ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಲಂಕಾದಲ್ಲಿ ಸಾವಿನ ಸಂಖ್ಯೆ 359ಕ್ಕೆ, ವಶಕ್ಕೆ ಪಡೆದಿದ್ದು 58 ಮಂದಿ

|
Google Oneindia Kannada News

ಕೊಲಂಬೋ (ಶ್ರೀಲಂಕಾ), ಏಪ್ರಿಲ್ 24: ಈಸ್ಟರ್ ಭಾನುವಾರದಂದು ಕೊಲಂಬೋ ಸುತ್ತಮುತ್ತ ನಡೆದ ಭಯೋತ್ಪಾದನಾ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 359ಕ್ಕೆ ತಲುಪಿದೆ. ಮತ್ತಷ್ಟು ಶಂಕಿತರನ್ನು ಬಂಧಿಸಲಾಗಿದೆ. ಪೊಲೀಸ್ ವಕ್ತಾರ ರುವಾನ್ ಗುಣಶೇಖರ ಬುಧವಾರ ಮಾತನಾಡಿ, ಮಂಗಳವಾರ ರಾತ್ರಿ 18 ಮಂದಿಯನ್ನು ಬಂಧಿಸಿದ್ದು, ಒಟ್ಟಾರೆಯಾಗಿ ವಶಕ್ಕೆ ಪಡೆದವರ ಸಂಖ್ಯೆ 58 ಆಗಿದೆ ಎಂದಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಪ್ರಧಾನಿ ರನಿಲ್ ವಿಕ್ರಮ್ ಸಿಂಘೆ ಮಂಗಳವಾರ ಮಾತನಾಡಿ, ಇನ್ನೂ ಹಲವು ಶಂಕಿತರು ಸ್ಫೋಟಕಗಳೊಂದಿಗೆ ದೇಶದಲ್ಲಿ ಇದ್ದಾರೆ ಎಂದು ಹೇಳಿದ್ದಾರೆ. ಈಗ ಚರ್ಚ್ ಗಳು ಹಾಗೂ ಹೋಟೆಲ್ ಗಳು ಸೇರಿದಂತೆ ಇತರೆಡೆ ನಡೆದ ದಾಳಿಗಳು ನ್ಯೂಜಿಲೆಂಡ್ ನ ಕ್ರೈಸ್ಟ್ ಚರ್ಚ್ ದಾಳಿಗೆ ಪ್ರತೀಕಾರ ಹೇಳುವ ಸಲುವಾಗಿ ಕೈಗೊಂಡಿರುವಂಥವು ಎಂದು ಸರಕಾರದ ಉನ್ನತಾಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

Sri Lanka bombings death toll rises to 359, police say totally 58 suspects arrested

ಶ್ರೀಲಂಕಾ ಸ್ಫೋಟ: ಸುತ್ತಾಡುತ್ತಿದ್ದ ಶಂಕಿತ ಉಗ್ರನ ವಿಡಿಯೋ ವೈರಲ್0

ಶ್ರೀಲಂಕಾದಲ್ಲಿ ನಡೆದ ಭಯೋತ್ಪಾದನಾ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ದಾಳಿಕೋರರನ್ನು ಒಳಗೊಂಡ ಭಾವಚಿತ್ರಗಳನ್ನು ಸಹ ಬಿಡುಗಡೆ ಮಾಡಿದೆ. ಬಾಂಬರ್ ಗಳಿಗೆ ಇರುವ ವಿದೇಶಿ ನಂಟಿನ ಬಗ್ಗೆ ತನಿಖಾಧಿಕಾರಿಗಳು ಇನ್ನೂ ತನಿಖೆ ನಡೆಸುತ್ತಿದ್ದಾರೆ ಎಂದು ಪ್ರಧಾನಿ ರನಿಲ್ ವಿಕ್ರಮ್ ಸಿಂಘೆ ತಿಳಿಸಿದ್ದಾರೆ.

English summary
Police say the death toll in the Easter attacks in Sri Lanka has risen to 359 and more suspects have been arrested. Police spokesman Ruwan Gunasekara also said Wednesday morning that 18 suspects were arrested overnight, raising the total detained to 58.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X