ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Sri Lanka Crisis; ವಾಟ್ಸಪ್, ಫೇಸ್‌ಬುಕ್ ಬಳಕೆಗೆ ನಿರ್ಬಂಧ

|
Google Oneindia Kannada News

ಕೊಲಂಬೊ, ಏಪ್ರಿಲ್ 03; ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಶ್ರೀಲಂಕಾದಲ್ಲಿ ಪರಿಸ್ಥಿತಿ ಪ್ರಕ್ಷುಬ್ಧಗೊಂಡಿದೆ. ನೂರಾರು ಜನರು ಅಧ್ಯಕ್ಷರ ನಿವಾಸಕ್ಕೆ ಮುತ್ತಿಗೆ ಹಾಕಲು ಪ್ರಯತ್ನ ನಡೆಸಿದ ಬಳಿಕ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.

ದೇಶದಲ್ಲಿ ಜನರ ಪ್ರತಿಭಟನೆ ನಿಯಂತ್ರಣಕ್ಕೆ ತರಲು ಸಾಮಾಜಿಕ ಜಾಲತಾಣಗಳನ್ನು ಬಂದ್ ಮಾಡಲಾಗಿದೆ. ಭಾನುವಾರದಿಂದ ಎಲ್ಲಾ ಸಾಮಾಜಿಕ ಜಾಲತಾಣಗಳಿಗೆ ನಿರ್ಬಂಧ ಹೇರಲಾಗಿದೆ. ಈ ಮೂಲಕ ಜನರಿಗೆ ಪ್ರತಿಭಟನೆಯ ಮಾಹಿತಿ ತಲುಪದಂತೆ ಎಚ್ಚರವಹಿಸಲಾಗಿದೆ.

ಶ್ರೀಲಂಕಾ ಬಿಕ್ಕಟ್ಟು: ಹಿಂಸಾಚಾರಕ್ಕೆ ಉಗ್ರಗಾಮಿಗಳ ಗುಂಪೇ ಕಾರಣ ಎಂದ ಅಧ್ಯಕ್ಷರ ಕಚೇರಿ ಶ್ರೀಲಂಕಾ ಬಿಕ್ಕಟ್ಟು: ಹಿಂಸಾಚಾರಕ್ಕೆ ಉಗ್ರಗಾಮಿಗಳ ಗುಂಪೇ ಕಾರಣ ಎಂದ ಅಧ್ಯಕ್ಷರ ಕಚೇರಿ

ಶನಿವಾರ ಮತ್ತು ಭಾನುವಾರ ಶ್ರೀಲಂಕಾದಲ್ಲಿ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಇದರ ಜೊತೆಗೆ ಫೇಸ್ ಬುಕ್, ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳನ್ನು ಬಂದ್ ಮಾಡಲಾಗಿದೆ. ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸ ಶುಕ್ರವಾರ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ.

 ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು: ತಮಿಳುನಾಡಿಗೆ ನಿರಾಶ್ರಿತರ ಆಗಮನ, ಅಕ್ರಮ ಪ್ರವೇಶಿಸಿ ಜೈಲು ಪಾಲು ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು: ತಮಿಳುನಾಡಿಗೆ ನಿರಾಶ್ರಿತರ ಆಗಮನ, ಅಕ್ರಮ ಪ್ರವೇಶಿಸಿ ಜೈಲು ಪಾಲು

Sri Lanka Blocks Social Media To Contain Protests

ಶುಕ್ರವಾರ ನೂರಾರು ಜನರು ಕೊಲಂಬೊದಲ್ಲಿರುವ ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸ ನಿವಾಸಕ್ಕೆ ಮುತ್ತಿಗೆ ಹಾಕಲು ಆಗಮಿಸಿದ್ದರು. ಆಗ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದ್ದು, ದೇಶಾದ್ಯಂತ ಸೋಮವಾರ ಮುಂಜಾನೆ ತನಕ ಕರ್ಫ್ಯೂ ಜಾರಿಯಲ್ಲಿರುತ್ತದೆ.

 ಶ್ರೀಲಂಕಾ ಆಹಾರ ಬಿಕ್ಕಟ್ಟು: ಹಾಲಿನ ಪುಡಿ, ಅಕ್ಕಿ, ಸಕ್ಕರೆ ಬೆಲೆ ಗಗನಕ್ಕೇರಿದೆ ಶ್ರೀಲಂಕಾ ಆಹಾರ ಬಿಕ್ಕಟ್ಟು: ಹಾಲಿನ ಪುಡಿ, ಅಕ್ಕಿ, ಸಕ್ಕರೆ ಬೆಲೆ ಗಗನಕ್ಕೇರಿದೆ

ರಾಜೀನಾಮೆಗೆ ಒತ್ತಾಯ; ಶ್ರೀಲಂಕಾದಲ್ಲಿ ತೀವ್ರ ಆರ್ಥಿಕ ಮುಗ್ಗಟ್ಟಿನ ಹಿನ್ನಲೆಯಲ್ಲಿ ಅಧ್ಯಕ್ಷ ಗೊಟಬಯ ರಾಜಪಕ್ಸ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆದಿತ್ತು. ಅಧ್ಯಕ್ಷರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದವರನ್ನು ಸರ್ಕಾರ ಭಯೋತ್ಪಾದಕರು ಎಂದು ಕರೆದಿದತ್ತು.

ಅಧ್ಯಕ್ಷರ ನಿವಾಸದ ಮುಂದಿನ ಪ್ರತಿಭಟನೆ ವೇಳೆ ಉದ್ರಿಕ್ತ ಜನರು ಪೊಲೀಸರ ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಲಾಠಿ ಚಾರ್ಚ್ ಮಾಡಿ, ಅಶ್ರುವಾಯು ಪ್ರಯೋಗ ಮಾಡಿ ಪೊಲೀಸರು ಜನರನ್ನು ಚದುರಿಸಿದ್ದರು.

ಅಧ್ಯಕ್ಷರ ನಿವಾಸದ ಮುಂದಿನ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 12ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ. ಶ್ರೀಲಂಕಾದಲ್ಲಿ ಶಾಂತಿ ಕಾಪಾಡಲು ಭಾರತದಿಂದ ಸೇನೆ ಕಳಿಸಲಾಗಿದೆ ಎಂಬ ಸಾಮಾಜಿಕ ಜಾಲತಾಣಗಳ ಸುದ್ದಿಯನ್ನು ಆಡಳಿತ ತಳ್ಳಿ ಹಾಕಿದೆ. ಸ್ಥಳೀಯ ಪೊಲೀಸರು ಪರಿಸ್ಥಿತಿ ಹತೋಟಿಗೆ ತರಲು ಶಕ್ತರಾಗಿದ್ದಾರೆ ಎಂದು ಹೇಳಿದೆ.

ಶ್ರೀಲಂಕಾದಲ್ಲಿ ಇಂಧನ, ಆಹಾರ ಪದಾರ್ಥಗಳ ಬೆಲೆ ಗಗನಕ್ಕೆ ಏರಿದೆ. ದೇಶದಲ್ಲಿ ವಿದ್ಯುತ್ ಕೊರತೆ ಉಂಟಾಗಿದ್ದು ಸುಮಾರು 10 ಗಂಟೆಗಳ ಕಾಲ ಪವರ್ ಕಟ್ ಜಾರಿಯಲ್ಲಿದೆ. ಇದರಿಂದಾಗಿ ಆಡಳಿತದ ವಿರುದ್ಧ ಜನರು ಆಕ್ರೋಶಗೊಂಡಿದ್ದು, ಪ್ರತಿಭಟನೆ ನಡೆಸುತ್ತಿದ್ದಾರೆ.

ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಜನರು ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಸಹ ಪರದಾಟ ನಡೆಸುತ್ತಿದ್ದಾರೆ. ಅಗತ್ಯ ವಸ್ತುಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಂಡರೂ ಅದಕ್ಕೆ ಹಣ ಪಾವತಿ ಮಾಡಲಾಗದ ಸ್ಥಿತಿಗೆ ದೇಶ ತಲುಪಿದೆ.

1948ರ ಸ್ವಾತಂತ್ರ್ಯದ ಬಳಿಕ ಶ್ರೀಲಂಕಾ ಅತ್ಯಂತ ಭೀಕರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ, ಇಂಧನ ದಾಸ್ತಾನು ಕೊರತೆ ಮುಂತಾದವುಗಳಿಗೆ ಆಡಳಿತಾರೂಢ ಸರ್ಕಾರದ ನೀತಿಗಳೇ ಕಾರಣ ಎಂದು ಜನರು ಆರೋಪಿಸುತ್ತಿದ್ದಾರೆ. ಆದ್ದರಿಂದ ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ.

ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾಕ್ಕೆ ಭಾರತ ನೆರವು ನೀಡಲು ಮುಂದಾಗಿದೆ. ಈಗಾಗಲೇ 40,000 ಟನ್ ಅಕ್ಕಿಯನ್ನು ಕಳುಹಿಸಲಾಗುತ್ತಿದ್ದು, ಈ ಪ್ರಕ್ರಿಯೆ ಆರಂಭವಾಗಿದೆ. ವಿದ್ಯುತ್ ಉತ್ಪಾದನೆಗೆ ಸಹ ಭಾರತ ಸಹಾಯ ಮಾಡಲಿದೆ ಎಂಬ ಮಾಹಿತಿ ಇದೆ.

ಸಾಮಾಜಿಕ ಜಾಲತಾಣಗಳ ಮೇಲಿನ ನಿರ್ಬಂಧದ ಬಗ್ಗೆ ಮಾತನಾಡಿದ ಯುವ ಜನ ಮತ್ತು ಕ್ರೀಡಾ ಸಚಿವ ನಮಲ್ ರಾಜಪಕ್ಸೆ, ಇಂತಹ ನಿರ್ಬಂಧವನ್ನು ನಾನು ಎಂದಿಗೂ ಬಯಸುವುದಿಲ್ಲ. ವಿಪಿಎನ್ ಲಭ್ಯತೆ ಇರುವ ತನಕ ಇಂತಹ ನಿರ್ಬಂಧ ಉಪಯೋಗಕ್ಕೆ ಬರುವುದಿಲ್ಲ. ಅಧಿಕಾರಿಗಳು ಈ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಹೇಳಿದ್ದಾರೆ.

English summary
Sri Lanka blocked access to social media platforms on Sunday. Authorities imposed a weekend nationwide curfew to contain protests over a worsening economic crisis in country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X