ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರು ತಿಂಗಳ ಮಳೆ 20 ನಿಮಿಷದಲ್ಲಿಯೇ ಸುರಿದಾಗ...

|
Google Oneindia Kannada News

ನವದೆಹಲಿ, ಆಗಸ್ಟ್ 13: ಮುಂಗಾರು ಮಳೆ ವಿವಿಧೆಡೆ ಹದವಾಗಿ ಬೀಳುತ್ತಿದ್ದರೆ, ಇನ್ನು ಕೆಲವು ಪ್ರದೇಶಗಳಲ್ಲಿ ಅನಾಹುತ ಸೃಷ್ಟಿಸುತ್ತಿದೆ. ದೇಶದ ಹಲವೆಡೆ ರಸ್ತೆಗಳು ಜಲಾವೃತವಾಗಿವೆ. ಮನೆಗಳು ಕುಸಿದುಹೋಗಿವೆ. ಪ್ರವಾಹದಲ್ಲಿ ಕಾರುಗಳು ಕೊಚ್ಚಿಹೋಗಿವೆ. ಏಕಾಏಕಿ ಬೃಹತ್ ಗುಡ್ಡಗಳು ನೆಲಕಚ್ಚಿವೆ. ಇಂತಹ ನೂರಾರು ಘಟನೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಮುಂಬೈ, ಕೇರಳ, ಕರ್ನಾಟಕ, ಅಸ್ಸಾಂ ಹೀಗೆ ವಿವಿದ ರಾಜ್ಯಗಳು ವರುಣನ ಆರ್ಭಟದಿಂದ ತತ್ತರಿಸಿವೆ.

ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಕೆಲವು ವಿಡಿಯೋಗಳು ಎದೆನಡುಗಿಸುತ್ತವೆ. ಅಂದಹಾಗೆ, ಇವು ಭಾರತದ ಮಳೆಯ ದೃಶ್ಯಗಳಲ್ಲ. ಸ್ಪೇನ್‌ನ ಸೆವಿಲ್ಲೆ ಪ್ರದೇಶದ ಎಸ್ಟೆಪಾ ಎಂಬ ಹಳ್ಳಿಯ ರಸ್ತೆಗಳ ಚಿತ್ರಣ.

ವರದಿಗಳ ಪ್ರಕಾರ ಸ್ಪೇನ್‌ನ ಸೆವಿಲ್ಲೆ ಪ್ರದೇಶದಲ್ಲಿ ಒಟ್ಟು ಮೂರು ತಿಂಗಳಲ್ಲಿ ಬೀಳಬಹುದಾದ ಮಳೆ ಕೇವಲ 20 ನಿಮಿಷಗಳಲ್ಲಿಯೇ ಸುರಿದಿದೆ. ಇದರಿಂದ ಇದ್ದಕ್ಕಿದ್ದಂತೆ ಪ್ರವಾಹ ಸಂಭವಿಸಿ, ಜನರು ಕಂಗಾಲಾಗಿದ್ದಾರೆ. ಅನೇಕ ಕಟ್ಟಡಗಳು ನೆಲಸಮವಾಗಿವೆ. ಈ ಅನಾಹುತದ ಸೂಚನೆಯೇ ಇಲ್ಲದ ಜನರು ಜೀವ ಕಳೆದುಕೊಂಡಿದ್ದಾರೆ. ಆಸ್ತಿಪಾಸ್ತಿಗಳು ನೀರು ಪಾಲಾಗಿವೆ. ಮುಂದೆ ಓದಿ.

20 ನಿಮಿಷದಲ್ಲೇ ಪ್ರವಾಹ

20 ನಿಮಿಷದಲ್ಲೇ ಪ್ರವಾಹ

ವಿಪರೀತ ಗುಡುಗು ಮಿಂಚು ಮತ್ತು ಆಲಿಕಲ್ಲು ಸಹಿತ ಎಸ್ಟೆಪಾ ಪಟ್ಟಣದಲ್ಲಿ ಮಂಗಳವಾರ ಭೀಕರ ಮಳೆ ಸುರಿದಿದೆ. ಕೇವಲ 20 ನಿಮಿಷ ಸುರಿದ ಮಳೆಯಿಂದ ಒಮ್ಮೆಲೆ ಪ್ರವಾಹ ಉಂಟಾಗಿ ರಸ್ತೆಗಳ ಮೇಲೆ ನೀರು ಉಕ್ಕಿದೆ. ಗಲ್ಲಿಗಲ್ಲಿಗಳಿಂದ ನೀರು ಹರಿದುಬಂದಿದೆ.

ಭಯ ಹುಟ್ಟಿಸುವ ವಿಡಿಯೋಗಳು

ಭಯ ಹುಟ್ಟಿಸುವ ವಿಡಿಯೋಗಳು

ಕೆಲವೇ ಸೆಕೆಂಡ್‌ಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿ ಮನೆಯೊಂದು ಕುಸಿದುಬೀಳುವ ವಿಡಿಯೋ ದೃಶ್ಯ ಭಯಾನಕವಾಗಿದೆ. ಹೀಗೆ ಹಠಾತ್ತಾಗಿ ನುಗ್ಗಿದ ನೀರಿನ ವೇಗಕ್ಕೆ ಅಲ್ಲಿದ್ದ ಕಾರೊಂದು ಕೊಚ್ಚಿಹೋಗಿದೆ. ರಸ್ತೆಯ ಮೇಲೆಯೇ ಕಾರನ್ನು ನೀರು ತನ್ನೊಟ್ಟಿಗೆ ಕೊಂಡೊಯ್ದಿದೆ. ಮತ್ತೊಂದು ವಿಡಿಯೋದಲ್ಲಿ ರಸ್ತೆಗೆ ನುಗ್ಗುವ ನೀರು, ಅಲ್ಲಿದ್ದ ಪ್ರತಿಯೊಂದು ವಸ್ತುವನ್ನೂ ಸೆಳೆದುಕೊಂಡು ಹೋಗುವುದು ಕಾಣುತ್ತದೆ.

ಮೊದಲೇ ಎಚ್ಚರಿಸಿದ ಅಧಿಕಾರಿಗಳು

ಮೊದಲೇ ಎಚ್ಚರಿಸಿದ ಅಧಿಕಾರಿಗಳು

ಸ್ಪೇನ್‌ನಲ್ಲಿ ಮಳೆಯಿಂದ ಅತ್ಯಂತ ಹಾನಿಯಾಗುವ ಪ್ರದೇಶವೆಂದರೆ ಎಸ್ಟೆಪಾ ಪಟ್ಟಣ. ಇಲ್ಲಿ ಅತಿವೃಷ್ಟಿ ಸಾಮಾನ್ಯ. ಸೆವಿಲ್ಲೆಯ ಸಿಯೆರಾ ಸುರ್ ಪ್ರದೇಶದಲ್ಲಿ ಸೋಮವಾರದಿಂದ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿತ್ತು. ಆದರೆ ಮಂಗಳವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಆರೇಂಜ್ ಎಲರ್ಟ್ ನೀಡಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಭಾರಿ ಮಳೆಯ ಮುನ್ಸೂಚನೆ ದೊರೆತ ಅಧಿಕಾರಿಗಳು ಮಳೆ ಶುರುವಾಗುವ ಮುನ್ನವೇ ಪ್ರವಾಹ ಪರಿಸ್ಥಿತಿ ನಿಭಾಯಿಸಲು ರಕ್ಷಣಾ ತಂಡವನ್ನು ರವಾನಿಸಿದ್ದರು.

ನೇಪಾಳದಲ್ಲಿಯೂ ಪ್ರವಾಹ

ನೇಪಾಳದಲ್ಲಿಯೂ ಪ್ರವಾಹ

ಸ್ಪೇನ್‌ನ ಹೆರೇರಾ, ಕೋರ್ಬೊಡಾ ಪ್ರಾಂತ್ಯದ ವಿವಿಧ ಪ್ರದೇಶಗಳು ಸೇರಿದಂತೆ ವಿವಿಧೆಡೆ ಧಾರಾಕಾರ ಮಳೆ ಸುರಿದಿದೆ. ಸುಮಾರು 24 ಪ್ರದೇಶಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ. ನೆರೆಯ ನೇಪಾಳದಲ್ಲಿ ಕೂಡ ಮಳೆಯ ಅಬ್ಬರ ಜೋರಾಗಿದೆ. ಮಾನ್ಸೂನ್ ಪೂರ್ವ ಮತ್ತು ಮಾನ್ಸೂನ್ ಮಳೆಗಳಿಂದ ಸಂಭವಿಸಿದ ಭೂಕುಸಿತ, ಪ್ರವಾಹಗಳಿಂದ 198 ಸಾವುಗಳು ಈ ವರ್ಷ ವರದಿಯಾಗಿವೆ.

English summary
Heavy rain in Spain's Seville province caused many damages just in 20 minutes on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X