• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಲಂಕಾ ಬಂದರಿನಲ್ಲಿ ಬಂದು ನಿಂತ ಚೀನಾ ಹಡಗಿನ ಕಣ್ಣು ಭಾರತದ ಕಡೆಗೆ!?

|
Google Oneindia Kannada News

ನವದೆಹಲಿ, ಆಗಸ್ಟ್ 13: ಭಾರತದ ಸೇನಾ ನೆಲೆಗಳ ಮೇಲೆ ಚೀನಾ ಕಣ್ಣಿಟ್ಟಿರುವ ಕಳವಳದ ನಡುವೆಯೂ ಡ್ರ್ಯಾಗನ್ ರಾಷ್ಟ್ರದ ವಿವಾದಿತ ಸಂಶೋಧನಾ ನೌಕೆಯು ದ್ವೀಪರಾಷ್ಟ್ರಕ್ಕೆ ಭೇಟಿ ನೀಡಲು ಶ್ರೀಲಂಕಾ ಸರ್ಕಾರ ಶನಿವಾರ ಅನುಮತಿ ನೀಡಿದೆ.
ಯುವಾನ್ ವಾಂಗ್ 5 ಅನ್ನು ಅಂತರಾಷ್ಟ್ರೀಯ ಶಿಪ್ಪಿಂಗ್ ಮತ್ತು ಅನಾಲಿಟಿಕ್ಸ್ ಸೈಟ್‌ಗಳಿಂದ ಸಂಶೋಧನೆ ಮತ್ತು ಸಮೀಕ್ಷೆಯ ಹಡಗು ಎಂದು ವಿವರಿಸಲಾಗಿದೆ. ಆದರೆ ಭಾರತೀಯ ಮಾಧ್ಯಮಗಳ ಪ್ರಕಾರ ಇದು ಡ್ಯುಯಲ್-ಯೂಸ್ ಸ್ಪೈ ಶಿಪ್(ಗೂಢಚರ್ಯೆ ಹಡಗು) ಆಗಿದೆ.

ಭಾರತದ ಭದ್ರತೆ ಬಗ್ಗೆ ಕಳವಳ ಮೂಡಿಸಿದ್ದ ಚೀನಾ ಸಂಶೋಧನಾ ನೌಕೆಗೆ ಪ್ರವೇಶವಿಲ್ಲ ಎಂದ ಶ್ರೀಲಂಕಾಭಾರತದ ಭದ್ರತೆ ಬಗ್ಗೆ ಕಳವಳ ಮೂಡಿಸಿದ್ದ ಚೀನಾ ಸಂಶೋಧನಾ ನೌಕೆಗೆ ಪ್ರವೇಶವಿಲ್ಲ ಎಂದ ಶ್ರೀಲಂಕಾ

ಹಿಂದೂ ಮಹಾಸಾಗರದಲ್ಲಿ ಶ್ರೀಲಂಕಾದ ಪ್ರಭಾವ ಮತ್ತು ಬೀಜಿಂಗ್ ಉಪಸ್ಥಿತಿ ಹೆಚ್ಚಿಸಿಕೊಳ್ಳುತ್ತಿರುವುದರ ಬಗ್ಗೆ ಭಾರತ ಗಮನ ಹರಿಸುತ್ತಿದೆ. ಯುವಾನ್ ವಾಂಗ್ 5 ಹಡಗು ಆಗಸ್ಟ್ 11ರಂದೇ ಶ್ರೀಲಂಕಾದಲ್ಲಿರುವ ಚೀನಾದ ಹಂಬಂಟೋಟಾ ಬಂದರಿಗೆ ಬರಬೇಕಿತ್ತು. ಈ ವಿಷಯದಲ್ಲಿ ಭಾರತದ ಆಕ್ಷೇಪಣೆಗಳನ್ನು ಉಲ್ಲೇಖಿಸಿ, ಕೋಲಂಬೋ ಮಾತ್ರ ಭೇಟಿಯನ್ನು ಅನಿರ್ದಿಷ್ಟವಾಗಿ ಮುಂದೂಡುವಂತೆ ಕೇಳಬೇಕಾಗಿತ್ತು. ಆದರೆ ಶ್ರೀಲಂಕಾದ ಬಂದರು ಮಾಸ್ಟರ್ ನಿರ್ಮಲ್ ಪಿ ಸಿಲ್ವಾ, ಆಗಸ್ಟ್ 16 ರಿಂದ 22 ರವರೆಗೆ ಹಂಬಂಟೋಟಾದಲ್ಲಿ ಹಡಗು ಬರಲು ವಿದೇಶಾಂಗ ಸಚಿವಾಲಯದ ಅನುಮತಿ ಪಡೆದಿದ್ದಾರೆ.

ಚೀನಾದ ಹಡಗಿಗೆ ಜುಲೈ 12ರಂದೇ ಅನುಮತಿ

ಚೀನಾದ ಹಡಗಿಗೆ ಜುಲೈ 12ರಂದೇ ಅನುಮತಿ

"ಇಂದು ನಾನು ರಾಜತಾಂತ್ರಿಕ ಅನುಮತಿಯನ್ನು ಪಡೆದುಕೊಂಡಿದ್ದೇನೆ. ಬಂದರಿನಲ್ಲಿ ಲಾಜಿಸ್ಟಿಕ್ಸ್ ಅನ್ನು ಖಚಿತಪಡಿಸಿಕೊಳ್ಳಲು ನಾವು ಹಡಗು ನೇಮಿಸಿದ ಸ್ಥಳೀಯ ಏಜೆಂಟ್‌ನೊಂದಿಗೆ ಕೆಲಸ ಮಾಡುತ್ತೇವೆ" ಎಂದು ಸಿಲ್ವಾ ತಿಳಿಸಿದ್ದಾರೆ. ಚೀನಾದ ಹಡಗಿನ ಭೇಟಿಗೆ ಕೊಲಂಬೊ ಅನುಮತಿಯನ್ನು ನವೀಕರಿಸಿದೆ ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ದೃಢಪಡಿಸಿವೆ. ಕಳೆದ ಜುಲೈ 12ರಂದೇ ಈ ಅನುಮತಿಯನ್ನು ನೀಡಲಾಗಿದೆ. ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿನಿಂದ ನಡೆದ ಪ್ರತಿಭಟನೆಗಳಿಗೆ ಬೆದರಿದ ಮಾಜಿ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಪಲಾಯನ ಮಾಡುವುದಕ್ಕೂ ಪೂರ್ವದಲ್ಲಿಯೇ ಈ ಅನುಮತಿ ನೀಡಿದ್ದರು ಎಂದು ತಿಳಿದು ಬಂದಿದೆ.

ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಸಿದ್ದ ಇಕ್ಕಟ್ಟು

ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಸಿದ್ದ ಇಕ್ಕಟ್ಟು

ಮಾಜಿ ಅಧ್ಯಕ್ಷ ಗೋಟಬಯಾ ರಾಜಪಕ್ಸೆ ಸಹೋದರ ಮಹಿಂದಾ ರಾಜಪಕ್ಸೆ 2005 ರಿಂದ 2015 ರವರೆಗೆ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಚೀನಾದಿಂದಲೇ ಅತಿಹೆಚ್ಚು ಸಾಲ ಪಡೆದಿದ್ದರು. ಅವರು ಸಿಂಗಾಪುರಕ್ಕೆ ಪರಾರಿಯಾದ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆಹಾರ, ಇಂಧನ ಮತ್ತು ಔಷಧಿಗಳ ತೀವ್ರ ಕೊರತೆಯು ಶ್ರೀಲಂಕಾದ ಪ್ರಜೆಗಳನ್ನು ಕೆರಳಿಸಿತ್ತು. ಕೊಲಂಬೊದಲ್ಲಿನ ಅವರ ಮನೆಗೆ ನುಗ್ಗಿನ ಸಾವಿರಾರು ಪ್ರತಿಭಟನಾಕಾರರು, ಅಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಎಲ್ಲಿದೆ ಚೀನಾದ ಯುವಾನ್ ವಾಂಗ್ 5 ಹಡಗು

ಎಲ್ಲಿದೆ ಚೀನಾದ ಯುವಾನ್ ವಾಂಗ್ 5 ಹಡಗು

ಚೀನಾದ ಯುವಾನ್ ವಾಂಗ್ 5 ಹಡಗು ಶುಕ್ರವಾರ ರಾತ್ರಿ ಶ್ರೀಲಂಕಾದ ಆಗ್ನೇಯಕ್ಕೆ ಸುಮಾರು 1,000 ಕಿಲೋಮೀಟರ್ (620 ಮೈಲುಗಳು) ದೂರದಲ್ಲಿದೆ. ಅಲ್ಲಿಂದ ಮುಂದೆ ಹಂಬಂಟೋಟಾದ ಆಳ ಸಮುದ್ರ ಬಂದರಿನ ಕಡೆಗೆ ನಿಧಾನವಾಗಿ ಸಾಗುತ್ತಿದೆ ಎಂದು ಬಂದರು ಅಧಿಕಾರಿಗಳು ತಿಳಿಸಿದ್ದಾರೆ. ಶ್ರೀಲಂಕಾ ಬಂದರನ್ನು 99 ವರ್ಷಗಳ ಕಾಲ ಚೀನಾಕ್ಕೆ 1.12 ಶತಕೋಟಿ ಡಾಲರ್ ಮೊತ್ತಕ್ಕೆ ಗುತ್ತಿಗೆಗೆ ನೀಡಿತು. ಇನ್ನು ಈ ಬಂದರು ನಿರ್ಮಾಣಕ್ಕಾಗಿ ಚೀನಾದ ಕಂಪನಿಗೆ ಶ್ರೀಲಂಕಾ 1.4 ಶತಕೋಟಿ ಡಾಲರ್ ಹಣವನ್ನು ಪಾವತಿ ಮಾಡಿತ್ತು.

ಕೊಲಂಬೋಗೆ ದೂರು ನೀಡಿದ್ದೇಕೆ ಭಾರತ?

ಕೊಲಂಬೋಗೆ ದೂರು ನೀಡಿದ್ದೇಕೆ ಭಾರತ?

ಭಾರತೀಯ ವರದಿಗಳ ಪ್ರಕಾರ, ಯುವಾನ್ ವಾಂಗ್ 5 ಅನ್ನು ಬಾಹ್ಯಾಕಾಶ ಮತ್ತು ಉಪಗ್ರಹ ಟ್ರ್ಯಾಕಿಂಗ್‌ಗಾಗಿ ಬಳಸಿಕೊಳ್ಳಬಹುದು ಮತ್ತು ಖಂಡಾಂತರ ಕ್ಷಿಪಣಿ ಉಡಾವಣೆಗಳಲ್ಲಿ ನಿರ್ದಿಷ್ಟ ಬಳಕೆಗಳನ್ನು ಹೊಂದಿದೆ. ಈ ಹಡಗು ತನ್ನ ಚಟುವಟಿಕೆಗಳ ಮೇಲೆ ಕಣ್ಣಿಡಬಹುದು ಎಂದು ಭಾರತ ಸರ್ಕಾರ ಕಳವಳ ವ್ಯಕ್ತಪಡಿಸಿದ್ದು, ಕೊಲಂಬೊಗೆ ದೂರು ನೀಡಿದೆ.
ನವದೆಹಲಿಯ ವಿದೇಶಾಂಗ ಸಚಿವಾಲಯವು "ಭಾರತದ ಭದ್ರತೆ ಮತ್ತು ಆರ್ಥಿಕ ಹಿತಾಸಕ್ತಿಗಳ ಮೇಲೆ ಯಾವುದೇ ಅಡ್ಡಿಯಾಗದಂತೆ ಮೇಲ್ವಿಚಾರಣೆ ಮಾಡುತ್ತದೆ. ಅದನ್ನು ರಕ್ಷಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ," ಎಂದು ಹೇಳಿದೆ.

English summary
Sri Lanka govt granted permission to Chinese 'spy' ship to visit port despite India's concerns.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X