ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

Sri Lanka Crisis Live Updates: Sri Lanka Crisis: Sri Lanka Crisis: ಶ್ರೀಲಂಕಾದಲ್ಲಿ ಮತ್ತೆ ಜನರ ಪ್ರತಿಭಟನೆ

|
Google Oneindia Kannada News

ಕೊಲಂಬೋ, ಜುಲೈ 22: ದ್ವೀಪರಾಷ್ಟ್ರದಲ್ಲಿನ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಶ್ರೀಲಂಕಾದ ನೂತನ ಅಧ್ಯಕ್ಷರ ಆಯ್ಕೆಯಾಗಿ ಬುಧವಾರ ಚುನಾವಣೆ ನಡೆದಿತ್ತು. ಅಧ್ಯಕ್ಷರಾಗಿದ್ದ ಗೋಟಾಬಯ ರಾಜಪಕ್ಸೆ ದೇಶ ಬಿಟ್ಟು ಪಲಾಯನ ಮಾಡಿದ ನಂತರ ಶ್ರೀಲಂಕಾಕ್ಕೆ ಹೊಸ ಅಧ್ಯಕ್ಷರ ನೇಮಕವಾಗಿದೆ.

ನೂತನ ಅಧ್ಯಕ್ಷರಾಗಿ ರನಿಲ್ ವಿಕ್ರಮಸಿಂಘೆ ಗುರುವಾರ ಪ್ರಮಾಣ ವಚನ ಸ್ವೀಕಾರ ಮಾಡಿದರು. ಆದರೆ ತಡರಾತ್ರಿ ಪುನಃ ದೇಶದಲ್ಲಿ ಪ್ರತಿಭಟನೆಗಳು ಆರಂಭವಾಗಿವೆ. ಅಸಮಾಧಾನಗೊಂಡಿರುವ ನೂರಾರು ನಾಗರಿಕರು ಕೊಲಂಬೊದಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ದೇಶದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟ ಜನರು ಏಪ್ರಿಲ್‌ನಲ್ಲಿ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದರು. ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ 100 ದಿನಗಳನ್ನು ಪೂರೈಸಿದೆ. ಗೋಟಾಬಯ ರಾಜಪಕ್ಸೆ ರಾಜೀನಾಮೆ ನಂತರ ಜನರ ಆಕ್ರೋಶ ರಾನಿನ್ ವಿಕ್ರಮಸಿಂಘೆ ವಿರುದ್ಧ ತಿರುಗಿದೆ.

Sri Lanka Crisis Live Updates in Kannada : Know Latest News, Current Situation and What is Happening in Sri Lanka

Recommended Video

      RCB ಅಭಿಮಾನಿಗಳೆಲ್ಲಾ ಈಗ Mumbai Indians ಅಭಿಮಾನಿಗಳು | Oneindia Kannada

      ದ್ವೀಪರಾಷ್ಟ್ರದಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ. ಶ್ರೀಲಂಕಾದಲ್ಲಿ ನಡೆಯುತ್ತಿರುವ ಪ್ರತಿಭಟನೆ ಮತ್ತು ತುರ್ತು ಸಂದರ್ಭವನ್ನು ನಿರ್ವಹಿಸಲು ಸರ್ಕಾರದ ಪ್ರಯತ್ನಗಳು ಹೇಗಿವೆ ಎಂಬುದರ ಕುರಿತು ಕ್ಷಣಕ್ಷಣದ ಮಾಹಿತಿಯನ್ನು ಮುಂದೆ ಓದಿ ತಿಳಿಯಿರಿ.

      Newest FirstOldest First
      9:23 AM, 22 Jul

      ಶ್ರೀಲಂಕಾದಲ್ಲಿ ಮತ್ತೆ ಜನರ ಪ್ರತಿಭಟನೆ
      6:26 AM, 22 Jul

      ಹೊಸ ಅಧ್ಯಕ್ಷರು ಪ್ರಮಾಣ ವಚನ ಸ್ವೀಕಾರ ಮಾಡಿದ ಬಳಿಕ ಮತ್ತೆ ಶ್ರೀಲಂಕಾದಲ್ಲಿ ಪ್ರತಿಭಟನೆ ಆರಂಭವಾಗಿದೆ. ಕೊಲಂಬೊದಲ್ಲಿನ ಗಾಲ್ ಫೇಸ್ ಸ್ಥಳದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ.
      8:31 AM, 18 Jul

      ಶ್ರೀಲಂಕಾದ ಹಂಗಾಮಿ ಅಧ್ಯಕ್ಷರು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ.
      4:04 PM, 17 Jul

      ಶ್ರೀಲಂಕಾ ಬಿಕ್ಕಟ್ಟಿನಲ್ಲಿ ಮಧ್ಯಪ್ರವೇಶಿಸುವಂತೆ ತಮಿಳುನಾಡು ಮೂಲದ ಪಕ್ಷಗಳು ಮಾಡಿದ ಮನವಿಯ ನಂತರ ಕೇಂದ್ರ ಸರ್ಕಾರ ಮಂಗಳವಾರ ಸಂಜೆ ಸರ್ವಪಕ್ಷ ಸಭೆ ಕರೆದಿದೆ. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ಡಾ. ಎಸ್. ಜೈಶಂಕರ್ ಬ್ರೀಫಿಂಗ್‌ಗಳೊಂದಿಗೆ ಸರ್ವಪಕ್ಷ ಸಭೆ ಕರೆಯಲಾಗಿದೆ.
      12:13 PM, 17 Jul

      ಅಮೆರಿಕದಲ್ಲಿ ಶ್ರೀಲಂಕಾ ನಿವಾಸಿಗಳ ಚಿಕ್ಕ ಗುಂಪು ಶ್ರೀಲಂಕಾದ ಮಾಜಿ ಅಧ್ಯಕ್ಷ ಗೋಟಬಯ ರಾಜಪಕ್ಸ ಪುತ್ರ ಮನೋಜ್ ರಾಜಪಕ್ಸ ನಿವಾಸದ ಮುಂದೆ ಪ್ರತಿಭಟನೆ ನಡೆಸಿದರು. ಗೋಟಬಯ ರಾಜಪಕ್ಸ ಸಿಂಗಾಪುರದಿಂದ ಶ್ರೀಲಂಕಾಕ್ಕೆ ಮರಳುವಂತೆ ಸೂಚಿಸಬೇಕು ಎಂದು ಘೋಷಣೆಗಳನ್ನು ಕೂಗಿದರು.
      10:41 AM, 17 Jul

      ನಾವು 225 ಸಂಸದರು ಅಧ್ಯಕ್ಷರನ್ನು ಆಯ್ಕೆ ಮಾಡಿದ್ದೇವೆ. ಗೋಟಬಯ ರಾಜಪಕ್ಸೆ ಬಹುಮತವನ್ನು ಹೊಂದಿದ್ದಾರೆ ಮತ್ತು ಅಧ್ಯಕ್ಷರನ್ನು ಈ ಸಂಯೋಜನೆಯಿಂದ ಆಯ್ಕೆ ಮಾಡಲಾಗುತ್ತದೆ. ನಾವು ಎಲ್ಲಾ ಸದಸ್ಯರೊಂದಿಗೆ ಮಾತನಾಡುತ್ತಿದ್ದೇವೆ ಎಂದು ಲೋಪಿ ಸಜಿತ್ ಪ್ರೇಮದಾಸ ಹೇಳಿದ್ದಾರೆ.
      9:24 PM, 15 Jul

      ಶ್ರೀಲಂಕಾದ ಜನರ ಪ್ರಜಾಸತ್ತಾತ್ಮಕ ಆಕಾಂಕ್ಷೆಗಳಿಗೆ ಅಮೆರಿಕ ಬದ್ಧವಾಗಿದೆ ಎಂದು ಕೊಲಂಬೊದಲ್ಲಿರುವ ಅಮೆರಿಕ ರಾಯಭಾರಿ ಹೇಳಿದ್ದಾರೆ. ಕಾನೂನಿನ ನಿಯಮವನ್ನು ಎತ್ತಿಹಿಡಿಯಲು ಎಲ್ಲಾ ಪಕ್ಷಗಳು ಒಟ್ಟಾಗಿ ಕೆಲಸ ಮಾಡಲಿ ಎಂದು ಅವರು ಒತ್ತಾಯಿಸಿದ್ದಾರೆ.
      Advertisement
      6:36 PM, 15 Jul

      ಶ್ರೀಲಂಕಾದ ಮಾಜಿ ಪ್ರಧಾನಿ ಮಹೀಂದ್ರಾ ರಾಜಪಕ್ಸ ದೇಶ ಬಿಟ್ಟು ಹೋಗದಂತೆ ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಜುಲೈ 28ರ ತನಕ ಈ ಆದೇಶ ಜಾರಿಯಲ್ಲಿರುತ್ತದೆ.
      4:26 PM, 15 Jul

      ಶ್ರೀಲಂಕಾ ಚೀನಾದೊಂದಿಗೆ 4 ಶತಕೋಟಿ ಡಾಲರ್ ಸಹಾಯಕ್ಕಾಗಿ ಮಾತುಕತೆ ನಡೆಸುತ್ತಿದೆ ಮತ್ತು ಚೀನಾ ಸರ್ಕಾರವು ಒಂದು ಹಂತದಲ್ಲಿ ನೆರವು ನೀಡಲು ಒಪ್ಪುತ್ತದೆ ಎಂದು ವಿಶ್ವಾಸ ಹೊಂದಿದೆ ಎಂದು ಬ್ಲೂಮ್‌ಬರ್ಗ್ ಸುದ್ದಿ ಸಂಸ್ಥೆ ಶುಕ್ರವಾರ ವರದಿ ಮಾಡಿದೆ.
      1:19 PM, 15 Jul

      ಪ್ರಮಾಣವಚನ ಸ್ವೀಕರಿಸಿದ ವಿಕ್ರಮಸಿಂಘೆ

      ರಾನಿಲ್ ವಿಕ್ರಮಸಿಂಘೆ ಅವರು ಎರಡು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ಶ್ರೀಲಂಕಾದ ಉನ್ನತ ನಾಯಕರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಶ್ರೀಲಂಕಾದ ಮುಖ್ಯ ನ್ಯಾಯಮೂರ್ತಿ ಜಯಂತ ಜಯಸೂರ್ಯ ಅವರು ವಿಕ್ರಮಸಿಂಘೆ ಅವರು ಹಂಗಾಮಿ ಅಧ್ಯಕ್ಷರಾಗಿ ಪ್ರಮಾಣ ವಚನವನ್ನು ಓದಿದರು.
      11:30 AM, 15 Jul

      7 ದಿನಗಳಲ್ಲಿ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಶ್ರೀಲಂಕಾ ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ಶುಕ್ರವಾರ ಹೇಳಿದ್ದಾರೆ.
      11:07 AM, 15 Jul

      ಬಿಕ್ಕಟ್ಟು ಪೀಡಿತ ಶ್ರೀಲಂಕಾದ ಸಂಸತ್ತಿನ ಸ್ಪೀಕರ್ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರ ರಾಜೀನಾಮೆ ಪತ್ರವನ್ನು ಅಂಗೀಕರಿಸಿದ್ದಾರೆ. 'ಈ ಹಂತದಿಂದ ನಾವು ಸಾಂವಿಧಾನಿಕವಾಗಿ ಹೊಸ ಅಧ್ಯಕ್ಷರನ್ನು ನೇಮಿಸಲು ಮುಂದಾಗುತ್ತೇವೆ' ಎಂದು ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ಶುಕ್ರವಾರ ಹೇಳಿದ್ದಾರೆ.
      Advertisement
      11:03 AM, 15 Jul

      ಶನಿವಾರ ಸಂಸತ್ತಿನ ಸಭೆ ನಡೆಯಲಿದೆ. ಹೀಗಾಗಿ ಸಂಸದರು ಎಲ್ಲಾ ಪ್ರಕ್ರಿಯೆಗಳಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಿ ಎಂದು ಶ್ರೀಲಂಕಾ ಸ್ಪೀಕರ್ ಸಾರ್ವಜನಿಕರನ್ನು ಒತ್ತಾಯಿಸಿದ್ದಾರೆ.
      8:36 AM, 15 Jul

      ಅಧ್ಯಕ್ಷ ಗೊಟಬಯ ರಾಜಪಕ್ಸೆ ರಾಜೀನಾಮೆ ನೀಡುತ್ತಿದ್ದಂತೆ ಶ್ರೀಲಂಕಾದಲ್ಲಿ ಜನರು ಬೀದಿಗಿಳಿದು ಸಂಭ್ರಮಿಸಿದ್ದಾರೆ.
      10:32 PM, 14 Jul

      ಶ್ರೀಲಂಕಾ ಅಧ್ಯಕ್ಷ ಗೋಟಬಯಾ ರಾಜಪಕ್ಸ ರಾಜೀನಾಮೆ ಬಳಿಕ ಪ್ರತಿಭಟನಾನಿರತರು ಎಲ್ಲಾ ಸರ್ಕಾರಿ ಕಚೇರಿಗಳಿಂದ ವಾಪಸ್ ಆಗಿದ್ದಾರೆ. ಆದರೆ ಅಧ್ಯಕ್ಷರ ನಿವಾಸದಲ್ಲಿರುವವರು ಅಲ್ಲಿಯೇ ಇದ್ದು, ಅಧ್ಯಕ್ಷರ ಕುರ್ಚಿಯಲ್ಲಿ ಕುಳಿತು ಪೋಟೋ ತೆಗೆಸಿಕೊಳ್ಳುತ್ತಿದ್ದಾರೆ.
      8:56 PM, 14 Jul

      "ಅಧ್ಯಕ್ಷ ಗೋಟಬಯಾ ರಾಜಪಕ್ಸ ರಾಜೀನಾಮೆ ನೀಡಿದ್ದಾರೆ. ಶ್ರೀಲಂಕಾ ಈಗ ಮುಂದುವರಿಯಬಹುದೆಂದು ನಾನು ಭಾವಿಸುತ್ತೇನೆ. ಅಧ್ಯಕ್ಷರು ಇನ್ನೂ ಶ್ರೀಲಂಕಾದಲ್ಲಿದಿದ್ದರೆ ರಾಜೀನಾಮೆ ನೀಡುತ್ತಿರಲಿಲ್ಲ ಎಂದು ನಾನು ನಂಬುತ್ತೇನೆ. ನನ್ನ ಶ್ರೀಲಂಕಾದ ಜನತೆಗೆ ಶುಭಾಶಯಗಳು" ಎಂದು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ನಶೀದ್ ಹೇಳಿದ್ದಾರೆ.
      7:27 PM, 14 Jul

      ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಸೆ ರಾಜೀನಾಮೆ ಪತ್ರವನ್ನು ಸ್ಪೀಕರ್‌ಗೆ ರವಾನಿಸಿದ್ದಾರೆ. ಗೋಟಬಯ ರಾಜಪಕ್ಸೆ ಗುರುವಾರ ಸಿಂಗಾಪುರಕ್ಕೆ ಪ್ರಯಾಣಿಸಿದ್ದಾರೆ.
      7:01 PM, 14 Jul

      ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಸೆ ಖಾಸಗಿ ಭೇಟಿಯಲ್ಲಿದ್ದಾರೆ ಮತ್ತು ಅವರಿಗೆ ಆಶ್ರಯ ನೀಡಲಾಗಿಲ್ಲ ಎಂದು ಸಿಂಗಾಪುರ ಸರ್ಕಾರವು ಹೇಳಿದೆ. ಈ ಮೂಲಕ ರಾಜಪಕ್ಸೆಗೆ ಖಾಸಗಿ ಭೇಟಿಗಾಗಿ ಸಿಂಗಾಪುರ ಪ್ರವೇಶಿಸಲು ಅನುಮತಿ ನೀಡಿರುವುದು ದೃಢಪಟ್ಟಿದೆ.
      5:14 PM, 14 Jul

      ಆರ್ಥಿಕ ಬಿಕ್ಕಟ್ಟಿನ ಬಳಿಕ ಶ್ರೀಲಂಕಾದಲ್ಲಿ ಪ್ರತಿಭಟನೆ ಕಾವು ಜೋರಾಗದೆ. ಆಸ್ತಿ ಮತ್ತು ಜೀವ ನಾಶವನ್ನು ತಡೆಯಲು ಅಗತ್ಯ ಬಲವನ್ನು ಬಳಸಲು ಶ್ರೀಲಂಕಾ ಸೈನಿಕರಿಗೆ ಅಧಿಕಾರ ನೀಡಲಾಗಿದೆ ಎಂದು ದೇಶದ ಸೇನೆ ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ.
      5:09 PM, 14 Jul

      ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಮತ್ತು ಅವರ ಪತ್ನಿಯನ್ನು ಹೊತ್ತ ವಿಮಾನ ಸಿಂಗಾಪುರದಲ್ಲಿ ಲ್ಯಾಂಡ ಆಗಿದೆ.
      3:25 PM, 14 Jul

      ಆಸ್ತಿ ಮತ್ತು ಜೀವ ನಾಶವನ್ನು ತಡೆಯಲು ಶ್ರೀಲಂಕಾದ ಪಡೆಗಳಿಗೆ ಹೆಚ್ಚಿನ ಬಲವನ್ನು ಬಳಸಲು ಅಧಿಕಾರ ನೀಡಲಾಗಿದೆ ಎಂದು ಸೇನೆಯ ಹೇಳಿಕೆಯನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
      2:56 PM, 14 Jul

      ಶ್ರೀಲಂಕಾದಲ್ಲಿ ತೀವ್ರಗೊಂಡ ಪ್ರತಿಭಟನೆಯಿಂದಾಗಿ ರಾಜಧಾನಿಯಲ್ಲಿ ಕರ್ಫ್ಯೂ ಘೋಷಿಸಲಾಗಿದೆ. ಪ್ರದೇಶಗಳಲ್ಲಿ ಪ್ರದರ್ಶನದ ಸಮಯದಲ್ಲಿ ಯಾವುದೇ ಅಹಿತಕರ ಘಟನೆಯನ್ನು ತಪ್ಪಿಸುವ ಸಲುವಾಗಿ, ಶ್ರೀಲಂಕಾ ಸೇನೆಯು ಮಿಲಿಟರಿ ಶಸ್ತ್ರಸಜ್ಜಿತ ವಾಹನಗಳನ್ನು ರಸ್ತೆಗಳಲ್ಲಿ ನಿಲ್ಲಿಸಿದೆ. ಶ್ರೀಲಂಕಾ ಅಂತಹ ಪರಿಸ್ಥಿತಿಯನ್ನು ಹಿಂದೆಂದೂ ನೋಡಿರಲಿಲ್ಲ. ರಾಜಕಾರಣಿಗಳ ತಪ್ಪು ನೀತಿಗಳು ಜನರನ್ನು ಮತ್ತು ದೇಶವನ್ನು ವಿನಾಶದ ಹಾದಿಗೆ ತಂದಿವೆ.
      2:03 PM, 14 Jul

      ಶ್ರೀಲಂಕಾದಲ್ಲಿ ತೀವ್ರ ಪ್ರತಿಭಟನೆಯ ನಂತರ ಮಾಲ್ಡೀವ್ಸ್ ರಾಜಧಾನಿ ಮಾಲೆಗೆ ತೆರಳಿದ್ದ ಗೊಟಬಯ ರಾಜಪಕ್ಸೆ ಇಂದು ಸಿಂಗಾಪುರಕ್ಕೆ ತೆರಳಿದರು. ರಾಜಪಕ್ಸೆ ಮಾಲ್ಡೀವ್ಸ್ ತೊರೆದು ಖಾಸಗಿ ಜೆಟ್‌ನಲ್ಲಿ ಸಿಂಗಾಪುರಕ್ಕೆ ಹೋಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಕ್ಕೂ ಮುನ್ನ ರಾಜಪಕ್ಸೆ ಅವರ ದ್ವೀಪ ರಾಷ್ಟ್ರದಿಂದ ಸಿಂಗಾಪುರಕ್ಕೆ ತೆರಳಲು ಖಾಸಗಿ ಜೆಟ್ ವಿಮಾನವೊಂದು ಮಾಲೆಗೆ ಬಂದಿಳಿದಿತ್ತು. ಡೈಲಿ ಮಿರರ್ ಪ್ರಕಾರ, ರಾಜಪಕ್ಸೆ, ಅವರ ಪತ್ನಿ ಅಯೋಮಾ ರಾಜಪಕ್ಸೆ ಮತ್ತು ಇಬ್ಬರು ಭದ್ರತಾ ಅಧಿಕಾರಿಗಳು ಮಂಗಳವಾರ ರಾತ್ರಿ ಮಾಲೆಯಿಂದ ಸಿಂಗಾಪುರಕ್ಕೆ ಸಿಂಗಾಪುರ್ ಏರ್‌ಲೈನ್ಸ್ ವಿಮಾನವನ್ನು ಹತ್ತಬೇಕಿತ್ತು, ಆದರೆ ಭದ್ರತಾ ಕಾರಣಗಳಿಂದ ಸಮಯಕ್ಕೆ ತಲುಪಲಿಲ್ಲ.
      12:54 PM, 14 Jul

      ಶ್ರೀಲಂಕಾ ಸರ್ಕಾರವು ಜುಲೈ 14 ರಂದು ಮಧ್ಯಾಹ್ನ 12 ರಿಂದ ಜುಲೈ 15 ಬೆಳಿಗ್ಗೆ 5 ರವರೆಗೆ ಕೊಲಂಬೊದಲ್ಲಿ ಕರ್ಫ್ಯೂ ವಿಧಿಸಿದೆ ಎಂದು ಸರ್ಕಾರವನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
      12:23 PM, 14 Jul

      ಸಾಲದ ಸುಳಿಯಲ್ಲಿ ಸಿಲುಕಿರುವ ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು ಪರಿಹಾರಕ್ಕೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ, ದ್ವೀಪ ರಾಷ್ಟ್ರಕ್ಕೆ ತೆರಳಬೇಕಿದ್ದ ನೂರಕ್ಕೂ ಹೆಚ್ಚು ವಿಮಾನಗಳನ್ನು ಭಾರತದ ಕೇರಳದ ಕೊಚ್ಚಿ ಮತ್ತು ತಿರುವನಂತಪುರಂ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಗಿದೆ.
      12:17 PM, 14 Jul

      ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ ಉದ್ಭವಿಸಿದ ರಾಜಕೀಯ ಬಿಕ್ಕಟ್ಟಿನ ಮಧ್ಯೆ, ಪ್ರತಿಭಟನಾಕಾರರು ರಾಷ್ಟ್ರಪತಿ ಭವನ ಮತ್ತು ಪ್ರಧಾನಿ ನಿವಾಸವನ್ನು ಸುತ್ತುವರೆದಿದ್ದಾರೆ. ಇದೀಗ ಈ ಅಧಿಕೃತ ಕಟ್ಟಡಗಳಿಂದ ದೂರ ಸರಿಯಲಿದ್ದಾರೆ ಎಂಬ ಸುದ್ದಿ ಬಂದಿದೆ. ಶ್ರೀಲಂಕಾದಲ್ಲಿ ಪ್ರತಿಭಟನಾಕಾರರು ಕಟ್ಟಡಗಳನ್ನು ತೊರೆಯುವುದಾಗಿ ಹೇಳಿದ್ದಾರೆ ಎಂದು ಎಎಫ್‌ಪಿ ವರದಿ ಮಾಡಿದೆ.
      12:13 PM, 14 Jul

      ಡೈಲಿ ಮಿರರ್ ವರದಿ ಪ್ರಕಾರ, ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆಯನ್ನು ಸಿಂಗಾಪುರಕ್ಕೆ ಕರೆದೊಯ್ಯಲು ಖಾಸಗಿ ವಿಮಾನವೊಂದು ಮಾಲ್ಡೀವ್ಸ್ ತಲುಪಿದೆ.
      10:54 AM, 14 Jul

      ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರ ರಾಜೀನಾಮೆಯನ್ನು ಇನ್ನೂ ಸ್ವೀಕರಿಸಿಲ್ಲ ಎಂದು ಶ್ರೀಲಂಕಾ ಸಂಸತ್ತಿನ ಸ್ಪೀಕರ್ ಕಚೇರಿ ತಿಳಿಸಿದೆ. ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸೆ ಮಾಲ್ಡೀವ್ಸ್‌ನಲ್ಲಿದ್ದಾರೆ ಮತ್ತು ಅವರು ಸಿಂಗಾಪುರಕ್ಕೆ ಹಾರಬೇಕಿತ್ತು ಆದರೆ ಭದ್ರತಾ ಕಾರಣಗಳಿಂದ ಅವರು ಸಿಂಗಾಪುರ್ ಏರ್‌ಲೈನ್ಸ್ ವಿಮಾನವನ್ನು ಹತ್ತಲು ಸಾಧ್ಯವಾಗಲಿಲ್ಲ. ಸುದ್ದಿ ಪ್ರಕಾರ, ಗೊಟಬಯ ಈಗ ಖಾಸಗಿ ವಿಮಾನಕ್ಕಾಗಿ ಕಾಯುತ್ತಿದ್ದಾರೆ.
      10:08 AM, 14 Jul

      ಶ್ರೀಲಂಕಾದಲ್ಲಿನ ರಾಜಕೀಯ ಪ್ರಕ್ಷುಬ್ಧತೆಯಿಂದ ಉದ್ಭವಿಸುವ ಪರಿಸ್ಥಿತಿಗಳನ್ನು ಪರಿಹರಿಸಲು ವಿಶ್ವಸಂಸ್ಥೆಯು ದೇಶದ ಎಲ್ಲಾ ನಾಯಕರಿಗೆ ಕರೆ ನೀಡಿದೆ. ದೇಶಕ್ಕೆ ಶಾಂತಿ ಮತ್ತು ಪ್ರಜಾಪ್ರಭುತ್ವವನ್ನು ತರಲು ಒಪ್ಪಂದದ ಮನೋಭಾವವನ್ನು ಅಳವಡಿಸಿಕೊಳ್ಳುವಂತೆ ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಎಲ್ಲಾ ಪಕ್ಷದ ನಾಯಕರನ್ನು ಒತ್ತಾಯಿಸಿದರು.
      9:05 AM, 14 Jul

      ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರು ಮಾಲ್ಡೀವ್ಸ್‌ನಿಂದ ಸಿಂಗಾಪುರಕ್ಕೆ ತೆರಳುತ್ತಿದ್ದು, ವಿಮಾನ ನಿಲ್ದಾಣದಲ್ಲಿ ಭಾರೀ ಭದ್ರತೆಯನ್ನು ನಿಯೋಜಿಸಲಾಗಿದೆ.
      READ MORE

      English summary
      Sri Lanka Crisis Live Updates in Kannada: Sri Lankan PM Mahinda Rajapaksa resigns; curfew imposed across nation; Violence erupts across country. Check Latest News, Current Situation and What is Happening in Sri Lanka in kannada.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X