ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಶ್ರೀಲಂಕಾದ ಅಧ್ಯಕ್ಷರಾಗಿ ವಿಕ್ರಮಸಿಂಘೆ ಅಧಿಕಾರ ಸ್ವೀಕಾರ

|
Google Oneindia Kannada News

ಕೊಲಂಬೋ, ಜುಲೈ 21: ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಹಿರಿಯ ರಾಜಕಾರಣಿ ರಾನಿಲ್ ವಿಕ್ರಮಸಿಂಘೆ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು. ಬುಧವಾರ ನಡೆದ ಚುನಾವಣೆಯಲ್ಲಿ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಆರ್ಥಿಕ ಬಿಟ್ಟಿನ ನಂತರ ಶ್ರೀಲಂಕಾದಲ್ಲಿ ರಾಜಕೀಯದಲ್ಲಿ ಭಾರೀ ಬದಲಾವಣೆ ನಡೆದಿತ್ತು. ಅಧ್ಯಕ್ಷರಾಗಿದ್ದ ಗೊಟಬಯ ರಾಜಪಕ್ಸ ಸಿಂಗಾಪುರಕ್ಕೆ ಪಲಾಯ ಮಾಡಿದ್ದರು. ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ರಾಜಪಕ್ಸ ಅವರ ಬಹುಕಾಲದ ಮಿತ್ರರಾಗಿರುವ ರಾನಿಲ್ ವಿಕ್ರಮಸಿಂಘೆ ಗುರುವಾರ ಶ್ರೀಲಂಕಾದ 8ನೇ ಅಧ್ಯಕ್ಷರಾಗಿದ್ದು, ಶ್ರೀಲಂಕಾವನ್ನು ಸುವ್ಯವಸ್ಥಿತವಾಗಿ ಮುನ್ನಡೆಸುವ ಕಾರ್ಯ ನಿರ್ವಹಿಸಲಿದ್ದಾರೆ.

Sri Lanka new President Ranil Wickramasinghe takes oath

ಹಿರಿಯ ರಾಜಕಾರಣಿ ವಿಕ್ರಮಸಿಂಘೆ (73) ಅವರು ಸಂಸತ್ತಿನಲ್ಲಿ ಮುಖ್ಯ ನ್ಯಾಯಾಧೀಶರಾದ ಜಯಂತ್ ಜಯಸೂರ್ಯ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಶ್ರೀಲಂಕಾವನ್ನು ಈಗಿರುವ ಆರ್ಥಿಕ ಬಿಕ್ಕಟ್ಟಿನಿಂದ ಹೊರತರುವ ಕಠಿಣ ಸವಾಲು ಹೊಸ ಅಧ್ಯಕ್ಷರ ಮುಂದಿದೆ.

ಶ್ರೀಲಂಕಾದಲ್ಲಿ ಆರ್ಥಿಕ ಬಿಟ್ಟಿನಿಂದ ಅಲ್ಲಿನ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಅಧ್ಯಕ್ಷ ಗೊಟಬಯ ರಾಜಪಕ್ಸ ಮನೆಗೆ ಮುತ್ತಿಗೆ ಹಾಕಿದ್ದರು. ಬಳಿಕ ದೇಶದ ರಾಜಕೀಯದಲ್ಲಿ ಭಾರೀ ಬದಲಾವಣೆ ಆಗಿದೆ.

ಬುಧವಾರ ಅಧ್ಯಕೀಯ ಚುನಾವಣೆ ನಡೆದಿದ್ದು, ಅದರಲ್ಲಿ ವಿಕ್ರಮ ಸಿಂಘೆ ಅವರು ಅಧಿಕ ಮತ ಗಳಿಸಿ ಆಯ್ಕೆಯಾಗಿದ್ದರು. ಕಳೆದ ಕೆಲವು ದಿನಗಳಲ್ಲಿ ಸಂಸತ್ತಿನ ಭದ್ರತಾ ವ್ಯವಹಾರಗಳಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸಿದ ಮೂರು ಸಶಸ್ತ್ರ ಪಡೆಗಳು ಮತ್ತು ಪೊಲೀಸರಿಗೆ ವಿಕ್ರಮ ಸಿಂಘೆ ಅವರು ಬುಧವಾರ ಕೃತಜ್ಞತೆ ತಿಳಿಸಿದ್ದಾರೆ.

Recommended Video

ಜಿಂಬಾಬ್ವೆ ವಿರುದ್ಧ ಉತ್ತಮ ಪ್ರದರ್ಶನ ನೀಡದಿದ್ರೆ ಟೀಂ ಇಂಡಿಯಾದಿಂದ ಈ ಮೂವರಿಗೆ ಗೇಟ್ ಪಾಸ್ | *Cricket | OneIndia

ನೂತನ ಅಧ್ಯಕ್ಷ ವಿಕ್ರಮಸಿಂಘೆ ನೇತೃತ್ವದಲ್ಲಿ ಕಾರ್ಯನಿರ್ವಹಿಸಲು ಸುಮಾರು 25 ಸದಸ್ಯರ ಸಚಿವ ಸಂಪುಟ ತುರ್ತಾಗಿ ನೇಮಕಗೊಳ್ಳಲಿದೆ ಎಂದು ಅಲ್ಲಿನ ರಾಜಕೀಯ ಮೂಲಗಳು ತಿಳಿಸಿವೆ.

ಅವಧಿಗೂ ಮೊದಲೇ ಶ್ರೀಲಂಕಾದಲ್ಲಿ ಹೊಸ ಅಧ್ಯಕ್ಷರ ಆಯ್ಕೆ ನಡೆದಿದೆ. ನೂತನ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅಧಿಕಾರಾವಧಿ ನವೆಂಬರ್ 2024ರ ತನಕ ಇದೆ.

English summary
Senior politician Ranil Wickramasinghe takes oath as the new president of Sri Lanka on Thursday. Ranil Wickramasinghe takes oath as the 8th President.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X