ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶ್ರೀಲಂಕಾ ವಿವಾದ: ಪ್ರಧಾನಿ ಹುದ್ದೆ ತ್ಯಜಿಸಲಿರುವ ಮಹಿಂದಾ ರಾಜಪಕ್ಸ
ಕೊಲಂಬೋ, ಡಿಸೆಂಬರ್ 14: ಶ್ರೀಲಂಕಾದ ವಿವಾದಾತ್ಮಕ ಪ್ರಧಾನಿ ಮಹಿಂದಾ ರಾಜಪಕ್ಸ ತಮ್ಮ ಸ್ಥಾನದಿಂದ ಕೆಳಕ್ಕಿಳಿಯಲಿದ್ದಾರೆ ಎಮದು ಅವರ ಮಗ ತಿಳಿಸಿದ್ದಾರೆ.
ರಾಜಪಕ್ಸ ಅವರು ಶನಿವಾರ ಪ್ರಧಾನಿ ಹುದ್ದೆಯನ್ನು ತ್ಯಜಿಸಲಿದ್ದಾರೆ ಎಂದು ಅವರ ಮಗ, ಸಂಸದ ನಮಲ್ ರಾಜಪಕ್ಸ ಹೇಳಿದ್ದಾರೆ. 'ದೇಶದ ಸ್ಥಿರತೆ ದೃಷ್ಟಿಯಿಂದ ಅವರು ರಾಜೀನಾಮೆ ನೀಡಲಿದ್ದಾರೆ' ಎಂದು ತಿಳಿಸಿದ್ದಾರೆ.
ಖಾರದ ಪುಡಿ ಎರಚಿ, ಕುರ್ಚಿ ತೂರಾಡಿದ ಶ್ರೀಲಂಕಾ ಸಂಸದರು
ಅಕ್ಟೋಬರ್ 26ರಂದು ಪ್ರಧಾನಿ ಹುದ್ದೆಗೆ ಏರಿದ್ದ ರಾಜಪಕ್ಸ ಅವರು ಪ್ರಧಾನಿ ಕಚೇರಿಯಿಂದ ಅಧಿಕಾರ ಚಲಾಯಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಗುರುವಾರ ಆದೇಶ ನೀಡಿತ್ತು.
ಸಂಸತ್ ವಿಸರ್ಜನೆ ಮಾಡುವ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ನಿರ್ಧಾರವು ಸಂವಿಧಾನಬಾಹಿರ ಎಂದು ಕೋರ್ಟ್ ಹೇಳಿತ್ತು.
ಶ್ರೀಲಂಕಾ ರಾಜಕೀಯಕ್ಕೆ ಹೊಸ ತಿರುವು: ಸಂಸತ್ ವಿಸರ್ಜನೆಗೆ ತಡೆ
ರಾಜಪಕ್ಸ ಅವರ ನಿರ್ಧಾರವು ಏಳು ವಾರಗಳ ವಿವಾದಾತ್ಮಕ ಅಧಿಕಾರಾವಧಿಯ ಗೊಂದಲ ಅಂತ್ಯಗೊಳಿಸಲಿದೆ ಎಂಬ ನಿರೀಕ್ಷೆ ಮೂಡಿದೆ.
Comments
sri lanka colombo mahinda rajapaksa prime minister international news resignation ಶ್ರೀಲಂಕಾ ಕೊಲಂಬೋ ಪ್ರಧಾನಿ ಅಂತಾರಾಷ್ಟ್ರೀಯ ಸುದ್ದಿ ರಾಜೀನಾಮೆ
English summary
Sri Lankan disputed Prime Minister Mahinda Rajapaksa will step down from the position on Saturday, his son Namal Rajapaksa said.
Story first published: Friday, December 14, 2018, 20:01 [IST]