ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಸ್ಫುಟ್ನಿಕ್ ವಿ" ಲಸಿಕೆ ಅತಿ ಹೆಚ್ಚು ಸುರಕ್ಷಿತ ಎಂದ ಅಧ್ಯಯನ

|
Google Oneindia Kannada News

ಅರ್ಜೆಂಟಿನಾ, ಜೂನ್ 24: ಕೊರೊನಾ ಸೋಂಕಿನ ವಿರುದ್ಧ ರಷ್ಯಾ ಮೂಲದ ಸ್ಫುಟ್ನಿಕ್ ವಿ ಲಸಿಕೆಯ ದಕ್ಷತೆ ಹಾಗೂ ಲಸಿಕೆ ನೀಡಿದ ನಂತರದ ಪರಿಣಾಮಗಳ ಕುರಿತು ಅರ್ಜೆಂಟಿನಾದ ಬ್ಯೂನೊಸ್ ಏರ್ಸ್ ಆರೋಗ್ಯ ಸಚಿವಾಲಯ ಅಧ್ಯಯನ ನಡೆಸಿದ್ದು, ಈ ಲಸಿಕೆ ಇತರೆ ಎಲ್ಲಾ ಲಸಿಕೆಗಳಿಗಿಂತಲೂ ಸುರಕ್ಷಿತ ಎಂದು ವರದಿ ನೀಡಿದೆ.

Recommended Video

Sputnik V ಲಸಿಕೆ ನಮ್ಮ Covishieldಗಿಂತಲೂ ಸುರಕ್ಷಿತವೇ | Oneindia Kannada

ಬ್ಯೂನೊಸ್ ಏರೆಸ್‌ ಪ್ರಾಂತ್ಯದಲ್ಲಿ ಬಳಸಲಾದ ಮಿಕ್ಕೆಲ್ಲಾ ಕೊರೊನಾ ಲಸಿಕೆಗಳಿಗಿಂತ ಸ್ಫುಟ್ನಿಕ್ ವಿ ಲಸಿಕೆ ಸುರಕ್ಷಿತ ಎಂದು ವರದಿಗಳಿಂದ ದೃಢಪಡಿಸಿದೆ. ಸ್ಫುಟ್ನಿಕ್ ವಿ ಲಸಿಕೆಗೆ ಸಂಬಂಧಿಸಿದಂತೆ ಯಾವುದೇ ಮರಣ ಪ್ರಕರಣ ದಾಖಲಾಗಿಲ್ಲ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ಬೆಲೆ ಪರಿಷ್ಕರಿಸಿದ ಕೇಂದ್ರ; ಯಾವ್ಯಾವ ಲಸಿಕೆಗೆ ಎಷ್ಟು ಬೆಲೆ?ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ಬೆಲೆ ಪರಿಷ್ಕರಿಸಿದ ಕೇಂದ್ರ; ಯಾವ್ಯಾವ ಲಸಿಕೆಗೆ ಎಷ್ಟು ಬೆಲೆ?

ಲಸಿಕೆ ನಂತರ ಕಂಡುಬರುವ ಸಮಸ್ಯೆಗಳ ಅಧ್ಯಯನವನ್ನು ನಡೆಸಲಾಗಿದ್ದು, ಸ್ಫುಟ್ನಿಕ್ ವಿ ಲಸಿಕೆಯಿಂದ ಮರಣ ಸಂಭವಿಸಿರುವ ವರದಿಯಾಗಿಲ್ಲ. ಜ್ವರ, ತಲೆನೋವು, ಮೈಕೈ ನೋವಿನಂಥ ಸಣ್ಣಪುಟ್ಟ ಪರಿಣಾಮಗಳೂ ಕಡಿಮೆ ಪ್ರಮಾಣದಲ್ಲಿ ಕಂಡುಬಂದಿದೆ ಎಂದು ಅಧ್ಯಯನ ತಿಳಿಸಿದೆ.

Sputnik V Is Safest Corona Vaccines Says Study

ಈ ಪ್ರಾಂತ್ಯದಲ್ಲಿ 2.8 ಮಿಲಿಯನ್ ಡೋಸ್‌ಗಳ ಸ್ಫುಟ್ನಿಕ್ ವಿ ಲಸಿಕೆ, 1.3 ಮಿಲಿಯನ್ ಡೋಸ್‌ನ ಸಿನೋಫಾರ್ಮ ಲಸಿಕೆ, 0.9 ಮಿಲಿಯನ್ ಡೋಸ್‌ನ ಕೋವಿಶೀಲ್ಡ್‌ ಲಸಿಕೆಯನ್ನು ನೀಡಲಾಗಿತ್ತು. ಇವುಗಳ ಆಧಾರದಲ್ಲಿ ವರದಿ ನೀಡಲಾಗಿದೆ.

"ವಿಶ್ವ ಆರೋಗ್ಯ ಸಂಸ್ಥೆ ನಿಯಮಗಳ ಅಡಿಯಲ್ಲಿ ಲಸಿಕೆ ಕುರಿತ ಅಧ್ಯಯನ, ತನಿಖೆಯನ್ನು ಹಂತ ಹಂತವಾಗಿ ಕೈಗೊಳ್ಳಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಸ್ಫುಟ್ನಿಕ್ ವಿ ಲಸಿಕೆಯ ಸುರಕ್ಷತೆ, ದಕ್ಷತೆಯ ಕುರಿತು ಯಾವುದೇ ಪ್ರಶ್ನೆ ಎತ್ತಿಲ್ಲ. ಗಾಮಾಲೆಯಾ ಇನ್‌ಸ್ಟಿಟ್ಯೂಟ್ ಹಾಗೂ ರಷ್ಯಾ ಆರೋಗ್ಯ ನಿಯಂತ್ರಕ ಕಟ್ಟುನಿಟ್ಟಾಗಿ ದುಪ್ಪಟ್ಟು ಗುಣಮಟ್ಟ ಕಾಯ್ದುಕೊಂಡು ಲಸಿಕೆ ತಯಾರಿಸಿದೆ" ಎಂದು ಒಜೆಎಸ್‌ಸಿ ಫಾರ್ಮಾ ಸ್ಟಾಂಡರ್ಡ್ ಉಲ್ಲೇಖಿಸಿದೆ.

English summary
Sputnik V is safest among all COVID-19 vaccines, no deaths recorded confirms argentina's Buenos Aires study
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X