• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀಲಂಕಾಗೆ 2ನೇ ಹಂತದಲ್ಲಿ 5 ಲಕ್ಷ ಕೋವಿಶೀಲ್ಡ್ ಲಸಿಕೆ ರವಾನಿಸಿದ ಭಾರತ

|

ಕೊಲೊಂಬೊ,ಫೆಬ್ರವರಿ 25: ಭಾರತವು ಎರಡನೇ ಹಂತದಲ್ಲಿ 5 ಲಕ್ಷ ಕೋವಿಶೀಲ್ಡ್ ಲಸಿಕೆಯನ್ನು ಶ್ರೀಲಂಕಾಗೆ ರವಾನಿಸಿದೆ.

ಈ ಕುರಿತು ಶ್ರೀಲಂಕಾದಲ್ಲಿನ ಭಾರತ ಹೈಕಮಿಷನ್ ಟ್ವೀಟ್ ಮಾಡಿದೆ. ಲಸಿಕೆಗಳನ್ನು ಫೆಬ್ರವರಿ 26 ರಿಂದಲೇ ವಿತರಿಸಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಶ್ರೀಲಂಕಾ ಜತೆಗೆ ಭೂತಾನ್,ಮಾಲ್ಡೀವ್ಸ್,ಬಾಂಗ್ಲಾದೇಶ,ನೇಪಾಳ,ಮ್ಯಾನ್ಮಾರ್ ಮತ್ತು ಸೀಶೆಲ್ಸ್, ಅಫ್ಘಾನಿಸ್ತಾನ ಮತ್ತು ಮಾರಿಷಸ್ ದೇಶಗಳಿಗೆ ಕೂಡ ಕೊರೊನಾ ಲಸಿಕೆಗಳನ್ನು ಅನುದಾನದ ರೀತಿಯಲ್ಲಿ ಭಾರತ ನೀಡುತ್ತಿದೆ.

ಭಾರತವು ವಿಶ್ವದ ಅತಿದೊಡ್ಡ ಔಷಧ ತಯಾರಕರಲ್ಲಿ ಒಂದಾಗಿದ್ದು,ಹಲವು ದೇಶಗಳು ಈಗಾಗಲೇ ಕೊರೊನಾ ಲಸಿಕೆಗಾಗಿ ಭಾರತದೊಂದಿಗೆ ಮಾತುಕತೆ ನಡೆಸುತ್ತಿದೆ.

ಲಸಿಕೆಗಳನ್ನು ಅಂತಾರಾಷ್ಟ್ರೀಯ ಸಹಕಾರ ಒಪ್ಪಂದವಾದ ಕೋವ್ಯಾಕ್ಸ್ ಕಾರ್ಯಕ್ರಮದ ಮೂಲಕ ಪಡೆಯಲಾಗಿದೆ.ಶ್ರೀಲಂಕಾ ಸರ್ಕಾರದ ಆರೋಗ್ಯ ಸಚಿವರಾದ ಚನ್ನ ಜಯಸುಮನ ಕೋವಿಶೀಲ್ಡ್ ಲಸಿಕೆಯ 5 ಲಕ್ಷ ಡೋಸ್‌ಗಳು ತಲುಪಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಶ್ರೀಲಂಕಾದ ಸ್ಟೇಟ್ ಫಾರ್ಮಸ್ಯುಟಿಕಲ್ಸ್ ಕಾರ್ಪೊರೇಷನ್ಮತ್ತು ಭಾರತದ ಸೆರಂಇನ್‌ಸ್ಟಿಟ್ಯೂಟ್ ನಡುವೆ ಆಗಿರುವ ಒಪ್ಪಂದದ ಪ್ರಕಾರ ಈ ಹೊಸ ಹಂತದ ಲಸಿಕೆಗಳಿಗೆ ಆರ್ಡರ್ ನೀಡಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.

ಜನವರಿಯಲ್ಲಿ ಶ್ರೀಲಂಕಾಗೆ ಲಸಿಕೆಯ 5 ಲಕ್ಷ ಡೋಸ್‌ಗಳನ್ನು ಭಾರತ ಉಡುಗೊರೆಯಾಗಿ ನೀಡಿತ್ತು. ಇದರಿಂದ ಶ್ರೀಲಂಕಾ ತನ್ನ ಲಸಿಕಾ ಅಭಿಯಾನವನ್ನು ಆರಂಭಿಸಿದ್ದು,ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆಯನ್ನು ನೀಡಲಾಗಿತ್ತು. ಶ್ರೀಲಂಕಾದಲ್ಲಿ ಇಲ್ಲಿಯವರೆಗೆ 80,500 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

English summary
The second consignment of 500,000 Covishieldccines was shipped to Sri Lanka On Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X