ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಎಫೆಕ್ಟ್: ಇಟಲಿ ದೇಶಕ್ಕಿಂತ ಘೋರವಾಗಿದೆ ಸ್ಪೇನ್ ಸ್ಥಿತಿ

|
Google Oneindia Kannada News

ದೆಹಲಿ, ಮಾರ್ಚ್ 30: ಕೊರೊನಾ ವೈರಸ್‌ ಹುಟ್ಟಿಗೆ ಕಾರಣವಾದ ಚೀನಾ ದೇಶದಲ್ಲಿ ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂಬ ಮಾಹಿತಿ ಇದೆ. ಆರಂಭದಲ್ಲಿದ್ದಂತೆ ಸಾವು-ನೋವು ಈಗಿಲ್ಲ. ಈಗ ಚೀನಾದಲ್ಲಿ ಕೊರೊನಾ ಕಂಟ್ರೊಲ್ ಆಗಿದೆ. ಕೊರೊನಾ ಹರಡದಂತೆ ಕಟ್ಟಿಹಾಕಲಾಗಿದೆ ಎಂಬ ಸುದ್ದಿ ಇದೆ.

ಇದು ಬೇರೆ ದೇಶಗಳಿಗೆ ಕೊಂಚ ಸಮಾಧಾನ ತರುವ ಸುದ್ದಿಯಾದರೂ, ಇಟಲಿ, ಯುಎಸ್‌ ಹಾಗೂ ಸ್ಪೇನ್ ದೇಶಗಳ ಸ್ಥಿತಿ ನೋಡಿದ್ರೆ ಆತಂಕ, ಭಯ ಹೆಚ್ಚಾಗುತ್ತಿದೆ. ಇಟಲಿ ದೇಶದಲ್ಲಿ ನರಬಲಿ ನಡೆದಿದೆ. 10 ಸಾವಿರಕ್ಕಿಂತ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಕಡೆಗೂ ಕೊರೊನಾಗೆ ಗುದ್ದು: ರೋಗ ಗೆದ್ದವರ ರಕ್ತವೇ ಇದಕ್ಕೆ ಮದ್ದು!ಕಡೆಗೂ ಕೊರೊನಾಗೆ ಗುದ್ದು: ರೋಗ ಗೆದ್ದವರ ರಕ್ತವೇ ಇದಕ್ಕೆ ಮದ್ದು!

ಚೀನಾಗಿಂತ ಘನಘೋರ ಸ್ಥಿತಿ ತಲುಪಿರುವ ಇಟಲಿ ಈಗ ಅಸಹಾಯಕವಾಗಿದೆ. ಇದೀಗ, ಇಟಲಿ ದೇಶಕ್ಕಿಂತ ಹೀನಾಯ ಸ್ಥಿತಿಗೆ ಸ್ಪೇನ್ ದೇಶ ಬರಲಿದೆ ಎಂಬುದು ಅಲ್ಲಿನ ಅಂಕಿ-ಅಂಶಗಳು ಹೇಳುತ್ತಿದೆ.

24 ಗಂಟೆಯಲ್ಲಿ 812 ಸಾವು

24 ಗಂಟೆಯಲ್ಲಿ 812 ಸಾವು

ಸ್ಪೇನ್ ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಕೊರೊನಾ ಸೋಂಕಿನಿಂದ ಸುಮಾರು 812 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ ಮೂಲಕ ಸ್ಪೇನ್ ದೇಶದಲ್ಲಿ ಒಟ್ಟು ಸಾವು 7,340ಕ್ಕೆ ಏರಿದೆ. ಈ ಮೂಲಕ ಅತಿ ಹೆಚ್ಚು ಸಾವನ್ನಪ್ಪಿರುವ ದೇಶಗಳ ಪೈಕಿ ಜಗತ್ತಿನಲ್ಲಿ ಸ್ಪೇನ್ ಎರಡನೇ ಸ್ಥಾನಕ್ಕೆ ಬಂದಿದೆ.

ಸ್ಪೇನ್‌ನಲ್ಲಿ ಸೋಂಕಿತರು ಎಷ್ಟಿದ್ದಾರೆ

ಸ್ಪೇನ್‌ನಲ್ಲಿ ಸೋಂಕಿತರು ಎಷ್ಟಿದ್ದಾರೆ

ಸ್ಪೇನ್‌ ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರು 85,195ಕ್ಕೆ ಏರಿದೆ. ಯುಎಸ್‌, ಇಟಲಿ ಬಿಟ್ಟರೇ ಸ್ಪೇನ್ ದೇಶದಲ್ಲೇ ಅತಿ ಹೆಚ್ಚು ಸೋಂಕಿತರು ದಾಖಲಾಗಿದ್ದಾರೆ. ಯುಎಸ್‌ ದೇಶದಲ್ಲಿ 142,746, ಇಟಲಿಯಲ್ಲಿ 97,689, ಚೀನಾದಲ್ಲಿ 81,470 ಸೋಂಕಿತರು ವರದಿಯಾಗಿದ್ದಾರೆ.

ಕೊರಾನಾ: ಮುಂದಿನ 5 ದಿನ ಎಚ್ಚರ, ಬಾಲ ಜ್ಯೋತಿಷಿಯ ಬೆಚ್ಚಿಬೀಳುವ ಭವಿಷ್ಯಕೊರಾನಾ: ಮುಂದಿನ 5 ದಿನ ಎಚ್ಚರ, ಬಾಲ ಜ್ಯೋತಿಷಿಯ ಬೆಚ್ಚಿಬೀಳುವ ಭವಿಷ್ಯ

ಇಟಲಿಗಿಂತ ಘೋರ ಸ್ಥಿತಿ ತಲುಪಬಹುದು!

ಇಟಲಿಗಿಂತ ಘೋರ ಸ್ಥಿತಿ ತಲುಪಬಹುದು!

ಇಟಲಿ ದೇಶಕ್ಕೆ ಹೋಲಿಸಿಕೊಂಡರೆ ಸ್ಪೇನ್ ದೇಶದಲ್ಲಿ ಹೆಚ್ಚು ಕಡಿಮೆ ಅದೇ ಸ್ಥಿತಿ ಇದೆ. ಆದರೆ, ಮುಂದಿನ ದಿನದಲ್ಲಿ ಸ್ಪೇನ್‌ನಲ್ಲಿ ಈ ಸೋಂಕು ಇನ್ನು ಹೆಚ್ಚಾಗುವ ಸಾಧ್ಯತೆ ಇದೆ. ಅದೇ ರೀತಿ ಸಾವಿನ ಸಂಖ್ಯೆಯೂ ಏರಬಹುದು. ಸ್ಪೇನ್‌ ದೇಶದಲ್ಲಿ ಇನ್ನು 5,231 ಜನರ ಸ್ಥಿತಿ ಚಿಂತಾಜನಕವಾಗಿದೆ. ಹೆಚ್ಚು ಕಡಿಮೆ ಎರಡು ದೇಶಗಳಲ್ಲಿಯೂ ಒಂದೇ ಸಮಯದಲ್ಲಿ ಸೋಂಕು ಪತ್ತೆಯಾಗಿತ್ತು.

ಸ್ಪೇನ್‌ನಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದೆ

ಸ್ಪೇನ್‌ನಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದೆ

ಸ್ಪೇನ್‌ನಲ್ಲಿ ಕೊರೊನಾ ಹರಡುತ್ತಿರುವ ವೇಗಕ್ಕೆ ಕಂಗಲಾದ ಸರ್ಕಾರ ಇಡೀ ದೇಶವನ್ನು ಲಾಕ್‌ಡೌನ್‌ ಮಾಡಿದೆ. ಆದರೂ, ಸೋಂಕು ಹರಡುವಿಕೆ ಕಮ್ಮಿಯಾಗಿಲ್ಲ. ಎಲ್ಲ ರೀತಿಯ ಮುಂಜಾಗ್ರತೆ ಕ್ರಮಕೈಗೊಂಡರೆ ಕೈಮೀರಿ ಹೋಗಿದೆ ಎಂಬ ಸ್ಥಿತಿ ನಿರ್ಮಾಣವಾಗಿದೆ.

ಕೊರೊನಾ ಸೋಂಕಿತನಿಗೆ ಚಿಕಿತ್ಸೆ ನೀಡಿದ ವೈದ್ಯ ಬಿಚ್ಚಿಟ್ಟ ಆಘಾತಕಾರಿ ವಿಷ್ಯ!ಕೊರೊನಾ ಸೋಂಕಿತನಿಗೆ ಚಿಕಿತ್ಸೆ ನೀಡಿದ ವೈದ್ಯ ಬಿಚ್ಚಿಟ್ಟ ಆಘಾತಕಾರಿ ವಿಷ್ಯ!

ಜಗತ್ತಿನ ಅಂಕಿ-ಅಂಶ

ಜಗತ್ತಿನ ಅಂಕಿ-ಅಂಶ

ಇದುವರೆಗೂ ಜಗತ್ತಿನಲ್ಲಿ ಒಟ್ಟು 735,000 ಜನರಲ್ಲಿ ಕೊರೊನಾ ದೃಢವಾಗಿದೆ. ಅದರಲ್ಲಿ 34,781 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. 155,965 ಜನರು ಈ ಸೋಂಕಿನಿಂದ ಚೇತರಿಕೆ ಕಂಡಿದ್ದಾರೆ. ಭಾರತದಲ್ಲಿ 1199 ಸೋಂಕಿತರು ದೃಢವಾಗಿದ್ದು, 29 ಸಾವು ವರದಿಯಾಗಿದೆ.

English summary
Spain Country announces 812 coronavirus death in last 24 hours. total death reached to 7340.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X