ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಲಂಬೋ: ನಿಷ್ಕ್ರಿಯಗೊಳಿಸುವ ವೇಳೆ ಮತ್ತೊಂದು ಬಾಂಬ್ ಸ್ಫೋಟ

|
Google Oneindia Kannada News

ಕೋಲಂಬೋ, ಏಪ್ರಿಲ್ 22: ಸತತ ಬಾಂಬ್ ಸ್ಫೋಟದ ದಾಳಿಗಳಿಂದ ನಲುಗಿರುವ ಶ್ರೀಲಂಕಾದಲ್ಲಿ ಮತ್ತೊಂದು ಸ್ಫೋಟ ಸಂಭವಿಸಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಈ ಸ್ಫೋಟವು ಪತ್ತೆಯಾದ ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸುವ ಪ್ರಯತ್ನದಲ್ಲಿದ್ದಾಗ ಉಂಟಾಗಿದೆ.

ಶ್ರೀಲಂಕಾ ಸ್ಫೋಟ: ಇನ್ನೂ ಪತ್ತೆಯಾಗದ ಇಬ್ಬರು ಕನ್ನಡಿಗರು ಶ್ರೀಲಂಕಾ ಸ್ಫೋಟ: ಇನ್ನೂ ಪತ್ತೆಯಾಗದ ಇಬ್ಬರು ಕನ್ನಡಿಗರು

ಸೇಂಟ್ ಆಂಟೋನಿ ಚರ್ಚ್ ಸಮೀಪದಲ್ಲಿ ಭಾನುವಾರದಿಂದಲೂ ನಿಲ್ಲಿಸಿದ್ದ ವ್ಯಾನ್ ಒಂದು ಅನುಮಾನ ಮೂಡಿಸಿತ್ತು. ಅದರಲ್ಲಿ ಪರಿಶೀಲನೆ ನಡೆಸಿದಾಗ ಮೂರು ಬಾಂಬ್‌ಗಳು ಪತ್ತೆಯಾಗಿದ್ದವು. ಎಸ್‌ಟಿಎಫ್ ಘಟಕದ ಸಿಬ್ಬಂದಿ ಮತ್ತು ವಾಯುದಳದ ಸಿಬ್ಬಂದಿ ಅವುಗಳನ್ನು ನಿಷ್ಕ್ರಿಯಗೊಳಿಸಲು ಪ್ರಯತ್ನಿಸಿದರು. ಆ ಸಂದರ್ಭದಲ್ಲಿ ಬಾಂಬ್‌ಗಳು ಸ್ಫೋಟಗೊಂಡಿವೆ.

ಶ್ರೀಲಂಕಾ ಸರಣಿ ಬಾಂಬ್ ಸ್ಫೋಟ: ಇನ್ನಿಬ್ಬರು ಕನ್ನಡಿಗರು ಸಾವು

ಈ ಘಟನೆಯಲ್ಲಿ ಉಂಟಾದ ಸಾವು-ನೋವುಗಳ ಬಗ್ಗೆ ಮಾಹಿತಿ ದೊರೆತಿಲ್ಲ.

Sri lanka colombo one more bomb explosion in a van while defusing

ಕೊಲಂಬೋದ ಮುಖ್ಯ ಬಸ್ ನಿಲ್ದಾಣವೊಂದರಲ್ಲಿ 87 ಸಜೀವ ಬಾಂಬ್‌ಗಳು ಪತ್ತೆಯಾಗಿವೆ. ಇದರಿಂದ ಭಾನುವಾರ ಸರಣಿ ಸ್ಫೋಟಗಳು ನಡೆದ ಬಳಿಕ ದ್ವೀಪ ದೇಶದಲ್ಲಿ ಸ್ಫೋಟಗಳ ಕುರಿತಾದ ಭಯ ಕಡಿಮೆಯಾಗಿಲ್ಲ.

ಸಮುದ್ರ ಗಡಿಯುದ್ದಕ್ಕೂ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಶ್ರೀಲಂಕಾದಿಂದ ಆತ್ಮಾಹುತಿ ದಾಳಿಕೋರರು ಪರಾರಿಯಾಗದಂತೆ ತಡೆಯಲು ಹಡಗು ಮತ್ತು ಬಂದರು ಪಡೆಗಳನ್ನು ನಿಯೋಜನೆ ಮಾಡಲಾಗಿದೆ. ಭೀಕರ ದಾಳಿಯ ಹಿನ್ನೆಲೆಯಲ್ಲಿ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಸೋಮವಾರ ಮಧ್ಯರಾತ್ರಿಯಿಂದ ರಾಷ್ಟ್ರವ್ಯಾಪಿ ತುರ್ತಿ ಪರಿಸ್ಥಿತಿ ಘೋಷಣೆ ಮಾಡಿದ್ದಾರೆ.

English summary
Sri Lanka Colombo: One more bomb blast happened in a van near St Anthony Shrine while STF and Air Force tried to difuse the bomb.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X