ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಲಂಕಾ ಜನರಿಗೆ ಬಾಂಬ್ ದಾಳಿ ಬಳಿಕ ಚಂಡಮಾರುತದ ಪೆಟ್ಟು?

|
Google Oneindia Kannada News

ಕೊಲಂಬೋ, ಏ.25: ಶ್ರೀಲಂಕಾದ ಜನರಿಗೆ ಬಾಂಬ್ ಸ್ಫೋಟದ ತಲೆನೋವಿನ ಬಳಿಕ ಇದೀಗ ಚಂಡಮಾರುತದ ಚಿಂತೆ ಆರಂಭವಾಗಿದೆ.

ಈ ವಾರಾಂತ್ಯದಲ್ಲಿ ಫ್ಯಾನಿ ಚಂಡ ಮಾರುತವು ಬಂಗಾಳಕೊಲ್ಲಿಯಿಂದ ತಮಿಳುನಾಡು ಮೂಲಕ ಶ್ರೀಲಂಕಾವನ್ನು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ತಮಿಳುನಾಡಿಗೆ ಅಪ್ಪಳಿಸಲಿದೆ 'ಫ್ಯಾನಿ' ಚಂಡಮಾರುತ,ಎಲ್ಲೆಲ್ಲಿ ಮಳೆ ಸಾಧ್ಯತೆ?ತಮಿಳುನಾಡಿಗೆ ಅಪ್ಪಳಿಸಲಿದೆ 'ಫ್ಯಾನಿ' ಚಂಡಮಾರುತ,ಎಲ್ಲೆಲ್ಲಿ ಮಳೆ ಸಾಧ್ಯತೆ?

ಅತಿ ಹೆಚ್ಚು ಉಷ್ಣಾಂಶದಿಂದಾಗಿ ಗಾಳಿಯಲ್ಲಿ ಏರುಪೇರು ಉಂಟಾಗಿ ಅದು ಚಂಡಮಾರುತವಾಗಿ ಪರಿವರ್ತನೆಗೊಳ್ಳುತ್ತವೆ. ಈಗಾಗಲೇ ಗಜ ಚಂಡಮಾರುತದಿಂದ ತಮಿಳುನಾಡು ಚೇತರಿಸಿಕೊಂಡಿದೆ. ಈಗ ಮತ್ತೊಂದು ಚಂಡ ಮಾರುತ ಅಪ್ಪಳಿಸುವ ಮುನ್ಸೂಚನೆ ದೊರೆತಿದೆ.

Sri Lanka on alert for dangerous tropical cyclone

ಶುಕ್ರವಾರ ಅಥವಾ ಶನಿವಾರ ಚಂಡ ಮಾರುತವು ಶ್ರೀಲಂಕಾ ಪ್ರವೇಶಿಸಲಿದೆ. ಬಂಗಾಳಕೊಲ್ಲಿಗೆ ಶ್ರೀಲಂಕಾ ಹತ್ತಿರವಿರುವುದರಿಂದ ಹೆಚ್ಚು ಪರಿಣಾಮಕಾರಿಯಾಗಿರಲಿದೆ. ಬಳಿಕ ಭಾನುವಾರದ ನಂತರ ದಕ್ಷಿಣ ಭಾರತವನ್ನು ಪ್ರವೇಶಿಸಲಿದೆ. ಮುಂದಿನ 24 ಗಂಟೆ ಶ್ರೀಲಂಕಾದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.

ಪ್ರವಾಹ, ಭೂಕುಸಿತದಂತಹ ಅನಾಹುತಗಳು ಸಂಭವಿಸುವ ಎಲ್ಲಾ ಸಾಧ್ಯತೆಗಳೂ ಇವೆ. ಶ್ರೀಲಂಕಾದ ದಕ್ಷಿಣ ಭಾಗ ಹಾಗೂ ಕರಾವಳಿ ಭಾಗದಲ್ಲಿರುವ ಜನತೆ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಇಷ್ಟೇ ಅಲ್ಲದೆ ಬಾಂಗ್ಲಾದೇಶದ ಮೇಲೂ ಪರಿಣಾಮ ಬೀರಲಿದೆ.

English summary
A cluster of showers and thunderstorms in the northern Indian Ocean may develop into a dangerous tropical cyclone in the Bay of Bengal by this weekend.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X