ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪೇನ್, ಇಟೆಲಿಯಲ್ಲಿ ಕೊರೊನಾ ಮರಣ ಮೃದಂಗ: ಕಾರಣ ಬಹಿರಂಗ

|
Google Oneindia Kannada News

ಕೊರೊನಾ ವೈರಸ್ ಇಟೆಲಿ ಮತ್ತು ಸ್ಪೇನ್ ದೇಶದಲ್ಲಿ ದಿನದಿಂದ ದಿನಕ್ಕೆ ಪಡೆಯುತ್ತಿರುವ ಆಹುತಿಗೆ ಎರಡೂ ದೇಶಗಳು ಅಕ್ಷರಸಃ ಸೋತು ಮಂಡಿಯೂರಿವೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಏರುತ್ತಲೇ ಇದೆ.

Recommended Video

ಅಂದು ನಮಗಾಗಿ ಚಪ್ಪಾಳೆ ತಟ್ಟಿದರು , ಇಂದು ಕಲ್ಲಲ್ಲಿ ಹೊಡೆದರು

ಮಾನವ ಕೈಯಲ್ಲಾದ ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದೆ, ಇನ್ನೇನಿದ್ದರೂ ದೇವರೇ ನಮ್ಮನ್ನು ಕಾಪಾಡಬೇಕೆಂದು ಇಟೆಲಿ ಪ್ರಧಾನಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವಾಗ ಕಣ್ಣೀರಿಟ್ಟು, ಕೈಚೆಲ್ಲಿದ್ದಾಗಿದೆ.

ಇಟೆಲಿಯಲ್ಲಿ 105,792 ಸೋಂಕಿತರು ಇರುವುದು ದೃಢಪಟ್ಟಿದ್ದು, ಇದುವರೆಗೆ 12,428 ಜನರು ಸಾವನ್ನಪ್ಪಿದ್ದರೆ, ಸ್ಪೇನ್ ನಲ್ಲಿ 102,136 ಸೋಂಕಿತರು ಮತ್ತು 9,053 ಜನ ಮೃತ ಪಟ್ಟಿದ್ದಾರೆ.

ಪ್ರಮುಖವಾಗಿ ಈ ಎರಡು ದೇಶಗಳಲ್ಲಿನ ಪರಿಸ್ಥಿತಿ ಸದ್ಯಕ್ಕೆ ಸುಧಾರಿಸುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಈ ದೇಶಗಳಲ್ಲಿ ಈ ಮಟ್ಟಿಗೆ ಕೊರೊನಾ ಮರಣ ಮೃದಂಗ ಭಾರಿಸಲು ಕಾರಣ ಏನು ಎನ್ನುವುದನ್ನು
ತಜ್ಞರು ಅಭಿಪ್ರಾಯ ಪಡುತ್ತಿರುವುದು ಹೀಗೆ:

ಚಾಂಪಿಯನ್ಸ್ ಲೀಗ್ ಫುಟ್ಬಾಲ್ ಪಂದ್ಯ

ಚಾಂಪಿಯನ್ಸ್ ಲೀಗ್ ಫುಟ್ಬಾಲ್ ಪಂದ್ಯ

ಬರ್ಗಾಮೋ ಎನ್ನುವುದು ಉತ್ತರ ಇಟೆಲಿಯ ನಗರ, ಮಿಲಾನ್ ನಗರದಿಂದ ಈಶಾನ್ಯಕ್ಕೆ ನಲವತ್ತು ಕಿಲೋಮೀಟರ್ ದೂರದಲ್ಲಿದೆ. ಫೆಬ್ರವರಿ 19ರಂದು, ಚಾಂಪಿಯನ್ಸ್ ಲೀಗ್ ಫುಟ್ಬಾಲ್ ಪಂದ್ಯ, ಅಟ್ಲಾಂಟ ಮತ್ತು ವೆಲಿನ್ಸಿಯಾ ತಂಡದ ನಡುವೆ ನಡೆದಿತ್ತು. ಸ್ಪೇನ್ ದೇಶದ ತಂಡವಾದ ವೆಲಿನ್ಸಿಯಾ ಪರವಾಗಿ 2,500 ಅಭಿಮಾನಿಗಳು ಈ ಪಂದ್ಯ ನೋಡಲು ಅಲ್ಲಿಂದ ಆಗಮಿಸಿದ್ದರು.

ಕೊರೊನಾ ವೈರಾಣು ಹಬ್ಬಲು ಕಾರಣವಾಯಿತು

ಕೊರೊನಾ ವೈರಾಣು ಹಬ್ಬಲು ಕಾರಣವಾಯಿತು

ಆ ಪಂದ್ಯ ನಡೆದ ಒಂದು ತಿಂಗಳಿನ ನಂತರ ಎರಡು ದೇಶಗಳಲ್ಲಿ ಕೊರೊನಾ ವೈರಾಣು ಹಬ್ಬಲು ಕಾರಣವಾಯಿತು ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ. ಉಸಿರಾಟದ ಸ್ಪೆಷಲಿಸ್ಟ್ ಒಬ್ಬ, ಜೈವಿಕ ಬಾಂಬ್ ಅನ್ನು ಕ್ರೀಡಾಂಗಣದಲ್ಲಿ ಇರಿಸಿದ್ದ, ಇದರಿಂದಾಗಿ, ವೆಲಿನ್ಸಿಯಾ ತಂಡದ ಶೇ. 35 ಸದಸ್ಯರು ಸೋಂಕಿತರಾದರು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಪಂದ್ಯ ನಡೆದ ಎರಡು ದಿನದ ಮುನ್ನ ಮೊದಲ ಕೋವಿಡ್ 19 ಪ್ರಕರಣ ಇಟೆಲಿಯಲ್ಲಿ ದೃಢಪಟ್ಟಿತ್ತು.

ಬರ್ಗಾಮೋ ನಗರದ ಮೇಯರ್ ಜಿಯಾರ್ಗೋ ಗೋಯಿ

ಬರ್ಗಾಮೋ ನಗರದ ಮೇಯರ್ ಜಿಯಾರ್ಗೋ ಗೋಯಿ

ಬರ್ಗಾಮೋ ನಗರದ ಮೂರನೇ ಎರಡರಷ್ಟು ಜನ, ಫೆಬ್ರವರಿ 19ರಂದು ನಡೆದ ಪಂದ್ಯವನ್ನು ವೀಕ್ಷಿಸಲು ಇಟೆಲಿಯ ಮಿಲಾನ್ ನಗರಕ್ಕೆ ಪ್ರಯಾಣಿಸಿದ್ದರು. "ಫೆಬ್ರವರಿ ಮಧ್ಯಭಾಗದಲ್ಲಿ ಇಲ್ಲಿ ನಮಗೆ ಏನು ನಡೆಯುತ್ತಿದೆ ಎನ್ನುವುದರ ಅರಿವಾಗುತ್ತಿರಲಿಲ್ಲ. ಈ ವೈರಾಣು ನಮ್ಮ ನಗರಕ್ಕೆ ಬಂದಿದೆ ಎಂದರೆ ಬಹುದೊಡ್ಡ ಆಘಾತ ಎದುರಿಸಲು ನಾವು ಸಿದ್ದರಾಗಬೇಕಿದೆ. ಯಾಕೆಂದರೆ, ನಗರದ ಸುಮಾರು ನಲವತ್ತು ಸಾವಿರ ಜನ ಆ ಪಂದ್ಯ ವೀಕ್ಷಿಸಲು ಹೋಗಿದ್ದರು" ಎಂದು ಬರ್ಗಾಮೋ ನಗರದ ಮೇಯರ್ ಜಿಯಾರ್ಗೋ ಗೋಯಿ ಹೇಳಿದ್ದರು. (ಚಿತ್ರದಲ್ಲಿ ಮೇಯರ್, ಫೇಸ್ ಬುಕ್ ಪೋಸ್ಟ್)

ಇಟೆಲಿ ಮತ್ತು ಸ್ಪೇನ್

ಇಟೆಲಿ ಮತ್ತು ಸ್ಪೇನ್

ಈ ಪಂದ್ಯ ನಡೆದ ಒಂದು ವಾರದಲ್ಲಿ ಬರ್ಗಾಮೋ ನಗರದಲ್ಲಿ ಮೊದಲ ಕೇಸ್ ದಾಖಲಾಗಿತ್ತು. ಇನ್ನು ಪಂದ್ಯದ ರಿಪೋರ್ಟ್ ನೀಡಲು ಹೋಗಿದ್ದ ಪತ್ರಕರ್ತನಿಗೆ ಮತ್ತು ಅಟ್ಲಾಂಟ ತಂಡದ ಗೋಲ್ ಕೀಪರ್ ಗೂ ಸೋಂಕು ತಗುಲಿತ್ತು. ಜೈವಿಕ ಬಾಂಬ್ ಇಟ್ಟಿದ್ದನ್ನು ಸರಕಾರೀ ಸಂಸ್ಥೆಗಳು ಇನ್ನೂ ದೃಢ ಪಡಿಸಲಿಲ್ಲ.

English summary
Spread of coronavirus in Italy, Spain linked to Atalanta vs Valencia Champions League match
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X