ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಲಂಕಾ ಬಿಕ್ಕಟ್ಟು ನಡುವೆ ಕರ್ಫ್ಯೂ: ಅಧಿಕ ಸೈನ್ಯ ನಿಯೋಜನೆ

|
Google Oneindia Kannada News

ಕೊಲಂಬೊ ಮೇ 9: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಜನರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರ ಕಚೇರಿಯ ಹೊರಗೆ ಘರ್ಷಣೆ ನಡೆದು 23 ಮಂದಿ ಗಾಯಗೊಂಡಿದ್ದಾರೆ. ಹೀಗಾಗಿ ತಕ್ಷಣವೇ ಜಾರಿಗೆ ಬರುವಂತೆ ಇಡೀ ಶ್ರೀಲಂಕಾದಲ್ಲಿ ಕರ್ಫ್ಯೂ ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸರ್ಕಾರದ ಪರ ಗುಂಪುಗಳು ಪ್ರಧಾನಿ ಕಚೇರಿಯ ಹೊರಗೆ ಪ್ರತಿಭಟನಾಕಾರರ ಮೇಲೆ ದಾಳಿ ನಡೆಸಿದ್ದು, ಕರ್ಫ್ಯೂಗೆ ಕಾರಣವಾಗಿದೆ.

Fact check: ಭಾರತದ ಹಣದಿಂದ ಜಲಫಿರಂಗಿ ಖರೀದಿಸಿದ ಶ್ರೀಲಂಕಾ? ಇದು ಸತ್ಯವೇFact check: ಭಾರತದ ಹಣದಿಂದ ಜಲಫಿರಂಗಿ ಖರೀದಿಸಿದ ಶ್ರೀಲಂಕಾ? ಇದು ಸತ್ಯವೇ

ಮಧ್ಯಂತರ ಆಡಳಿತ ರಚಿಸಲು ಒತ್ತಾಯ

ಮಧ್ಯಂತರ ಆಡಳಿತ ರಚಿಸಲು ಒತ್ತಾಯ

ದೇಶದಲ್ಲಿ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ನಿವಾರಣೆಗೆ ಮಧ್ಯಂತರ ಆಡಳಿತವನ್ನು ರಚಿಸಲು ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರ ಮೇಲೆ ಒತ್ತಡ ಹೇರಲಾಗುತ್ತಿದೆ. ಆದರೂ ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ನಿವಾರಿಸಲು ಸರ್ಕಾರ ವಿಫಲವಾದ ಕಾರಣ ಗೋಟಬಯ ರಾಜಪಕ್ಸೆ ಅವರನ್ನು ಅಧಿಕಾರದಿಂದ ಕೆಳಗಿಳಿಯಬಹುದು ಎಂಬ ಸುದ್ದಿಗಳು ಹಬ್ಬತ್ತಿವೆ. ಹೀಗಾಗಿ ಸರ್ಕಾರದ ಪರ ಗುಂಪುಗಳು ಪ್ರತಿಭಟನೆಯ ಗುಂಪುಗಳ ನಡುವೆ ಹಿಂಸಾಚಾರ ಸಂಭವಿಸಿದೆ.

ರಾಷ್ಟ್ರದಾದ್ಯಂತ ಕರ್ಫ್ಯೂ

ರಾಷ್ಟ್ರದಾದ್ಯಂತ ಕರ್ಫ್ಯೂ

ಹೀಗಾಗಿ ಮುಂದಿನ ಸೂಚನೆ ಬರುವವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ದ್ವೀಪದಾದ್ಯಂತ ಕರ್ಫ್ಯೂ ವಿಧಿಸಲಾಗಿದೆ ಎಂದು ಪೊಲೀಸ್ ವಕ್ತಾರರು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮಾತ್ರವಲ್ಲದೆ ಸ್ಥಳದಲ್ಲಿ ಶಾಂತತೆಯನ್ನು ಕಾಪಾಡಲು ಪ್ರತಿಭಟನಾ ಸ್ಥಳಕ್ಕೆ ಮಿಲಿಟರಿ ತುಕಡಿಯನ್ನು ನಿಯೋಜಿಸಲಾಗಿದೆ. ರಾಜಪಕ್ಸೆ ಸಹೋದರರಾದ ಅಧ್ಯಕ್ಷ ಗೋಟಬಯ ರಾಜಪಕ್ಸೆ ಮತ್ತು ಪ್ರಧಾನಿ ಮಹಿಂದಾ ರಾಜಪಕ್ಸೆ ತಮ್ಮ ರಾಜೀನಾಮೆಯ ಕರೆಗಳನ್ನು ಇಲ್ಲಿಯವರೆಗೆ ಧಿಕ್ಕರಿಸಿದ್ದಾರೆ.

ಶುಕ್ರವಾರ ನಡೆದ ವಿಶೇಷ ಕ್ಯಾಬಿನೆಟ್ ಸಭೆಯಲ್ಲಿ ಅಧ್ಯಕ್ಷ ಗೋತಾಬಯ ರಾಜಪಕ್ಸೆ ಶುಕ್ರವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನ ಹಿಡಿತದಲ್ಲಿರುವ ಶ್ರೀಲಂಕಾದಲ್ಲಿ ಕೇವಲ ಒಂದು ತಿಂಗಳ ಅವಧಿಯಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದು ಇದು ಎರಡನೇ ಬಾರಿ.

ಆರ್ಥಿಕ ಪ್ರಕ್ಷುಬ್ಧತೆ

ಆರ್ಥಿಕ ಪ್ರಕ್ಷುಬ್ಧತೆ

1948 ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದ ನಂತರ ಶ್ರೀಲಂಕಾ ಪ್ರಸ್ತುತ ಅಭೂತಪೂರ್ವ ಆರ್ಥಿಕ ಪ್ರಕ್ಷುಬ್ಧತೆಯ ಸುಳಿಯಲ್ಲಿದೆ. ವಿದೇಶಿ ಕರೆನ್ಸಿಯ ಕೊರತೆಯಿಂದಾಗಿ ಬಿಕ್ಕಟ್ಟು ಉಂಟಾಗುತ್ತದೆ. ಇದರರ್ಥ ದೇಶವು ಪ್ರಧಾನ ಆಹಾರಗಳು ಮತ್ತು ಇಂಧನದ ಆಮದುಗಳಿಗೆ ಪಾವತಿಸಲು ಸಾಧ್ಯವಿಲ್ಲ, ಇದು ತೀವ್ರ ಕೊರತೆ ಮತ್ತು ಹೆಚ್ಚಿನ ಬೆಲೆಗಳಿಗೆ ಕಾರಣವಾಗುತ್ತಿದೆ.

ಬೀದಿಗಿಳಿದ ಪ್ರತಿಭಟನಾಕಾರರು

ಬೀದಿಗಿಳಿದ ಪ್ರತಿಭಟನಾಕಾರರು

ಏಪ್ರಿಲ್ 9 ರಿಂದ ಶ್ರೀಲಂಕಾದಾದ್ಯಂತ ಸಾವಿರಾರು ಪ್ರತಿಭಟನಾಕಾರರು ಬೀದಿಗಿಳಿದಿದ್ದಾರೆ. ಏಕೆಂದರೆ ಪ್ರಮುಖ ಆಮದುಗಳಿಗಾಗಿ ಸರ್ಕಾರ ಹಣವಿಲ್ಲದೆ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ ಮತ್ತು ಇಂಧನ, ಔಷಧಗಳು ಮತ್ತು ವಿದ್ಯುತ್ ಪೂರೈಕೆಯಲ್ಲಿ ತೀವ್ರ ಕೊರತೆಯಿದೆ.

English summary
People's protest against the economic crisis in Sri Lanka has turned into violence and a nationwide curfew has been imposed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X