ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪೇನ್‌: ಮಹಿಳೆಯರಿಗೆ ಮೂರು ದಿನಗಳ ಋತುಚಕ್ರದ ರಜೆ

|
Google Oneindia Kannada News

ನವದೆಹಲಿ, ಮೇ 11: ಮಹಿಳೆಯರಿಗೆ ಮೂರು ದಿನಗಳ ಋತುಚಕ್ರದ ರಜೆ ನೀಡಲು ಸ್ಪೇನ್‌ ಸರಕಾರ ತೀರ್ಮಾನಿಸಿದೆ. ಈ ಮೂಲಕ ಋತುಚಕ್ರದ ರಜೆ ನೀಡಿದ ಯೂರೋಪ್‌ನ ಮೊದಲ ದೇಶ ಎಂಬ ಖ್ಯಾತಿಗೆ ಸ್ಪೇನ್‌ ಪಾತ್ರವಾಗಲಿದೆ.

ಈ ನೂತನ ಕ್ರಮದಂತೆ ಮುಟ್ಟಿನ ಸಮಯದಲ್ಲಿ ಹೆಚ್ಚಿನ ನೋವು ಅನುಭವಿಸುವ ಸ್ಪೇನ್‌ನ ಮಹಿಳೆಯರು ತಿಂಗಳಲ್ಲಿ ಮೂರು ದಿನಗಳು ರಜೆ ಪಡೆಯಬಹುದಾಗಿದೆ. ಈ ಕುರಿತು ಮುಂದಿನ ವಾರ ಅಧಿಕೃತವಾಗಿ ಸ್ಪೇನ್‌ ಸರಕಾರದಿಂದ ಆದೇಶ ಹೊರಬೀಳಲಿದೆ.

ದಕ್ಷಿಣ ಕೊರಿಯಾ, ಜಪಾನ್‌, ಜಾಂಬಿಯಾ ಮತ್ತುಇಂಡೋನೇಶಿಯಾದಲ್ಲಿ ಈಗಾಗಲೇ ಮಹಿಳೆಯರಿಗೆ ಋತುಚಕ್ರದ ರಜೆ ನೀಡಲಾಗುತ್ತಿದೆ. "ಅನಾರೋಗ್ಯ ಸೇರಿದಂತೆ ತಾತ್ಕಾಲಿಕ ಆರೋಗ್ಯ ಸಮಸ್ಯೆ ಇರುವವರಿಗೆ ರಜೆ ನೀಡಲಾಗುತ್ತದೆ. ಇದೇ ಕ್ರಮವು ಋತುಚಕ್ರದ ಸಮಸ್ಯೆಗೆ ಅನ್ವಯವಾಗಬೇಕು. ಮುಟ್ಟಿನ ಸಮಯದಲ್ಲಿ ತೀವ್ರ ನೋವು ಅನುಭವಿಸುವ ಮಹಿಳೆಯರು ಮನೆಯಲ್ಲಿ ಉಳಿಯಲು ಅನುಮತಿ ನೀಡಬೇಕಿದೆ. ಹೀಗಾಗಿ ಋತುಚಕ್ರದ ರಜೆ ನೀಡಲು ತೀರ್ಮಾನಿಸಲಾಗಿದೆ,'' ಎಂದು ಸ್ಪೇನ್‌ ಸರಕಾರದ ಕಾರ್ಯದರ್ಶಿ ಏಂಜೆಲಾ ರೋಡ್ರಿಗಸ್‌ ತಿಳಿಸಿದ್ದಾರೆ.

Spanish womens get three day menstrual leave

"25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇ.20ರಷ್ಟು ಮಹಿಳೆಯರು ಮುಟ್ಟಿನ ಸಮಯದ ನೋವಿನಿಂದಾಗಿ ಶಾಲೆ, ಕಾಲೇಜು ಅಥವಾ ಕೆಲಸಕ್ಕೆ ಹೋಗಲಾಗದೇ ತಪ್ಪಿಸಿಕೊಂಡಿದ್ದಾರೆ. ಇದರ ಜತೆಗೆ ಶೇ.40ರಷ್ಟುಮಹಿಳೆಯರು ಮುಟ್ಟಿನ ತೀವ್ರ ನೋವಿನ ಪರಿಣಾಮ ಕೆಲಸದಲ್ಲಿ ಸರಿಯಾಗಿ ಗಮನಹರಿಸಲು ಸಾಧ್ಯವಾಗದೇ ತೊಂದರೆ ಅನುಭವಿಸುತ್ತಿದ್ದಾರೆ,'' ಎಂದು ಬ್ರಿಟೀಶ್‌ ಮೆಡಿಕಲ್‌ ಜರ್ನಲ್‌ ಅಧ್ಯಯನ ವರದಿ ತಿಳಿಸಿದೆ.

2016ರಲ್ಲಿ ಲಂಡನ್‌ ವಿಶ್ವವಿದ್ಯಾನಿಲಯದ ಅಧ್ಯಾಪಕರೊಬ್ಬರು, "ಮುಟ್ಟಿನ ನೋವು ಹೃದಯಾಘಾತದ ನೋವಿನಷ್ಟೇ ತೀವ್ರವಾಗಿರುತ್ತದೆ,'' ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

Spanish womens get three day menstrual leave

ಕಳೆದ ತಿಂಗಳು ಸ್ಪೇನ್‌ ಸರಕಾರ ನೂತನ ಕಾನೂನು ಒಂದನ್ನು ಜಾರಿಗೊಳಿಸಿದ್ದು, ಅದರ ಪ್ರಕಾರ ಗರ್ಭವನ್ನು ಧರಿಸದೇ ಇರಲು ಮಹಿಳೆ ತೀರ್ಮಾನಿಸಿದಾಗ, ಇದಕ್ಕೆ ವಿರುದ್ಧವಾಗಿ ಅವಳನ್ನು ಬಲವಂತಪಡಿಸಿದರೆ, ಕಿರುಕುಳ ನೀಡಿದರೆ, ಅಂಥ ವ್ಯಕ್ತಿಗೆ ಮೂರರಿಂದ ಒಂದು ವರ್ಷಗಳ ಕಾಲು ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಜತೆಗೆ ಆ ವ್ಯಕ್ತಿಗೆ ಸಾಮಾಜಿಕ ಕಾರ್ಯ ಮಾಡುವಂತೆ ನ್ಯಾಯಾಲಯ ಸೂಚಿಸಬಹುದಾದ ಕಾನೂನನ್ನುಜಾರಿಗೊಳಿಸಲಾಗಿದೆ.

English summary
Spanish women suffering painful periods given three day menstrual leave,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X