ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನ್‌ದಿಂದ ಎಲ್ಲರನ್ನು ರಕ್ಷಿಸಲಾಗದು ಎಂದ ಸ್ಪೇನ್‌

|
Google Oneindia Kannada News

ಸ್ಪೇನ್‌, ಆಗಸ್ಟ್‌ 24: "ಅಫ್ಘಾನಿಸ್ತಾನದಲ್ಲಿ ಸ್ಪಾನಿಶ್‌ ಮಿಷನ್‌ಗಾಗಿ ಸೇವೆ ಸಲ್ಲಿಸಿದ ಎಲ್ಲಾ ಅಫ್ಘಾನ್‌ ಜನರನ್ನು ರಕ್ಷಣೆ ಮಾಡಲು ಸಾಧ್ಯವಿಲ್ಲ" ಎಂದು ಮಂಗಳವಾರ ಹೇಳಿರುವ ಸ್ಪೇನ್‌ನ ರಕ್ಷಣಾ ಸಚಿವೆ ಮಾರ್ಗರಿಟಾ ರೋಬಲ್ಸ್‌, "ಪರಿಸ್ಥಿತಿ ಬಹಳ ನಾಟಕೀಯವಾಗಿದೆ," ಎಂದು ಹೇಳಿದ್ದಾರೆ.

ಹಾಗೆಯೇ "ತಾಲಿಬಾನ್‌ನ ಚೆಕ್‌ ಪಾಯಿಂಟ್‌ಗಳನ್ನು ದಾಟಿ ಹಾಗೂ ತಾಲಿಬಾನ್‌ನ ಕ್ರೂರತೆಯನ್ನು ಮೀರಿ ಸ್ಪಾನಿಷ್‌ ಮಿಲಟರಿಯ ದಿನದ ವಿಮಾನವನ್ನು ಏರಲು ಜನರು ಸಂಕಷ್ಟಪಡುತ್ತಿದ್ದಾರೆ," ಎಂದು ಈ ಸಂದರ್ಭದಲ್ಲೇ ಸ್ಪೇನ್‌ನ ರಕ್ಷಣಾ ಸಚಿವೆ ಮಾರ್ಗರಿಟಾ ರೋಬಲ್ಸ್‌ ಉಲ್ಲೇಖ ಮಾಡಿದ್ದಾರೆ.

ಅಫ್ಘಾನ್ ಬಿಕ್ಕಟ್ಟಿನ ಬಗ್ಗೆ ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಪ್ರಧಾನಿ ಮೋದಿ ಚರ್ಚೆ ಅಫ್ಘಾನ್ ಬಿಕ್ಕಟ್ಟಿನ ಬಗ್ಗೆ ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಪ್ರಧಾನಿ ಮೋದಿ ಚರ್ಚೆ

"ನಮ್ಮಿಂದ ಸಾಧ್ಯವಾದಷ್ಟು ಜನರನ್ನು ನಾವು ಅಫ್ಘಾನಿಸ್ತಾನದಿಂದ ಕರೆ ತರುತ್ತೇವೆ. ಆದರೆ ಬೇರೆ ಕಾರಣದಿಂದಾಗಿ ಅಫ್ಘಾನಿಸ್ತಾನದಲ್ಲೇ ಜನರು ಉಳಿದರೆ ಅದು ನಮ್ಮ ಮೇಲೆ ಆಧಾರಿತವಾದುದ್ದಲ್ಲ. ಆದರೆ ಅದು ಅಲ್ಲಿನ ಸ್ಥಿತಿಯ ಮೇಲೆ ಆಧಾರಿತವಾಗುತ್ತದೆ," ಎಂದು ಸುದ್ದಿ ಸಂಸ್ಥೆಯೊಂದಿಗಿನ ಸಂದರ್ಶನದ ವೇಳೆ ಮಾರ್ಗರಿಟಾ ರೋಬಲ್ಸ್‌ ಹೇಳಿದ್ದಾರೆ.

Spain Warns Will Have To Leave People Behind In Afghanistan

"ಇದು ಎಲ್ಲರಿಗೂ ಅತ್ಯಂತ ನಿರಾಶಾದಾಯಕ ಸಂದರ್ಭವಾಗಿದೆ. ಏಕೆಂದರೆ ಕಾಬೂ‌ಲ್‌ಗೆ ಬಂದರೂ ವಿಮಾನ ನಿಲ್ದಾಣದೊಳಗೆ ಬರುವುದು ಕಷ್ಟವಾಗುತ್ತಿದೆ. ತಾಲಿಬಾನ್‌ ಉಗ್ರರು ಹೆಚ್ಚು ಆಕ್ರೋಶಕ್ಕೆ ಒಳಗಾಗಿದ್ದಾರೆ. ಎಂದಿನಂತೆ ಗುಂಡಿನ ದಾಳಿ, ಕ್ರೌರ್ಯವನ್ನು ತಾಲಿಬಾನಿಗರು ಪ್ರದರ್ಶನ ಮಾಡುತ್ತಿದ್ದಾರೆ. ಅಫ್ಘಾನಿಸ್ತಾನದಲ್ಲಿ ಸ್ಥಿತಿಯು ಸಂಪೂರ್ಣವಾಗಿ ನಾಟಕೀಯವಾಗಿದೆ," ಎಂದು ಅಭಿಪ್ರಾಯಿಸಿದ್ದಾರೆ.

ಜನರು ಸಮಯ ಮುಗಿಯುತ್ತಿದೆ ಎಂಬಂತೆ ಆತಂಕಕ್ಕೆ ಒಳಗಾಗಿದ್ದಾರೆ, ಹಾಗಾಗಿ ಅಲ್ಲಿ ಎಲ್ಲಾ ಪ್ರಕ್ರಿಯೆಯೂ ಭಾರೀ ಸಂದಿಗ್ಧ ಪರಿಸ್ಥಿತಿಯ ನಡುವೆ ನಡೆಯುತ್ತಿದೆ. ದುಬೈ ಮೂಲಕವಾಗಿ ಸ್ಪೇನ್‌ ತನ್ನ ರಾಷ್ಟ್ರದ ಜನರನ್ನು ಹಾಗೂ ಸ್ಥಳೀಯ ಕಾಂಟ್ರಾಕ್ಟರ್‌ಗಳನ್ನು ಹತ್ತು ದಿನದ ಹಿಂದಿ ತಾಲಿಬಾನ್‌ ಕಾಬೂಲ್‌ ಅನ್ನು ವಶಕ್ಕೆ ಪಡೆದ ಬಳಿಕದಿಂದ ವಾಪಾಸ್‌ ಕರೆ ತರುತ್ತಿದೆ. ಸುಮಾರು 700 ಜನರನ್ನು ಸ್ಪೇನ್‌ ಅಫ್ಘಾನಿಸ್ತಾನದಿಂದ ವಾಪಾಸ್‌ ಕರೆತಂದಿದೆ. ಆದರೆ, "ಅಫ್ಘಾನಿಸ್ತಾನದಲ್ಲಿ ಇನ್ನೂ ಅಧಿಕ ಮಂದಿ ಇದ್ದಾರೆ, ತಾಲಿಬಾನ್‌ ಉಗ್ರರ ಆತಂಕದಲ್ಲೇ ಅಲ್ಲಿ ಉಳಿದಿದ್ದಾರೆ. ನಾವು ಕೊನೆಯವರೆಗೂ ಅಲ್ಲಿಂದ ಸಾಧ್ಯವಾದಷ್ಟು ಜನರನ್ನು ವಾಪಾಸ್‌ ಕರೆಸಿಕೊಳ್ಳುವ ಕಾರ್ಯ ಮಾಡುತ್ತೇವೆ," ಎಂದು ಹೇಳಿದ್ದಾರೆ.

 ಪಾಕ್‌ ವಿರುದ್ದ ಕಿಡಿಕಾರಿ, ಭಾರತ 'ನಿಜವಾದ ಸ್ನೇಹಿತ' ಎಂದ ಅಫ್ಘಾನ್‌ ಪಾಪ್‌ ತಾರೆ ಆರ್ಯಾನಾ ಪಾಕ್‌ ವಿರುದ್ದ ಕಿಡಿಕಾರಿ, ಭಾರತ 'ನಿಜವಾದ ಸ್ನೇಹಿತ' ಎಂದ ಅಫ್ಘಾನ್‌ ಪಾಪ್‌ ತಾರೆ ಆರ್ಯಾನಾ

ಅಫ್ಘಾನಿಸ್ಯಾನದಿಂದ ನಿರ್ದಿಷ್ಟವಾಗಿ ಎಷ್ಟು ಜನರನ್ನು ವಾಪಾಸ್‌ ಕರೆಸಿಕೊಳ್ಳಲಾಗುವುದು ಎಂಬ ಪ್ರಶ್ನೆಗೆ ಸ್ಪೇನ್‌ ಆಡಳಿತ ಈವರೆಗೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಹಾಗೆಯೇ ಕೊನೆಯ ದಿನ ಯಾವುದು ಎಂದು ಕೂಡಾ ಸ್ಪಷ್ಟಪಡಿಸಿಲ್ಲ. ಆದರೆ ಯುಎಸ್‌ನ ಅಧ್ಯಕ್ಷ ಜೋ ಬೈಡೆನ್‌ ಮಾತ್ರ ಈ ಸ್ಥಳಾಂತರ ಪ್ರಕ್ರಿಯೆಗೆ ನಿರ್ದಿಷ್ಟ ಸಮಯವನ್ನು ಗೊತ್ತು ಮಾಡಿದ್ದಾರೆ. ಯುಕೆ ಕೂಡಾ ಒಂದು ದಿನ ನಿಗದಿ ಮಾಡಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಆಗಸ್ಟ್‌ 31 ರವರೆಗೆ ಈ ಸ್ಥಳಾಂತರ ಕಾರ್ಯ ನಡೆಯಲಿದೆ ಎಂದು ಹೇಳಿಕೊಂಡಿದ್ದಾರೆ. ಹಾಗೆಯೇ ಅಗತ್ಯವಿದ್ದರೆ ಈ ಸ್ಥಳಾಂತರ ಪ್ರಕ್ರಿಯೆಯ ಅವಧಿ ವಿಸ್ತರಣೆ ಮಾಡಲಾಗುವುದು ಎಂದು ಕೂಡಾ ಉಭಯ ರಾಷ್ಟ್ರಗಳು ತಿಳಿಸಿದೆ.

ಆದರೆ ತಾಲಿಬಾನ್‌ನ ವಕ್ತಾರರು ತಾವು ಈ ಸ್ಥಳಾಂತರ ಪ್ರಕ್ರಿಯೆಯನ್ನು ಇನ್ನಷ್ಟು ಕಾಲ ವಿಸ್ತರಣೆ ಮಾಡಲು ಯಾವುದೇ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ. ಇನ್ನು ಬೈಡೆನ್‌ ಅಫ್ಘಾನಿಸ್ತಾನದಿಂದ ಯುಎಸ್‌ ಪಡೆಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆಯನ್ನು ವಿಸ್ತರಣೆ ಮಾಡುವುದಾದರೆ ಎಂಬ ಪ್ರಶ್ನೆಗ ಯಾವುದೇ ಪ್ರತಿಕ್ರಿಯೆ ನೀಡದ ಸ್ಪೇನ್‌ನ ರಕ್ಷಣಾ ಸಚಿವೆ ಮಾರ್ಗರಿಟಾ ರೋಬಲ್ಸ್‌, "ನಾವು ಪ್ರಸ್ತುತ ಅಫ್ಘಾನಿಸ್ತಾನದಿಂದ ಸ್ಪೇನ್‌ನ ಜನರ ಸ್ಥಳಾಂತರ ಪ್ರಕ್ರಿಯೆಯತ್ತ ಮಾತ್ರ ಗಮನ ಹರಿಸಿದ್ದೇವೆ," ಎಂದು ತಿಳಿಸಿದ್ದಾರೆ.

ಆದರೆ ಸೋಮವಾರ ಖಾಸಗಿ ಚಾನೆಲ್‌ ಲಾ ಸೆಂಕ್ಸ್‌ಟಾಗೆ ಪ್ರತಿಕ್ರಿಯೆ ನೀಡಿದ್ದ ಸ್ಪೇನ್‌ನ ರಕ್ಷಣಾ ಸಚಿವೆ ಮಾರ್ಗರಿಟಾ ರೋಬಲ್ಸ್‌, "ಯುಎಸ್‌ ಪಡೆಗಳು ಕಾಬೂಲ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತನ್ನ ಹಿಡಿತದಲ್ಲಿ ಹೊಂದಿರುವವರೆಗೆ ಮಾತ್ರ ಸ್ಪೇನ್‌ ತನ್ನ ಸ್ಥಳಾಂತರ ಕಾರ್ಯವನ್ನು ನಡೆಸಲು ಸಾಧ್ಯ," ಎಂದು ಹೇಳಿದ್ದಾರೆ. ಇನ್ನು ಮಂಗಳವಾರ ಮಾಧ್ಯಮದೊಂದಿಗೆ ಮಾತನಾಡಿ ರಕ್ಷಣಾ ಸಚಿವೆ ಮಾರ್ಗರಿಟಾ ರೋಬಲ್ಸ್‌, "ಇನ್ನು ಸುಮಾರು 420 ಮಂದಿ ಸ್ಪೇನ್‌ಗೆ ಮಂಗಳವಾರ ಬರುವ ನಿರೀಕ್ಷೆಯಿದೆ," ಎಂದು ಹೇಳಿದ್ದಾರೆ. ಈ ಜನರಲ್ಲಿ ದುಬೈನಲ್ಲಿ ಇರುವ 290 ಮಂದಿ ಹಾಗೂ ಕಾಬೂಲ್‌ನಿಂದ ಸ್ಪಾನಿಷ್‌ ಮಿಲಟರಿ ವಿಮಾನದಲ್ಲಿ ಬರಲಿರುವವರು ಸೇರಿದ್ದಾರೆ ಎಂದು ಸ್ಪೇನ್‌ ರಕ್ಷಣಾ ಸಚಿವೆ ಸೇರಿಸಿದ್ದರು.

(ಒನ್‌ ಇಂಡಿಯಾ ಸುದ್ದಿ)

Recommended Video

ಎಲ್ಲಾ ವಿಮಾನವನ್ನ ಹೈಜಾಕ್ ಮಾಡುತ್ತಿರುವ ಉಗ್ರರು !! | Oneindia Kannada

English summary
Spain will not be able to rescue all Afghans who served Spanish missions in Afghanistan because of the "dramatic" situation on the ground, Defence Minister Margarita Robles said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X