ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈಲ್ಡ್‌ಲೈಫ್‌ ಫೋಟೋಗ್ರಾಫಿ ಪ್ರಶಸ್ತಿ ಗೆದ್ದ ಸ್ಪೇನಿನ ಬಾಲಕ ಆಂಡ್ರ್ಯೂಸ್

|
Google Oneindia Kannada News

ಲಂಡನ್ನಿನ ವೈಲ್ಡ್‌ಲೈಫ್‌ ಫೋಟೋಗ್ರಾಫರ್‌ ಆಫ್‌ ದ ಇಯರ್‌ ಡಾಟ್‌ ಕಾಂ ನಡೆಸುವ ಪ್ರತಿಷ್ಠಿತ ಸ್ಪರ್ಧೆಯ 10ವರ್ಷದೊಳಗಿನ ವಿಭಾಗದಲ್ಲಿ ಸ್ಪೇನ್ ದೇಶದ ಬಾಲಕ ಆಂಡ್ರ್ಯೂಸ್ ಲೂಯಿಸ್ ಡೊಮಿನ್ ಗ್ಯುವೇಜ್ ಪ್ರಶಸ್ತಿ ಗಳಿಸಿದ್ದಾರೆ.

ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಹಾಗೂ ಬಿಬಿಸಿ ವರ್ಲ್ಡ್ ವೈಡ್ ನಡೆಸುವ ವೈಲ್ಡ್ ಲೈಫ್ ಫೊಟೊಗ್ರಾಫರ್ ಆಫ್ ದಿ ಇಯರ್ ಸ್ಪರ್ಧೆ ಕಳೆದ 56 ವರ್ಷಗಳಿಂದ ಆಯೋಜಿಸಲಾಗುತ್ತಿದೆ.

ವೈಲ್ಡ್‌ಲೈಫ್‌ ಫೋಟೋಗ್ರಾಫಿ ''ಆಸ್ಕರ್'' Nominee ಬೆಂಗಳೂರು ಹುಡ್ಗ ವೈಲ್ಡ್‌ಲೈಫ್‌ ಫೋಟೋಗ್ರಾಫಿ ''ಆಸ್ಕರ್'' Nominee ಬೆಂಗಳೂರು ಹುಡ್ಗ

ಈ ಸ್ಪರ್ಧೆಯಲ್ಲಿ 10ವರ್ಷದೊಳಗಿನ ವಿಭಾಗದಲ್ಲಿ ಆಂಡ್ರ್ಯೂಸ್ ತೆಗೆದ ಸ್ಟೋನ್ ಚಾಟ್ ಹಕ್ಕಿಯ ಚಿತ್ರಕ್ಕೆ ಪ್ರಶಸ್ತಿ ಲಭಿಸಿದೆ. ಫುಜಿ ಫಿಲಂ ಎಕ್ಸ್ -ಎಚ್ 1 ಕ್ಯಾಮೆರಾ ಹಾಗೂ 100-400 ಎಂಎಂ ಲೆನ್ಸ್ ಬಳಸಿ ತೆಗೆದ ಚಿತ್ರ ಇದಾಗಿದೆ.

Spain Boy Andrés Luis Dominguez Blanco Wins Wildlife Photographer Of The Year 2020

ಇದೇ ವಿಭಾಗದಲ್ಲಿ ಸ್ಪರ್ಧೆಯಲ್ಲಿದ್ದ ಬೆಂಗಳೂರಿನ ಹುಡುಗ 9 ವರ್ಷ ವಯಸ್ಸಿನ ವಿದ್ಯುನ್ ಅವರ ಚಿತ್ರ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದ್ದು, ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದು ಸಾಧನೆ ಎನ್ನಬಹುದು.

ಪ್ರಶಸ್ತಿ ವಿಜೇತ ಹಾಗೂ ಅಂತಿಮ ಸುತ್ತಿಗೆ ಆಯ್ಕೆಯಾದ ಚಿತ್ರಗಲನ್ನು ಲಂಡನ್ ನಲ್ಲಿ ಅಕ್ಟೋಬರ್ 16ರಿಂದ ಜೂನ್ 2021ರ ತನಕ ಪ್ರದರ್ಶನಕ್ಕಿಡಲಾಗುತ್ತದೆ. ವಿಶ್ವದ ವಿವಿಧೆಡೆಗಳಿಂದ ಬಂದ ಚಿತ್ರಗಳ ನಡುವೆ ಈ ಚಿತ್ರಕ್ಕೆ ವಿಶೇಷ ಮನ್ನಣೆ ಸಿಗಲಿದೆ. ನ್ಯಾಷನಲ್ ಹಿಸ್ಟರಿ ಮ್ಯೂಸಿಯಂನ ವೆಬ್ ತಾಣದಲ್ಲೂ ಎಲ್ಲಾ ವಿಭಾಗದ ಚಿತ್ರಗಳು ಲಭ್ಯ.

Spain Boy Andrés Luis Dominguez Blanco Wins Wildlife Photographer Of The Year 2020

ಕೊರೊನಾವೈರಸ್ ಸೋಂಕಿನ ಭೀತಿ ಇರುವುದರಿಂದ ಈ ಬಾರಿ ಅಕ್ಟೋಬರ್ 14ರಂದು ವರ್ಚ್ಯುಯಲ್ ಸಮಾರಂಭ ಮೂಲಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇಲ್ಲದಿದ್ದರೆ ಲಂಡನ್ನಿನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿತ್ತು.

English summary
Perfect Balance -a capture of bird from Spain boy Andrés Luis Dominguez Blanco has won Oscar of Wildlife Photography under 10 Years and under category. Bengaluru Vidyun's photography was also nominated to final round.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X