ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹತ್ತಾರು ಲಕ್ಷ ಜನ ಭೇಟಿ ನೀಡುವ ಪ್ಯಾರಿಸ್ ನ ಕೆಥೆಡ್ರಲ್ ನಲ್ಲಿ ಬೆಂಕಿ

|
Google Oneindia Kannada News

ಪ್ಯಾರಿಸ್ (ಫ್ರಾನ್ಸ್), ಏಪ್ರಿಲ್ 15: ಕೇಂದ್ರ ಪ್ಯಾರಿಸ್ ನ ವಿಖ್ಯಾತ ನಾಟ್ರ-ಡೇಮ್ ಕೆಥೆಡ್ರಲ್ ನಲ್ಲಿ ಸೋಮವಾರ ಮಧ್ಯಾಹ್ನ ದೊಡ್ಡ ಮಟ್ಟದ ಅಗ್ನಿ ಅವಘಡ ಸಂಭವಿಸಿದೆ. ಭಾರೀ ಪ್ರಮಾಣದಲ್ಲಿ ಬೆಂಕಿ, ಹೊಗೆ ಕಾಣಿಸಿಕೊಂಡಿತ್ತು. ಮುಗಿಲೆತ್ತರಕ್ಕೂ ಚಾಚಿಕೊಂಡಿತ್ತು ಎಂದು ಅಗ್ನಿ ಶಾಮಕ ದಳದವರು ಮಾಹಿತಿ ನೀಡಿದ್ದಾರೆ.

ವರ್ಷಕ್ಕೆ ಹತ್ತಾರು ಲಕ್ಷ ಮಂದಿ ಈ ಕೆಥೆಡ್ರಲ್ ಗೆ ಭೇಟಿ ನೀಡುತ್ತಾರೆ. ಇದರ ಛಾವಣಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಂದ ಹಾಗೆ ಸದ್ಯಕ್ಕೆ ಅಲ್ಲಿ ದುರಸ್ತಿ ಕಾರ್ಯ ನಡೆಯುತ್ತಿತ್ತು. ಪ್ಯಾರಿಸ್ ನ ಕೇಂದ್ರ ಭಾಗದಲ್ಲಿರುವ ಈ ಕೆಥೆಡ್ರಲ್ ಗೆ ಅಗ್ನಿಶಾಮಕ ದಳದ ವಾಹನಗಳು ಬಿರುಸಿನಿಂದ ಧಾವಿಸುತ್ತಿದ್ದುದು ಕಂಡುಬಂದಿದೆ.

30 ಮಂದಿ ಜೀವ ಉಳಿಸಿ, ಬೆಂಕಿಯಲ್ಲಿ ಬೆಂದು ಪ್ರಾಣಬಿಟ್ಟ ಶ್ವಾನ30 ಮಂದಿ ಜೀವ ಉಳಿಸಿ, ಬೆಂಕಿಯಲ್ಲಿ ಬೆಂದು ಪ್ರಾಣಬಿಟ್ಟ ಶ್ವಾನ

ಪ್ಯಾರಿಸ್ ನ ಪೊಲೀಸ್ ಇಲಾಖೆ ಟ್ವೀಟ್ ಮಾಡಿ, ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವ ವಾಹನಗಳ ಸಂಚಾರಕ್ಕೆ ಜನರು ಅವಕಾಶ ಮಾಡಿಕೊಡಬೇಕು. ಈ ಪ್ರದೇಶದಲ್ಲಿ ಸಂಚರಿಸದಂತೆ ಹೇಳಿದ್ದಾರೆ. "ಭೀಕರ ಬೆಂಕಿ" ಎಂದು ಪ್ಯಾರಿಸ್ ಮೇಯರ್ ಆನೆ ಹಿಡಾಲ್ಗೋ ಟ್ವೀಟ್ ಮಾಡಿದ್ದಾರೆ.

ಪ್ಯಾರಿಸ್ ನ ಅಗ್ನಿ ಶಾಮಕ ಸೇವೆಯವರು ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

English summary
Notre-Dame Cathedral went up in flames on Monday in a roaring blaze that devastated the Parisian landmark, one of France’s most visited places. Flames burst through the roof of the centuries-old cathedral and quickly engulfed the spire, which collapsed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X