ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಕೊರೊನಾ’ ವ್ಯಾಕ್ಸಿನ್ ಬೇಡ ಅನ್ನುವವರ ಪ್ರತ್ಯೇಕ ಪಟ್ಟಿ ತಯಾರಿ!

|
Google Oneindia Kannada News

ಕೊರೊನಾ, ವುಹಾನ್, ರೂಪಾಂತರಿ.. ಹೀಗೆ ದಿನ ಬೆಳಗಾದರೆ ಕೊರೊನಾ ಪದ ಕಿವಿಗೆ ರಾಚುತ್ತಲೇ ಇದೆ. ಕಳೆದ 1 ವರ್ಷದಿಂದಲೂ ಡೆಡ್ಲಿ ಕೊರೊನಾ ನಮ್ಮೆಲ್ಲರನ್ನೂ ಕಾಡುತ್ತಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ನಮ್ಮ ಜೀವ ಉಳಿಸಲು ಸಂಜೀವಿನಿಯಂತೆ ಕೊರೊನಾ ಲಸಿಕೆಗಳು ಸಿದ್ಧವಾಗಿವೆ. ಆದರೆ ಲಸಿಕೆಯನ್ನ ಯಾರಿಗೂ ಬಲವಂತವಾಗಿ ನೀಡಲು ಸಾಧ್ಯವಿಲ್ಲ.

ಅದರಲ್ಲೂ ಯುರೋಪ್‌ ರೀತಿಯ ಪ್ರಜಾಪ್ರಭುತ್ವ ವಾದಿ ರಾಷ್ಟ್ರಗಳಲ್ಲಿ ಪ್ರಜೆಗಳನ್ನ ಯಾವುದಕ್ಕೂ ಒತ್ತಾಯಿಸಲು ಸಾಧ್ಯವಿಲ್ಲ. ಹೀಗಾಗಿ ಅಲ್ಲಿ ಇಷ್ಟವಿದ್ದವರು ಕೊರೊನಾ ಲಸಿಕೆಯನ್ನ ಪಡೆಯಬಹುದು. ಬೇಡ ಎನ್ನುವವರಿಗೆ ವ್ಯಾಕ್ಸಿನ್ ತೆಗೆದುಕೊಳ್ಳುವಂತೆ ಒತ್ತಾಯ ಮಾಡುವುದಿಲ್ಲ. ಆದರೆ ಈ ಬಗ್ಗೆ ವರದಿ ಸಿದ್ಧಪಡಿಸಲು ಸ್ಪೇನ್ ಹೊಸ ಐಡಿಯಾ ಮಾಡಿದೆ.

ಕೋಟಿ ಕೋಟಿ ಜನರಿಗೆ 'ಕೊರೊನಾ’ ವ್ಯಾಕ್ಸಿನ್ ನೀಡುವ ಕಾರ್ಯಕ್ಕೆ ಚಾಲನೆಕೋಟಿ ಕೋಟಿ ಜನರಿಗೆ 'ಕೊರೊನಾ’ ವ್ಯಾಕ್ಸಿನ್ ನೀಡುವ ಕಾರ್ಯಕ್ಕೆ ಚಾಲನೆ

ಅದೇನೆಂದರೆ ಸ್ಪೇನ್‌ನಲ್ಲಿ ವ್ಯಾಕ್ಸಿನ್‌ ಬೇಡ ಅನ್ನುವವರ ಪಟ್ಟಿಯನ್ನ ಸಿದ್ಧಪಡಿಸಲು ಸ್ಪೇನ್ ಸರ್ಕಾರ ನಿರ್ಧರಿಸಿದೆ. ಇದರಿಂದ ಸ್ಪೇನ್‌ನಲ್ಲಿ ಲಸಿಕೆ ನೀಡಿದ ಬಳಿಕ ಕೊರೊನಾ ಹರಡುವಿಕೆ ಪ್ರಮಾಣ ಕಂಡುಹಿಡಿಯಲು ಸಾಧ್ಯ ಎಂದು ಸರ್ಕಾರ ಈ ತೀರ್ಮಾನವನ್ನು ಕೈಗೊಂಡಿದೆ. ಆದರೆ ಇದು ಅಲ್ಲಿನ ಪ್ರಜೆಗಳಲ್ಲಿ ಆತಂಕ ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ.

ಯುರೋಪ್ ರಾಷ್ಟ್ರಗಳ ಜೊತೆ ಹಂಚಿಕೆ

ಯುರೋಪ್ ರಾಷ್ಟ್ರಗಳ ಜೊತೆ ಹಂಚಿಕೆ

ಪ್ರಜೆಗಳ ಅನುಮಾನಗಳಿಗೆ ಸ್ಪೇನ್‌ನ ಸಚಿವರು ಹಾಗೂ ಅಧಿಕಾರಿಗಳು ಉತ್ತರ ನೀಡಿದ್ದಾರೆ. ಲಸಿಕೆ ಪಡೆಯದ ಪ್ರಜೆಗಳ ಪಟ್ಟಿ ಮಾಡುತ್ತಿರುವುದು ಯುರೋಪ್‌ನ ಸ್ನೇಹಿತ ರಾಷ್ಟ್ರಗಳ ಜೊತೆ ಮಾಹಿತಿಗಾಗಿ ಹಂಚಿಕೊಳ್ಳಲು, ಆದರೆ ಇದನ್ನು ನಾವು ಸಾರ್ವಜನಿಕವಾಗಿ ಬಹಿರಂಗಪಡಿಸುವುದಿಲ್ಲ ಎಂದಿದ್ದಾರೆ. ಪ್ರಜೆಗಳಲ್ಲಿ ಮೂಡಿದ್ದ ಭೀತಿ ಹೋಗಲಾಡಿಸಲು ಸ್ಪೇನ್ ಸರ್ಕಾರ ಸ್ಪಷ್ಟನೆ ನೀಡಿದೆ. ಆದರೂ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುವ ಸ್ಪೇನ್ ನಾಗರಿಕರು ಸರ್ಕಾರದ ಈ ನೀತಿಗೆ ಖಂಡನೆ ವ್ಯಕ್ತಪಡಿಸುತ್ತಿದ್ದಾರೆ. ಅಲರ್ಜಿ ಮತ್ತಿತರ ಸಮಸ್ಯೆಗಳನ್ನ ಎದುರಿಸುತ್ತಿರುವ ಜನರಿಗೆ ಈಗಾಗಲೇ ಲಸಿಕೆಯಿಂದ ವಿನಾಯಿತಿ ಸಿಕ್ಕಿದೆ.

ಸ್ಪೇನ್‌ನಲ್ಲಿ ಸೋಂಕಿತರ ನರಳಾಟ

ಸ್ಪೇನ್‌ನಲ್ಲಿ ಸೋಂಕಿತರ ನರಳಾಟ

ಯುರೋಪ್‌ನ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಸ್ಪೇನ್ ಬಡರಾಷ್ಟ್ರ. ಅದರಲ್ಲೂ ಅಲ್ಲಿನ ಆರೋಗ್ಯ ವ್ಯವಸ್ಥೆ ತೀರಾ ಹದಗೆಟ್ಟು ಹೋಗಿದೆ. ಕೊರೊನಾ ಬಂದಪ್ಪಳಿಸಿದ ಬಳಿಕ ಸ್ಪೇನ್‌ನಲ್ಲಿ ಎಲ್ಲವೂ ಅಯೋಮಯವಾಗಿದೆ. ಜನರು ಕೊರೊನಾ ಸೋಂಕಿನಿಂದ ಬಚಾವ್ ಆಗಲು ನಾನಾ ತಂತ್ರ ಹೂಡುವಂತಾಗಿದೆ. ಏಕೆಂದರೆ ಆಸ್ಪತ್ರೆಗೆ ಹೋದವ ವಾಪಸ್ ಮನೆಗೆ ಬರ್ತಾನೆ ಅನ್ನೋದೇ ಡೌಟ್. ಪರಿಸ್ಥಿತಿ ಹೀಗಿರುವಾಗಲೇ ಸುಮಾರು 50 ಸಾವಿರ ಸ್ಪೇನ್ ನಾಗರಿಕರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. 2020ರ ಮೇ-ಜೂನ್ ವೇಳೆ ಸ್ಪೇನ್‌ನಲ್ಲಿ ಎಲ್ಲಾ ಆಸ್ಪತ್ರೆಗಳು ಸೋಂಕಿತರಿಂದ ತುಂಬಿ ಹೋಗಿದ್ದವು. ಐಸಿಯು ಬೆಡ್ ಸಿಗದೆ ಎಷ್ಟೋ ಜನ ಉಸಿರು ಚೆಲ್ಲಿದ್ದರು.

‘ಕೊರೊನಾ' ನಡುವೆ ಮತ್ತೊಂದು ಸಾಂಕ್ರಾಮಿಕ ರೋಗದ ಭೀತಿ..?‘ಕೊರೊನಾ' ನಡುವೆ ಮತ್ತೊಂದು ಸಾಂಕ್ರಾಮಿಕ ರೋಗದ ಭೀತಿ..?

ಸಾಮೂಹಿಕ ಲಸಿಕೆ ಕಾರ್ಯಕ್ರಮ

ಸಾಮೂಹಿಕ ಲಸಿಕೆ ಕಾರ್ಯಕ್ರಮ

ಈಗಾಗ್ಲೇ ಲಕ್ಷ ಲಕ್ಷ ಯುರೋಪಿಯನ್ನರು ಕೊರೊನಾಗೆ ಬಲಿಯಾಗಿದ್ದಾರೆ. ಪರಿಸ್ಥಿತಿ ಹೀಗಿರುವಾಗ ವ್ಯಾಕ್ಸಿನ್ ಒಂದೇ ಜೀವ ಕಾಪಾಡುವ ದೇವರು ಅಂತಾ ಯುರೋಪಿಯನ್ನರು ಜಪ ಮಾಡುತ್ತಿದ್ದರು. ಅವರ ಆಸೆಯನ್ನ ಈಡೇರಿಸಲು ‘ಯುರೋಪಿಯನ್ ಯೂನಿಯನ್' ಒಗ್ಗಟ್ಟಿನಿಂದ ಕೆಲಸ ಮಾಡಿದ್ದು, ಸುಮಾರು 74 ಕೋಟಿ ಜನರಿಗೆ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಜರ್ಮನಿ, ಫ್ರಾನ್ಸ್, ಇಟಲಿ, ಸ್ಪೇನ್ ಸೇರಿದಂತೆ 27 ರಾಷ್ಟ್ರಗಳ ಸುಮಾರು 74 ಕೋಟಿ ಜನರಿಗೆ ಸಾಮೂಹಿಕವಾಗಿ ಲಸಿಕೆ ವಿತರಿಸುವ ಕೆಲಸ ಆರಂಭವಾಗಿದೆ.

ಬ್ರಿಟನ್ ಜನರಿಗೆ ಲಸಿಕೆ ಸಿಕ್ಕಿದೆ

ಬ್ರಿಟನ್ ಜನರಿಗೆ ಲಸಿಕೆ ಸಿಕ್ಕಿದೆ

ಕೊರೊನಾ ಕೂಪದಲ್ಲಿ ನರಳುತ್ತಿರುವ ಬ್ರಿಟನ್‌ನಲ್ಲಿ ಡಿಸೆಂಬರ್ 8ರಿಂದಲೇ ಸಾಮೂಹಿಕ ಲಸಿಕೆ ಕಾರ್ಯಕ್ಕೆ ಚಾಲನೆ ಸಿಕ್ಕಿತ್ತು. ಆದರೆ ಹೀಗೆ ಲಸಿಕೆ ವಿತರಣೆ ಕಾರ್ಯ ಆರಂಭವಾಗಿ 10 ದಿನ ಕಳೆಯುವ ಒಳಗೆ ಕೊರೊನಾ ವೈರಸ್ ರೂಪಾಂತರ ಹೊಂದಿದ ಪ್ರಕರಣಗಳ ಸಂಖ್ಯೆ ಹೆಚ್ಚಾಗಿತ್ತು. ಈಗಾಗಲೇ ಬ್ರಿಟನ್ ‘ಯುರೋಪಿಯನ್ ಯೂನಿಯನ್' ಬಿಟ್ಟು ಹೊರಗೆ ಬಂದಿದೆ. ಹೀಗಾಗಿ ತನ್ನ ಪ್ರಜೆಗಳಿಗೆ ಬೇಕಾದ ವ್ಯಾಕ್ಸಿನ್‌ಗಳನ್ನ ಬ್ರಿಟನ್ ಸ್ವಂತ ಹಣದಿಂದ ಖರೀದಿಸಿದೆ. ಆದರೆ ‘ಯುರೋಪಿಯನ್ ಯೂನಿಯನ್' ಒಗ್ಗಟ್ಟಿನಿಂದ ಲಸಿಕೆ ಖರೀದಿ ಮಾಡಿದೆ.

English summary
Spain will register people who refuse Coronavirus vaccine. Spain government assured to their citizens that this report will keep secretly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X