ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ: ''ಟರ್ಮಿನೇಟರ್'' ಗೊತಬಯಗೆ ಗೆಲುವು

|
Google Oneindia Kannada News

ಕೊಲಂಬೋ, ನವೆಂಬರ್ 17: ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಆಡಳಿತ ಪಕ್ಷದ ಅಭ್ಯರ್ಥಿ ಸಜಿತ್ ಪ್ರೇಮದಾಸ ಅವರು ಎದುರಾಳಿ, ಮಾಜಿ ರಕ್ಷಣಾ ಕಾರ್ಯದರ್ಶಿ ಗೊತಬಯ ರಾಜಪಕ್ಸಾ ವಿರುದ್ಧ ಸೋಲು ಅನುಭವಿಸಿದ್ದಾರೆ.

ಟರ್ಮಿನೇಟರ್ ಗೋತಬಯ ಹಾಗೂ ಪ್ಯಾಡ್ ಮ್ಯಾನ್ ಸಜಿತ್ ನಡುವಿನ ನೇರ ಹಣಾಹಣಿಯಲ್ಲಿ ಗೋತಬಯಕ್ಕೆ ಗೆಲುವು ಲಭಿಸಿದ್ದು, ಶ್ರೀಲಂಕಾದ 7ನೇ ರಾಷ್ಟ್ರಪತಿಯಾಗಿ ಚುನಾಯಿತರಾಗಿದ್ದಾರೆ. ರಾಜಪಕ್ಸಾ ಅವರಿಗೆ 49.6% ಶೇಕಡಾವಾರು ಮತಗಳು ಬಂದಿದ್ದರೆ, ಪ್ರೇಮದಾಸ ಅವರರಿಗೆ 44.4 ಶೇಕಡಾವಾರು ಮತಗಳು ಬಂದಿವೆ.

ಶ್ರೀಲಂಕಾ ಚುನಾವಣೆ: ಮುಸ್ಲಿಂ ಮತದಾರರಿದ್ದ ಬಸ್ ಮೇಲೆ ಗುಂಡಿನ ದಾಳಿಶ್ರೀಲಂಕಾ ಚುನಾವಣೆ: ಮುಸ್ಲಿಂ ಮತದಾರರಿದ್ದ ಬಸ್ ಮೇಲೆ ಗುಂಡಿನ ದಾಳಿ

ಸುಮಾರು 12,845 ಮತಗಟ್ಟೆಗಳಲ್ಲಿ 1.60 ಕೋಟಿ ಮತದಾರರ ಪೈಕಿ ಶೇ 80 ರಷ್ಟು ಮಂದಿ ಶನಿವಾರದಂದು ಮತದಾನ ಮಾಡಿದ್ದರು. ಮತದಾನದ ವೇಳೆ ಅನೇಕ ಕಡೆಗಳಲ್ಲಿ ಹಿಂಸಾಚಾರ, ಗಲಭೆ ಪ್ರಕರಣಗಳು ವರದಿಯಾಗಿವೆ. ಆದರೆ ಸ್ವತಂತ್ರ, ಮುಕ್ತ ಚುನಾವಣೆ ನಡೆಸಲಾಗಿದೆ ಎಂದು ಪ್ರಧಾನಿ ರನಿಲ್ ವಿಕ್ರಮಸಿಂಘೆ ಹೇಳಿದ್ದಾರೆ.

Sri Lanka presidential poll: Sajith Premadasa concedes defeat to Gotabaya Rajapaksa

ಸೇನೆಯ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಗೋತಬಯ ರಾಜಪಕ್ಸಾ(70 ವರ್ಷ) ಅವರು ತಮಿಳು ಪ್ರತ್ಯೇಕತಾವಾದಿ ಹೋರಾಟವನ್ನು ಹತ್ತಿಕೊಳ್ಳಲು ಶ್ರಮಿಸಿದ್ದರು. ಅವರ ಸೋದರ ಮಹಿಂದ ರಾಜಪಕ್ಸಾ ಈ ಮುಂಚೆ ಅಧ್ಯಕ್ಷರಾಗಿದ್ದರು. ಕುಟುಂಬಸ್ಥರು, ಆಪ್ತ ಬಳಗದವರಿಗೆ ಟರ್ಮಿನೇಟರ್ ಎಂದೇ ಕರೆಸಿಕೊಳ್ಳುತ್ತಾರೆ.

ಆಡಳಿತಾರೂಢ ಸಂಯುಕ್ತ ರಾಷ್ಟ್ರೀಯ ಪಕ್ಷ(ಯುಎನ್ ಪಿ), ನವ ಪ್ರಜಾಸತ್ತಾತ್ಮಕ ರಂಗದ (ಎನ್ಡಿಎಫ್) ಉಪನಾಯಕರಾದ ಸಜಿತ್(52) ಅವರು ಮಹಿಳಾ ಪರ ಧೋರಣೆ ಮೂಲಕ ಈ ಬಾರಿ ಚುನಾವಣೆ ಗೆಲ್ಲುವ ಹುಮ್ಮಸ್ಸಿನಲ್ಲಿದ್ದರು.

ಮಹಿಳೆಯರಿಗೆ ಸಮಾನ ಹಕ್ಕು, ಋತುಚಕ್ರದ ವಿಷಯದ ಬಗ್ಗೆ ಚರ್ಚೆಗೆ ಕರೆ ನೀಡಿದ್ದರು. ಪ್ರೇಮದಾಸರನ್ನು '' ಪ್ಯಾಡ್ ಮ್ಯಾನ್ '' ಎಂದು ಎದುರಾಳಿ ರಾಜಪಕ್ಸಾ ಕರೆದಿದ್ದನ್ನು ಮುಕ್ತವಾಗಿ ಸ್ವೀಕರಿಸಿ, ಚುನಾವಣೆ ಎದುರಿಸಿದ್ದರು.

English summary
Sri Lanka's ruling party candidate Sajith Premadasa Sunday conceded the presidential poll on Sunday and congratulated his main rival, former wartime defence secretary Gotabaya Rajapaksa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X