿ.22ರ ಶುಕ್ರವಾರ ಕೊವಿಶೀಲ್ಡ್ ಲಸಿಕೆಯು ಸುರಕ್ಷಿತವಾಗಿದ್ದು, ಶ್ರೀಲಂಕಾದಲ್ಲಿ ತುರ್ತು ಸಂದರ್ಭದಲ್ಲಿ ಬಳಕೆಗೆ ಅಲ್ಲಿನ ರಾಷ್ಟ್ರೀಯ ವೈದ್ಯಕೀಯ ಸಂರಕ್ಷಣಾ ಪ್ರಾಧಿಕಾರ ಅನುಮೋದನೆ ನೀಡಿತ್ತು. ಈ ಹಿನ್ನೆಲೆ ಲಸಿಕೆ ರವಾನಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.

ಭಾರತದ ಉಡುಗೊರೆ ಸ್ವಾಗತಿಸಿದ ರಾಯಭಾರಿ

ಕೊರೊನಾವೈರಸ್ ಸೋಂಕಿನ ನಿಯಂತ್ರಣಕ್ಕೆ ತುರ್ತು ಸಂದರ್ಭಗಳಲ್ಲಿ ಬಳಸುವ ಕೊವಿಶೀಲ್ಡ್ ಲಸಿಕೆಯನ್ನು ಶ್ರೀಲಂಕಾಗೆ ರವಾನಿಸುತ್ತಿರುವ ಭಾರತದ ನಡೆಯನ್ನು ಶ್ರೀಲಂಕಾದಲ್ಲಿರುವ ಭಾರತೀಯ ರಾಯಭಾರಿ ಸ್ವಾಗತಿಸಿದ್ದಾರೆ. ಲಸಿಕೆಯನ್ನು ಯಾವ ರೀತಿಯಲ್ಲಿ ಯಾವ ಮಾರ್ಗದಲ್ಲಿ ತರಲಾಗುತ್ತದೆ. ಆ ಲಸಿಕೆಯನ್ನು ಹೇಗೆ ಮತ್ತು ಯಾರು ಸ್ವಾಗತಿಸಿಕೊಳ್ಳಲಿದ್ದಾರೆ ಎಂಬುದರ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

13 ರಾಷ್ಟ್ರಗಳ ವಿದೇಶಿ ವೈದ್ಯಕೀಯ ಸಿಬ್ಬಂದಿಗೆ ತರಬೇತಿ

13 ರಾಷ್ಟ್ರಗಳ ವಿದೇಶಿ ವೈದ್ಯಕೀಯ ಸಿಬ್ಬಂದಿಗೆ ತರಬೇತಿ

ಕಳೆದ ಜನವರಿ.19 ಮತ್ತು ಜನವರಿ.20ರಂದು ಭಾರತದಲ್ಲಿ 13 ರಾಷ್ಟ್ರಗಳ ಪ್ರತಿನಿಧಿಗಳಿಗೆ ಕೊರೊನಾವೈರಸ್ ಲಸಿಕೆ ಬಗ್ಗೆ ತರಬೇತಿ ನೀಡಲಾಗಿತ್ತು. ಈ 13 ರಾಷ್ಟ್ರಗಳ ಪ್ರತಿನಿಧಿಗಳಲ್ಲಿ ಶ್ರೀಲಂಕಾದ ಪ್ರತಿನಿಧಿ ಕೂಡಾ ಒಬ್ಬರಾಗಿದ್ದರು. ಎರಡು ದಿನಗಳ ತರಬೇತಿ ಶಿಬಿರದಲ್ಲಿ ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ಮೊಂಗಾಲಿಯಾ, ಮಯನ್ಮಾರ್, ನೇಪಾಳ, ಬಹ್ರೆನ್, ಬ್ರೆಜಿಲ್, ಮಾರಿಷಸ್, ಮೊರೊಕ್ಕೊ, ಓಮನ್, ಸೀಶೆಲ್ಸ್ ಮತ್ತು ಶ್ರೀಲಂಕಾದ ಪ್ರತಿನಿಧಿಗಳು ಭಾಗವಹಿಸಿದ್ದರು.

English summary
Sri Lanka To Receive India's 'Gift' Of Coronavirus Vaccines On January 27. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X