ಭ್ರಷ್ಟಾಚಾರದಿಂದ ಬಹುಮತ ಕಳೆದುಕೊಂಡ ಸ್ಪೇನ್ ಪ್ರಧಾನಿ ರಾಜೀನಾಮೆ
ಮ್ಯಾಡ್ರಿಡ್, ಜೂನ್ 1: ಸ್ಪೇನ್ ರಾಜಕೀಯ ಇತಿಹಾಸದಲ್ಲಿ ಐತಿಹಾಸಿಕ ಘಟನೆ ನಡೆದಿದೆ. ಬಹುಮತ ಕಳೆದುಕೊಂಡ ಹಿನ್ನೆಲೆಯಲ್ಲಿ ಪ್ರಧಾನಿ ಸ್ಥಾನಕ್ಕೆ ಮರಿಯಾನೋ ರಜಾಯ್ ರಾಜೀನಾಮೆ ನೀಡಿದ್ದಾರೆ.
1977ರಲ್ಲಿ ಸ್ಪೇನ್ ನಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಾದ ನಂತರ ಇದೇ ಪ್ರಪ್ರಥಮ ಬಾರಿಗೆ ಬಹುಮತ ಕಳೆದುಕೊಂಡು ಪ್ರಧಾನಿಯೊಬ್ಬರು ರಾಜೀನಾಮೆ ನೀಡಿದ ಪ್ರಸಂಗ ನಡೆದಿದೆ.
ವಿಶ್ವಾಸ ಮತ ಯಾಚಿಸದೆ ರಾಜೀನಾಮೆ ನಿರ್ಧಾರ ಪ್ರಕಟಿಸಿದ ಬಿಎಸ್ವೈ
ರಜಾಯ್ ಅವರ ಪಕ್ಷ ಭ್ರಷ್ಟಾಚಾರದಲ್ಲಿ ಸಿಲುಕಿದ ಹಿನ್ನೆಲೆಯಲ್ಲಿ 180 ಸಂಸದರು ಬಹುಮತ ಸಾಬೀತು ಪ್ರಸ್ತಾಪಕ್ಕೆ ಸಹಿ ಹಾಕಿದ್ದರು. ಇಂದು ಪ್ರಧಾನಿ ರಜಾಯ್ ಸಂಸತ್ತಿನಲ್ಲಿ ತನಗಿರುವ ಬಹುಮತ ಸಾಬೀತುಪಡಿಸಬೇಕಾಗಿತ್ತು.
ಆದರೆ ಸೋಲರಿತ ಹಾಲಿ ಪ್ರಧಾನಿ ರಜಾಯ್ ವಿಶ್ವಾಸಮತ ಯಾಚನೆ ಮಾಡದೇ ವಿರೋಧ ಪಕ್ಷದ ನಾಯಕನ ಕೈಕುಲುಕಿ ನೇರವಾಗಿ ಪ್ರಧಾನಿ ಹುದ್ದೆಯಿಂದ ನಿರ್ಗಮಿಸಿದ್ದಾರೆ.
ರಜಾಯ್ ನಿರ್ಗಮನದ ಬೆನ್ನಲ್ಲೇ ವಿಪಕ್ಷ ನಾಯಕ ಪೆಡ್ರೋ ಸ್ಯಾಂಚೆಜ್ ಸ್ಪೇನ್ ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಬಿ.ಎಸ್. ಯಡಿಯೂರಪ್ಪ ಬಹುಮತವಿಲ್ಲದೆ ವಿಶ್ವಾಸ ಮತ ಯಾಚನೆ ಮಾಡದೆ ನಿರ್ಗಮಿಸಿದ್ದಾರೆ. ಇದೇ ಮಾದರಿಯಲ್ಲೀಗ ಸ್ಪೇನ್ ಪ್ರಧಾನಿಯೂ ರಾಜೀನಾಮೆ ನೀಡಿ ಕುರ್ಚಿ ತೊರೆದಿದ್ದಾರೆ.