ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಗನಯಾತ್ರಿ ಸಹಿತ ರಾಕೆಟ್ ಹಾರಾಟಕ್ಕೆ ಸಮಯ ನಿಗದಿಗೊಳಿಸಿದ ನಾಸಾ

|
Google Oneindia Kannada News

ವಾಶಿಂಗ್ಟನ್, ಮೇ.28: ಐತಿಹಾಸಿಕ ದಾಖಲೆ ನಿರ್ಮಿಸುವ ಹೊಸ್ತಿಲಲ್ಲಿ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಇಬ್ಬರು ಗಗನಯಾತ್ರಿಗಳುಳ್ಳ ಸ್ಪೇಸ್ ಎಕ್ಸ್ ರಾಕೆಟ್ ನ್ನು ವಾಪಸ್ ಕರೆಸಿಕೊಂಡಿದ್ದಾರೆ. ನಿರ್ದಿಷ್ಟ ಗುರಿ ತಲುಪುವುದಕ್ಕೆ ಇನ್ನೇನು 17 ನಿಮಿಷಗಳು ಬಾಕಿ ಇರುವಂತೆ ನಾಸಾ ವಿಜ್ಞಾನಿಗಳಿಗೆ ಅಪಾಯದ ಮುನ್ಸೂಚನೆ ಸಿಕ್ಕಿದೆ.

Recommended Video

ಮಿಡತೆಗಳ ದಾಳಿ ಎದುರಿಸಲು ನಾವು ರೆಡಿ,ರೈತರು ಭಯ ಪಡಬೇಕಿಲ್ಲ | Oneindia Kannada

ಡೇಂಜರ್ ಲೈಟ್ ಆನ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ನಾಸಾ ವಿಜ್ಞಾನಿಗಳು ಸ್ಪೇಸ್ ಎಕ್ಸ್ ರಾಕೆಟ್ ನ್ನು ವಾಪಸ್ ಕರೆಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಮತ್ತೊಮ್ಮೆ ಗಗನಯಾತ್ರಿಗಳ ಸಹಿತ ರಾಕೆಟ್ ಉಡಾವಣೆಗೂ ಸಮಯವನ್ನು ನಿಗದಿಗೊಳಿಸಲಾಗಿದೆ.

ಮನುಷ್ಯನ ಮೂತ್ರ ಚಂದ್ರನಲ್ಲಿ ಕಾಂಕ್ರೀಟ್ ತಯಾರಿಗೆ ಸಹಕಾರಿ: ಯುರೋಪ್ ಬಾಹ್ಯಾಕಾಶ ಸಂಸ್ಥೆ ಮನುಷ್ಯನ ಮೂತ್ರ ಚಂದ್ರನಲ್ಲಿ ಕಾಂಕ್ರೀಟ್ ತಯಾರಿಗೆ ಸಹಕಾರಿ: ಯುರೋಪ್ ಬಾಹ್ಯಾಕಾಶ ಸಂಸ್ಥೆ

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ವಾಣಿಜ್ಯ ಬಾಹ್ಯಾಕಾಶ ಹಾರಾಟದಲ್ಲಿ ನಾಸಾ ಹೊಸ ಯುಗಕ್ಕೆ ನಾಂದಿ ಹಾಡಿದೆ. ಬುಧವಾರ ಪ್ರತೀಕೂಲ ವಾತಾವರಣದಿಂದಾಗಿ ನಿರ್ದಿಷ್ಟ ಗುರಿ ತಲುಪಿಸಲು ಸಾಧ್ಯವಾಗದ ಕಾರಣದಿಂದ ಮೇ.30ರ ಶನಿವಾರ ಮಧ್ಯಾಹ್ನ 3 ಗಂಟೆ 22 ನಿಮಿಷ 45 ಸೆಕೆಂಡ್ ಗೆ ಮತ್ತೊಮ್ಮೆ ರಾಕೆಟ್ ಉಡಾವಣೆಗೆ ಸಮಯವನ್ನು ನಿಗದಿಗೊಳಿಸಿದೆ.

SpaceX Crew Dragon to launch on Saturday Due to Stormy weather


ರಷ್ಯಾ ರಾಕೆಟ್ ಗಳ ಬಳಸುತ್ತಿರುವ ನಾಸಾ:

ಕಳೆದ 2011ರಲ್ಲಿ ಬಾಹ್ಯಾಕಾಶ ನೌಕೆಯ ನಿವೃತ್ತಿ ಆದಾಗಿನಿಂದಲೂ ಬಾಹ್ಯಾಕಾಶ ನಿಲ್ದಾಣಕ್ಕೆ ಗಗನಯಾತ್ರಿಗಳನ್ನು ರವಾನಿಸಲು ಅಮೆರಿಕಾ ಬಾಹ್ಯಾಕಾಶ ಸಂಸ್ಥೆ ನಾಸಾ, ರಷ್ಯಾದ ರಾಕೆಟ್‌ಗಳನ್ನು ಬಳಸಿಕೊಳ್ಳುತ್ತಿದೆ. ಬುಧವಾರ ಮೊದಲ ಬಾರಿಗೆ ಇಬ್ಬರು ಗಗನಯಾತ್ರಿಗಳನ್ನು ಹೊಂದಿರುವ ರಾಕೆಟ್ ನ್ನು ನಾಸಾ ಮತ್ತು ಸ್ಪೇಸ್ ಎಕ್ಸ್ ಬಾಹ್ಯಾಕಾಶಕ್ಕೆ ಹಾರಿತ್ತು. ನಾಸಾ ವಿಜ್ಞಾನಿಗಳ ಪರಿಶ್ರಮಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಧನ್ಯವಾದ ತಿಳಿಸಿದ್ದು, ಶನಿವಾರ ನಡೆಸುವ ನಿಮ್ಮ ಪ್ರಯತ್ನಕ್ಕೆ ಫಲಿಸಲಿ ಎಂದು ಟ್ವೀಟ್ ಮಾಡಿದ್ದಾರೆ.

English summary
SpaceX Crew Dragon to launch on Saturday Due to Stormy weather. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X