ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Sri Lanka Crisis- ಸರಕಾರಿ ನೌಕರರಿಗೆ ಸಂಬಳ ನೀಡಲು ನೋಟು ಮುದ್ರಣಕ್ಕೆ ಮುಂದಾದ ಶ್ರೀಲಂಕಾ

|
Google Oneindia Kannada News

ಕೊಲಂಬೊ: ದೇಶದಲ್ಲಿ ಭಾರಿ ಆರ್ಥಿಕ ಮುಗ್ಗಟ್ಟು ತಲೆದೂರಿದ್ದು, ಸರ್ಕಾರಿ ನೌಕರರಿಗೆ ವೇತನ ನೀಡಲು ನೋಟು ಮುದ್ರಿಸಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಶ್ರೀಲಂಕಾದ ನೂತನ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ತಿಳಿಸಿದ್ದಾರೆ.

ಶ್ರೀಲಂಕಾ ನೂತನ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ವಿರುದ್ಧವೂ ರೊಚ್ಚಿಗೆದ್ದ ಜನತೆಶ್ರೀಲಂಕಾ ನೂತನ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ವಿರುದ್ಧವೂ ರೊಚ್ಚಿಗೆದ್ದ ಜನತೆ

ಸ್ವಾತಂತ್ರ್ಯ ನಂತರ ಹಿಂದೆಂದೂ ಕಂಡರಿಯದಂತಹ ಭೀಕರ ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿದೆ. ದೇಶಾದ್ಯಂತ ಉಗ್ರಪ್ರತಿಭಟನೆ ನಡೆಯುತ್ತಿದೆ. ಪ್ರಸ್ತುತ ಆರ್ಥಿಕ ಪರಿಸ್ಥಿತಿ ಕುರಿತು ಮಾತನಾಡಿರುವ ಅವರು ದೇಶ ಸಾಲದಲ್ಲೇ ಮುಳುಗಿದ್ದು, ಆರ್ಥಿಕ ಪರಿಸ್ಥಿತಿ ಸುಧಾರಿಸುವ ಸಲುವಾಗಿ ಸರಕಾರ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯನ್ನು ಮಾರಾಟ ಮಾಡಲು ಯೋಜಿಸುತ್ತಿದೆ ಎಂದು ತಿಳಿಸಿದ್ದಾರೆ. 2021ರ ಮಾರ್ಚ್‌ ಅಂತ್ಯದ ವೇಳೆಗೆ 960 ಕೋಟಿ ರೂ.ಗಳಿಗೂ ಹೆಚ್ಚು ನಷ್ಟ ಅನುಭವಿಸಿದೆ ಎಂದು ತಿಳಿದುಬಂದಿದೆ.

Sri Lanka to plans to sell airlines and print currency to pay salaries to government employees

ಬೇರೆ ದಾರಿಯಿಲ್ಲ ಎಂದ ಪ್ರಧಾನಿ
ನನಗೆ ಸತ್ಯವನ್ನು ಮರೆಮಾಚುವ ಮತ್ತು ಸಾರ್ವಜನಿಕರಿಗೆ ಸುಳ್ಳು ಹೇಳುವು ಬಯಕೆಯಿಲ್ಲ. ಈ ವಿಷಯಗಲು ಅಹಿತಕರ ಮತ್ತು ಭಯಾನಕರವಾಗಿದ್ದರೂ ಅದನ್ನು ಹೇಳಲೇಬಾಕಾಗಿದೆ. ಭಾರಿ ನಷ್ಟದಲ್ಲಿರುವ ಶ್ರೀಲಂಕನ್‌ ಏರ್‌ಲೈನ್ಸ್‌ ಅನ್ನು ಬೇರೆ ದಾರಿಯಿಲ್ಲದೆ ಖಾಸಗೀಕರಣಗೊಳಿಸಲು ಚಿಂತಿಸುತ್ತಿದ್ದೇವೆ. ಆದರೆ ಏರ್‌ಲೈನ್ಸ್‌ನಲ್ಲಿ ಉಂಟಾಗಿರುವ ನಷ್ಟವನ್ನು ಇನ್ನು ವಿಮಾನದಲ್ಲಿ ಕಾಲಿಡದ ಬಡವರೂ ಕೂಡ ಹೊರವಂತಾಗಬಾರದು. ಅದಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.

ದೇಶದಲ್ಲಿ ಪೆಟ್ರೋಲ್ ಖಾಲಿಯಾಗಿದೆ: ಶ್ರೀಲಂಕಾ ಪ್ರಧಾನಿದೇಶದಲ್ಲಿ ಪೆಟ್ರೋಲ್ ಖಾಲಿಯಾಗಿದೆ: ಶ್ರೀಲಂಕಾ ಪ್ರಧಾನಿ

ದೇಶ ತೀವ್ರ ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿರುವುದರಿಂದ ಸರಕಾರಿ ನೌಕರರಿಗೆ ಸಂಬಳ ನೀಡಲು ನೀಡುವುದಕ್ಕೂ ಹಣವಿಲ್ಲ. ಹಾಗಾಗಿ ಹೊಸ ಕರೆನ್ಸಿ ಮುದ್ರಿಸಲು ಸರ್ಕಾರ ನಿರ್ಧರಿಸಿದೆ. ಈ ನಿರ್ಧಾರದಿಂದ ದೇಶದ ಕರೆನ್ಸಿ ಮೇಲೆ ಒತ್ತಡ ಬೀಳಲಿದೆ ಎಂದು ಪ್ರಧಾನಿ ಹೇಳಿದ್ದಾರೆ.

Sri Lanka to plans to sell airlines and print currency to pay salaries to government employees

ಅಭಿವೃದ್ಧಿ ಬಜೆಟ್‌ಗೆ ಬದಲಾಗಿ ಪರಿಹಾರ ಬಜೆಟ್‌
ದೇಶ ಎದುರಿಸುತ್ತಿರುವ ತೀವ್ರ ಆರ್ಥಿಕ ಪರಿಸ್ಥಿತಿಯಿಂದ ಹೊರಬರಬೇಕಾದರೆ, ಮುಂದಿನ ಕೆಲವು ತಿಂಗಳು ಬಹಳ ಕಷ್ಟಪಡಬೇಕು. ಹಾಗಾಗಿ ಎಲ್ಲಾ ರಾಜಕೀಯ ಪಕ್ಷಗಳು ಬಿಕ್ಕಟ್ಟನ್ನು ಎದುರಿಸಲು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಅದಕ್ಕಾಗಿ ಒಂದು ರಾಜಕೀಯ ಸಂಸ್ಥೆಯನ್ನು ಕಟ್ಟಬೇಕಾಗಿದೆ. ಅಧ್ಯಕ್ಷ ರಾಜಪಕ್ಸೆ ಅವರ ಅಭಿವೃದ್ಧಿ ಬಜೆಟ್‌ಗೆ ಬದಲಾಗಿ ಹೊಸದಾಗಿ ಪರಿಹಾರ ಬಜೆಟ್‌ ಘೋಷಿಸುವುದಾಗಿ ವಿಕ್ರಮಸಿಂಘೆ ಭರವಸೆ ನೀಡಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Sri Lanka's newly inducted PM Ranil Wickremesinghe has said that he has been forced to print money in order to pay salaries amid the nation's worst economic crisis
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X