ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸ ರಾಜೀನಾಮೆ ಸಾಧ್ಯತೆ

|
Google Oneindia Kannada News

ಕೊಲಂಬೋ, ಮೇ 7: ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮತ್ತು ಅತೀ ಆರ್ಥಿಕ ಬಿಕ್ಕಟ್ಟು ಪರಿಸ್ಥಿತಿ ಹಿನ್ನೆಲೆಯಲ್ಲಿ ಪ್ರಧಾನಿ ಮಹಿಂದಾ ರಾಜಪಕ್ಸ ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗಿದೆ. ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಹಿಂದಾಗೆ ಲಂಕಾ ಅಧ್ಯಕ್ಷ ಗೋಟಾಬಯ ರಾಜಪಕ್ಸ ಮನವಿ ಮಾಡಿದ್ದರು. ಅಧ್ಯಕ್ಷ ಗೋಟಾಬಯ ರಾಜಪಕ್ಸ ನೇತೃತ್ವದಲ್ಲಿ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಈ ವಿಚಾರ ಚರ್ಚಿಸಲಾಯಿತು. ಈ ವೇಳೆ ಮಹಿಂದಾ ರಾಜಪಕ್ಸ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಲು ಒಪ್ಪಿದರೆನ್ನಲಾಗಿದೆ. ಎಎನ್‌ಐ ವರದಿ ಪ್ರಕಾರ ಸೋಮವಾರ ಪ್ರಧಾನಿ ಮಹಿಂದಾ ರಾಜೀನಾಮೆ ನೀಡುವ ನಿರೀಕ್ಷೆ ಇದೆ.

ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು ಪರಿಸ್ಥಿತಿಯನ್ನು ನಿಭಾಯಿಸಲು ಪ್ರಧಾನಿ ವಿಫಲರಾಗಿದ್ದಾರೆ ಎಂಬ ಟೀಕೆ ವ್ಯಾಪಕವಾಗಿ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮಹಿಂದ ರಾಜಪಕ್ಸ ತಮ್ಮ ಸ್ಥಾನಕ್ಕೆ ಬೇಕಾದರೆ ರಾಜೀನಾಮೆ ನೀಡುವುದಾಗಿ ಈ ಮುಂಚೆ ಹೇಳಿದ್ದರು. ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ತಮ್ಮ ರಾಜೀನಾಮೆಯಿಂದ ಅನುಕೂಲವಾಗುತ್ತದೆ ಎಂದರೆ ನಾನು ಅದಕ್ಕೆ ಸಿದ್ಧ ಎಂದು ಅವರು ತಿಳಿಸಿದ್ದರು. ಈಗ ರಾಜೀನಾಮೆ ನಿರ್ಧಾರಕ್ಕೆ ಬಂದಿದ್ದಾರೆ.

Breaking: ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಗೋತಬಯ ರಾಜಪಕ್ಸೆ Breaking: ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಗೋತಬಯ ರಾಜಪಕ್ಸೆ

ಸೋಮವಾರ ಪ್ರಧಾನಿ ರಾಜೀನಾಮೆ ಬಳಿಕ ಇಡೀ ಸಂಪುಟದಲ್ಲಿ ಬದಲಾವಣೆ ಅಗಲಿದೆ. ಮುಂದಿನ ವಾರ ಬಹುತೇಕ ಹೊಸ ಸಂಪುಟ ಅಸ್ತಿತ್ವಕ್ಕೆ ಬರಬಹುದು, ಅಥವಾ ಸಂಪುಟ ಪುನಾರಚನೆ ಆಗುವ ಸಂಭವ ಇದೆ. ಮಹಿಂದಾ ರಾಜಪಕ್ಸ ಈ ಹಿಂದೆ ಶ್ರೀಲಂಕಾದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದವರು. ಇಡೀ ಲಂಕಾಗೆ ತಲೆನೋವಾಗಿ ಪರಿಣಮಿಸಿದ್ದ ಎಲ್‌ಟಿಟಿಇ ಸಂಘಟನೆಯನ್ನ ಬುಡಸಮೇತ ನಿರ್ಮೂಲ ಮಾಡುವ ಕಾರ್ಯದಲ್ಲಿ ಮಹಿಂದಾ ಯಶಸ್ವಿಯಾಗಿದ್ದರು. ಆದರೆ ಪ್ರಧಾನಿಯಾಗಿ ಅವರು ವಿಫಲರಾಗಿರುವುದಕ್ಕೆ ಆರ್ಥಿಕ ಪರಿಸ್ಥಿತಿ ಕೈಗನ್ನಡಿ ಹಿಡಿದಿದೆ.

Sri Lanka PM Mahinda Rajapaksa likely to resign amidst crisis

ಶ್ರೀಲಂಕಾ ಆರ್ಥಿಕ ದುಸ್ಥಿತಿ:
ಬೇರೆ ಬೇರೆ ಕಾರಣಗಳಿಂದ ಶ್ರೀಲಂಕಾ ಈಗ ತೀವ್ರ ಆರ್ಥಿಕ ಸಂಕಷ್ಟ ಪರಿಸ್ಥಿತಿಗೆ ಸಿಲುಕಿದೆ. ಕೋವಿಡ್ ಕಾರಣ ಪ್ರಮುಖವಾದರೂ ಹಣಕಾಸು ವ್ಯವಹಾರ ಸರಿಯಾಗಿ ನಿಭಾಯಿಸದೇ ಹೋಗಿದ್ದೂ ಲಂಕಾದ ಆರ್ಥಿಕ ದುಃಸ್ಥಿತಿಗೆ ಎಡೆ ಮಾಡಿಕೊಟ್ಟಿದೆ. ದೊಡ್ಡ ದೊಡ್ಡ ಇನ್‌ಫ್ರಾಸ್ಟ್ರಕ್ಚರ್ ಯೋಜನೆಗಳಿಗೆ ಭಾರೀ ಮೊತ್ತದ ಸಾಲದ ಹಣವನ್ನು ಹಾಕಿದ್ದು, ರಸಗೊಬ್ಬರ ಬಳಕೆ ನಿಷೇಧಿಸಿದ್ದು ಲಂಕಾದ ಆರ್ಥಿಕತೆಗೆ ಪೆಟ್ಟು ಕೊಟ್ಟಿದೆ.

Breaking; ಶ್ರೀಲಂಕಾದಲ್ಲಿ ಹೊಸದಾಗಿ ಚುನಾವಣೆ ನಡೆಸಲು ಕರೆ Breaking; ಶ್ರೀಲಂಕಾದಲ್ಲಿ ಹೊಸದಾಗಿ ಚುನಾವಣೆ ನಡೆಸಲು ಕರೆ

ಶ್ರೀಲಂಕಾದ ಪ್ರಮುಖ ಆದಾಯ ಮೂಲವಾದ ಪ್ರವಾಸೋದ್ಯಮ ಕೋವಿಡ್ ಕಾರಣಕ್ಕೆ ಕಳೆದ ಎರಡು ವರ್ಷದಿಂದ ನೆಲಕಚ್ಚಿದೆ. ಇದೂ ಕೂಡ ದೊಡ್ಡ ಮಟ್ಟದಲ್ಲಿ ಲಂಕಾ ಪರಿಸ್ಥಿತಿಯನ್ನು ಬಿಗಡಾಯಿಸುವಂತೆ ಮಾಡಿದೆ.

ಜನರ ತೀವ್ರ ಪ್ರತಿಭಟನೆ:
ಲಂಕಾದಲ್ಲಿ ಅಗತ್ಯ ವಸ್ತುಗಳ ಬೆಲೆಗಳೆಲ್ಲವೂ ಗಗನಕ್ಕೇರಿದೆ. ಪೆಟ್ರೋಲ್ ಇತ್ಯಾದಿ ವಸ್ತುಗಳು ಬಲು ದುಬಾರಿಗೊಂಡು ಜನಜೀವನನ್ನು ಹೈರಾಣಗೊಳಿಸಿದೆ. ವಿದ್ಯುತ್ ಕಡಿತ ಇತ್ಯಾದಿಗಳಿಂದ ಜನರು ಬಸವಳಿದುಹೋಗಿದ್ಧಾರೆ. ಶ್ರೀಲಂಕಾದ ಬಹುತೇಕ ಎಲ್ಲಾ ಕಡೆಯೂ ಜನರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲ ಕಡೆ ಪ್ರತಿಭಟನೆಗಳು ವಿಕೋಪಕ್ಕೆ ತಿರುಗಿ ಹಿಂಸಾಚಾರಗಳೂ ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ಲಂಕಾ ಅಧ್ಯಕ್ಷ ಗೋಟಾಬಯ ರಾಜಪಕ್ಸ ಒತ್ತಡಕ್ಕೆ ಸಿಲುಕಿದ್ದಾರೆ.

Sri Lanka PM Mahinda Rajapaksa likely to resign amidst crisis

ಲಂಕಾದಲ್ಲಿ ತುರ್ತುಪರಿಸ್ಥಿತಿ ಘೋಷಣೆ:
ದೈನಂದಿನ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಸಾರ್ವಜನಿಕರ ಪ್ರತಿಭಟನೆ ತಾರಕಕ್ಕೇರಿ ಅದನ್ನು ತಡೆಯಲು ಕಷ್ಟಸಾಧ್ಯದ ಪರಿಸ್ಥಿತಿ ಉದ್ಭವವಾದ ಹಿನ್ನೆಲೆಯಲ್ಲಿ ಲಂಕಾ ಅಧ್ಯಕ್ಷ ಗೋಟಾಬಯ ರಾಜಪಕ್ಸ ನಿನ್ನೆ ತುರ್ತುಪರಿಸ್ಥಿತಿ ಜಾರಿಗೆ ತಂದಿದ್ದಾರೆ. ಸರಕಾರಿ ವಿರೋಧಿ ಪ್ರತಿಭಟನೆ ದೊಡ್ಡ ಮಟ್ಟಕ್ಕೆ ಹೋಗದಂತೆ ತಡೆಯಲು ಭದ್ರತಾ ಪಡೆಗಳಿಗೆ ವಿಶೇಷಾಧಿಕಾರ ನೀಡಲಾಗಿದೆ. ಕಳೆದ ಐದು ವಾರದಲ್ಲಿ ಇದು ಎರಡನೇ ಬಾರಿ ಲಂಕಾದಲ್ಲಿ ತುರ್ತುಸ್ಥಿತಿ ಘೋಷಣೆ ಮಾಡಿರುವುದು.

ತಮ್ಮ ಖಾಸಗಿ ನಿವಾಸದೆದುರು ಸಾರ್ವಜನಿಕರು ಬೃಹತ್ ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ಏಪ್ರಿಲ್ ೧ರಂದು ಅಧ್ಯಕ್ಷರು ತುರ್ತುಪರಿಸ್ಥಿತಿ ಘೋಷಣೆ ಮಾಡಿದ್ದರು. ಏಪ್ರಿಲ್ ೫ರಂದು ಅದನ್ನು ವಾಪಸ್ ಪಡೆದಿದ್ದರು. ಈಗ ಪ್ರತಿಭಟನೆ ನಿಲ್ಲದ ಹಿನ್ನೆಲೆಯಲ್ಲಿ ಮತ್ತೊಮ್ಮೆ ತುರ್ತುಪರಿಸ್ಥಿತಿ ಮೊರೆಹೋಗಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Sri Lankan Prime Minister Mahinda Rajapaksa is learnt to have responded positively to President Gotabaya Rajapaksa's request to him to quit in the face of the deepening economic crisis along with the imposition of the state of emergency in the island nation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X