ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಲಂಕಾ ಸ್ಫೋಟ: ಸೋಮವಾರ ರಾತ್ರಿಯಿಂದ ಮತ್ತೆ ಕರ್ಫ್ಯೂ ಘೋಷಣೆ

|
Google Oneindia Kannada News

ಕೊಲಂಬೋ, ಏ.22: ಕೊಲಂಬೋದಲ್ಲಿ ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್ ಸ್ಫೋಟದಿಂದಾಗಿ ಸೋಮವಾರ ಸಂಜೆಯಿಂದಲೂ ಕೂಡ ಮತ್ತೆ ಕರ್ಫ್ಯೂ ಜಾರಿಗೆ ಆದೇಶ ನೀಡಲಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಭಾನುವಾರ ಬೆಳಗ್ಗೆ ಕೊಲಂಬೋದ ಒಟ್ಟು 8 ಭಾಗಗಳಲ್ಲಿ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದು ಇದುವರೆಗೆ ಆರು ಮಂದಿ ಭಾರತೀಯರು ಸೇರಿ ಒಟ್ಟು 290 ಮಂದಿ ಮೃತಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ.

Updates: ಈಸ್ಟರ್ ದುರಂತ: ಶ್ರೀಲಂಕಾದ ಚರ್ಚ್, ಹೋಟೆಲ್ ಗಳಲ್ಲಿ ಸ್ಫೋಟ Updates: ಈಸ್ಟರ್ ದುರಂತ: ಶ್ರೀಲಂಕಾದ ಚರ್ಚ್, ಹೋಟೆಲ್ ಗಳಲ್ಲಿ ಸ್ಫೋಟ

ಸಾರ್ವಜನಿಕರ ಹಿತದೃಷ್ಟಿಯಿಂದ ಸೋಮವಾರವೂ ಕೂಡ ಕರ್ಫ್ಯೂ ಮುಂದುವರೆಯಲಿದ್ದು ಸೋಮವಾರ ಸಂಜೆ 8 ಗಂಟೆಯಿಂದ ಮಂಗಳವಾರ ಬೆಳಗಿನ ಜಾವ 4 ಗಂಟೆಯವರೆಗೆ ಕರ್ಫ್ಯೂ ಘೋಷಿಸಲಾಗಿದೆ.

Sri Lanka blasts Night curfew ordered in Colombo

ತಂಡದಿಂದ ಈಗಲೂ ಪರಿಶೀಲನೆ ಮುಂದುವರೆದಿದೆ, ಉಳಿದ ಹೋಟೆಲ್‌ಗಳ ಸಮೀಪ ಪರಿಶೀಲನೆ ನಡೆಯುತ್ತಿದೆ. ಕೊಲಂಬೋ ಏರ್‌ಪೋರ್ಟ್‌ನಲ್ಲಿ ಭಾನುವಾರ ಸಂಜೆ ಮತ್ತೊಂದು ಬಾಂಬ್ ಪತ್ತೆಯಾಗಿದ್ದು ಅದನ್ನು ನಿಷ್ಕ್ರಿಯಗೊಳಿಸಲಾಗಿತ್ತು. ಇದೀಗ ಭಾರಿ ಎಚ್ಚರಿಕೆಯಿಂದ ಹೆಜ್ಜೆ ಇಡುವ ಅಗತ್ಯವಿದೆ.

ಶ್ರೀಲಂಕಾ ಬಾಂಬ್ ಸ್ಫೋಟ: 5 ಮಂದಿ ಭಾರತೀಯರು ಸೇರಿ ಮೃತರ ಸಂಖ್ಯೆ 290ಕ್ಕೆ ಏರಿಕೆ ಶ್ರೀಲಂಕಾ ಬಾಂಬ್ ಸ್ಫೋಟ: 5 ಮಂದಿ ಭಾರತೀಯರು ಸೇರಿ ಮೃತರ ಸಂಖ್ಯೆ 290ಕ್ಕೆ ಏರಿಕೆ

ಹಾಗಾಗಿ ಯಾರೂ ಕೂಡ ಆ ಸಂದರ್ಭದಲ್ಲಿ ರಸ್ತೆಯ ಮೇಲೆ ವಿನಾಕಾರಣ ಓಡಾಡುವಂತಿಲ್ಲ. ಕೊಲಂಬೋ ಸುತ್ತಲೂ ಯೋಧರು, ಪೊಲೀಸರ ಕಣ್ಗಾವಲಿರುತ್ತದೆ.

English summary
Sri Lankan authorities ordered a curfew in Colombo for a second day on Monday, from 8 pm to 4 am on Tuesday, the government information department said, a day after a string of bombs killed 290 people and wounded about 500.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X