• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಯೋತ್ಪಾದಕರಾಗಲು ನಿರುದ್ಯೋಗ ಕಾರಣ ಎನ್ನುತ್ತಾರೆ, ಹಾಗಾದರೆ ಇದೇನಿದು?

|

ಕೊಲಂಬೋ, ಏಪ್ರಿಲ್ 24: ಶ್ರೀಲಂಕಾದಲ್ಲಿ ನಡೆದ ಭಯಾನಕ ಭಯೋತ್ಪಾದನಾ ದಾಳಿ ಇಡೀ ಜಗತ್ತನ್ನು ತಲ್ಲಣಗೊಳಿಸಿದೆ. ಒಂಬತ್ತು ಮಂದಿ ಆತ್ಮಾಹುತಿ ಬಾಂಬರ್‌ಗಳು ಒಂದೇ ದಿನ ಈ ಯೋಜಿತ ದಾಳಿ ನಡೆಸಿ ಮುನ್ನೂರಕ್ಕೂ ಹೆಚ್ಚು ಮಂದಿಯ ಸಾವಿಗೆ ಕಾರಣರಾಗಿದ್ದಾರೆ. ಇವರಲ್ಲಿ ಒಬ್ಬಳು ಮಹಿಳೆಯೂ ಇದ್ದಾಳೆ. ಒಂಬತ್ತರಲ್ಲಿ ಎಂಟು ಮಂದಿಯ ಗುರುತು ಸಿಕ್ಕಿದೆ.

ಬಡತನ ಮತ್ತು ನಿರುದ್ಯೋಗ ಯುವಕರು ಭಯೋತ್ಪಾದನೆಯತ್ತ ಮುಖ ಮಾಡಲು ಕಾರಣ ಎನ್ನುವುದು ಅನೇಕರ ವಾದ. ಸೈನ್ಯಕ್ಕೆ ಸೇರುವ ಯುವಜನರ ಕುರಿತೂ ಅನೇಕರು ಇದೇ ರೀತಿಯ ಹೇಳಿಕೆಗಳನ್ನು ನೀಡಿ ವಿವಾದಕ್ಕೆ ಸಿಲುಕಿದ್ದಾರೆ. ಆದರೆ, ಜಗತ್ತಿಗೆ ಅತ್ಯಂತ ಮಾರಕವಾದ ಭಯೋತ್ಪಾದನೆಯತ್ತ ಆಕರ್ಷಿತರಾಗಲು ನಿಜಕ್ಕೂ ಬಡತನ ಅಥವಾ ನಿರುದ್ಯೋಗ ಕಾರಣವೇ?

ಲೋಕಸಭೆ ಚುನಾವಣೆ ವಿಶೇಷ ಪುಟ

ಇದು ಸತ್ಯವಲ್ಲ ಎನ್ನುವುದಕ್ಕೆ ಶ್ರೀಲಂಕಾದಲ್ಲಿ ನಡೆದ ದಾಳಿಯ ಉದಾಹರಣೆಯೇ ನಮ್ಮ ಮುಂದಿದೆ. ಹೆಚ್ಚು ಓದಿದವರೇ ಮತ್ತು ಹಣವಂತರೇ ಈ ಕೃತ್ಯ ಎಸಗಲು ಮುಂದೆ ಬರುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. ಹಣದ ಆಸೆಯಿಂದ ತಮ್ಮನ್ನು ಕೊಂದುಕೊಳ್ಳುವ ಜತೆಗೆ ನೂರಾರು ಜನರನ್ನು ಸಾಯಿಸಲು ಸಿದ್ಧರಿರುವ ಯುವಕರ ದೊಡ್ಡ ದಂಡೇ ಉಗ್ರವಾದದತ್ತ ಆಕರ್ಷಿತವಾಗುತ್ತಿದೆ. ಇದಕ್ಕಾಗಿ ಅವಿದ್ಯಾವಂತರು ಮಾತ್ರವಲ್ಲದೆ, ವಿದ್ಯಾವಂತ ಮತ್ತು ಬುದ್ಧಿವಂತ ಯುವಕರನ್ನೂ ಬ್ರೈನ್‌ವಾಷ್ ಮಾಡುವ ಜಾಲ ಬೆಳೆದಿದೆ ಎನ್ನಲಾಗಿದೆ.

ಪತ್ನಿ,ಪುತ್ರಿಯ ಕಳೇಬರ ಕೈಮೇಲಿತ್ತು!ಶ್ರೀಲಂಕಾ ಸ್ಫೋಟದ ಮನಕಲಕುವ ಕತೆ

ಉಗ್ರರ ಶಿಬಿರಗಳಲ್ಲಿ ಧರ್ಮದ ಹೆಸರಿನಲ್ಲಿ ಹೇಯ ಕೃತ್ಯ ಎಸಗಲು ಪ್ರಚೋದನೆ ನೀಡಲಾಗುತ್ತಿದೆ ಎನ್ನುವುದು ರಹಸ್ಯವೇನಲ್ಲ. ಆದರೆ, ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ, ವಿದೇಶಗಳಲ್ಲಿ ಎಂಜಿನಿಯರಿಂಗ್, ವೈದ್ಯಕೀಯ, ಕಾನೂನು ಮುಂತಾದ ಅತ್ಯುನ್ನತ ಪದವಿಗಳನ್ನು ಓದಿದ ಶ್ರೀಮಂತ ಮನೆತನದ ಯುವಕರು ಈ ರೀತಿಯ ಚಟುವಟಿಕೆಗಳಿಗೆ ಬಲಿಯಾಗುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ.

ಲಕ್ಷಾಧೀಶನ ಮಕ್ಕಳು

ಲಕ್ಷಾಧೀಶನ ಮಕ್ಕಳು

ಈ ದಾಳಿಯಲ್ಲಿ ಆತ್ಮಾಹುತಿ ದಾಳಿಕೋರರಾಗಿದ್ದ ಇಮ್ಸಾತ್ ಅಹ್ಮದ್ ಇಬ್ರಾಹಿಂ (33) ಮತ್ತು ಇಲ್ಹಾಮ್ ಅಹ್ಮದ್ ಇಬ್ರಾಹಿಂ (31) ಇಬ್ಬರ ಹಿನ್ನೆಲೆ ಗೊತ್ತೇ? ಇವರಿಬ್ಬರೂ ಶ್ರೀಲಂಕಾದ ಲಕ್ಷಾಧೀಶ ಉದ್ಯಮಿ ಮೊಹಮ್ಮದ್ ಯೂಸುಫ್ ಇಬ್ರಾಹಿಂ ಅವರ ಮಕ್ಕಳು.

ಶ್ರೀಲಂಕಾ ಸ್ಫೋಟ: 9 ದಾಳಿಕೋರರಲ್ಲಿ ಮಹಿಳೆ ಇರುವ ಕುರಿತು ಮಾಹಿತಿ

ಈ ದಾಳಿಗೆ ಇಸ್ಲಾಮಿಕ್ ಸ್ಟೇಟ್ ತಾನೇ ಹೊಣೆಗಾರ ಎಂದು ಘೋಷಿಸಿಕೊಂಡ ಬೆನ್ನಲ್ಲೇ, ಆತ್ಮಾಹುತಿ ಬಾಂಬರ್‌ಗಳು ಶ್ರೀಲಂಕಾದ ಪ್ರತಿಷ್ಠಿತ ಕುಟುಂಬಕ್ಕೆ ಸೇರಿದವರು ಎಂಬುದು ಇನ್ನಷ್ಟು ಆಘಾತ ಮೂಡಿಸಿದೆ.

ಜಾಲದ ಸುಳಿವಿಗೆ ಹುಡುಕಾಟ

ಜಾಲದ ಸುಳಿವಿಗೆ ಹುಡುಕಾಟ

ದಾಳಿಯ ಬಳಿಕ ಇಬ್ರಾಹಿಂ ಕುಟುಂಬವನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಯೂಸುಫ್ ಇಬ್ರಾಹಿಂನ ಮನೆಯನ್ನು ಶೋಧಿಸುವ ಸಂದರ್ಭದಲ್ಲಿ ಸ್ಫೋಟಗಳು ಸಿಡಿದು ಮೂವರು ಪೊಲೀಸರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇಬ್ರಾಹಿಂನ ಕಿರಿಯ ದೇಶಭ್ರಷ್ಟ ಮಗನ ತರಬೇತಿ ಶಿಬಿರಗಳು ಮತ್ತು ಜಿಹಾದಿ ಜಾಲದ ಬಗ್ಗೆ ಮಹತ್ವದ ಸುಳಿವು ಸಿಗಬಹುದು ಎಂದು ಪೊಲೀಸರು ನಿರೀಕ್ಷೆಯಲ್ಲಿದ್ದಾರೆ.

ಶ್ರೀಲಂಕಾದಲ್ಲಿ ಸಾವಿನ ಸಂಖ್ಯೆ 359ಕ್ಕೆ, ವಶಕ್ಕೆ ಪಡೆದಿದ್ದು 58 ಮಂದಿ

ಮಧ್ಯಮ -ಮೇಲ್ಮಧ್ಯಮ ವರ್ಗದವರು

ಮಧ್ಯಮ -ಮೇಲ್ಮಧ್ಯಮ ವರ್ಗದವರು

'ಈ ಆತ್ಮಾಹುತಿ ಬಾಮಬ್ ದಾಳಿಕೋರರ ಗುಂಪು ಸುಶಿಕ್ಷಿತರು ಮತ್ತು ಮಧ್ಯಮ-ಮೇಲ್ಮಧ್ಯಮ ವರ್ಗದಿಂದ ಬಂದವರು. ಅವರು ಆರ್ಥಿಕವಾಗಿ ಸಾಕಷ್ಟು ಸ್ವತಂತ್ರರಾಗಿದ್ದರು. ಅವರ ಕುಟುಂಬಗಳು ಸಹ ಆರ್ಥಿಕವಾಗಿ ಸದೃಢವಾಗಿವೆ. ಈ ಸಂಗತಿಯೇ ನಮ್ಮಲ್ಲಿ ಹೆಚ್ಚು ಆತಂಕ ಮೂಡಿಸಿದೆ' ಎಂದು ಶ್ರೀಲಂಕಾ ರಕ್ಷಣಾ ಸಚಿವ ರಾವಣ್ ವಿಜೆವರ್ದನೆ ಹೇಳಿದ್ದಾರೆ.

ಬ್ರಿಟನ್, ಆಸ್ಟ್ರೇಲಿಯಾದಲ್ಲಿ ಓದಿದವ

ಬ್ರಿಟನ್, ಆಸ್ಟ್ರೇಲಿಯಾದಲ್ಲಿ ಓದಿದವ

ಒಬ್ಬ ಆತ್ಮಾಹುತಿ ದಾಳಿಕೋರ ಯುಕೆಯಲ್ಲಿ ಓದಿದ್ದ. ಆತ ಸ್ನಾತಕೋತ್ತರ ಪದವಿ ಮುಗಿಸಿದ್ದು ಆಸ್ಟ್ರೇಲಿಯಾದಲ್ಲಿ. ಆತ ವಿದೇಶದಲ್ಲಿದ್ದಾಗ ಉಗ್ರವಾದದ ಕಡೆಗೆ ಆಕರ್ಷಿತನಾದನೇ ಅಥವಾ ಶ್ರೀಲಂಕಾಕ್ಕೆ ಮರಳಿದ ಬಳಿಕವೇ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಈ ದಾಳಿಕೋರರಲ್ಲಿ ಕೆಲವರು ಕಾನೂನು ಪದವಿಗಳನ್ನು ಪಡೆದಿದ್ದಾರೆ. ಅನೇಕರು ಬೇರೆ ಬೇರೆ ದೇಶಗಳಲ್ಲಿ ಓದಿ ಬಂದವರಾಗಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Is Poverty, Unemployment or uneducation real reason for youth attracting towards terrorism? Sri Lanka terror attack incident says no.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more