• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಶಸ್ವಿಯಾಗಿ ಭೂಮಿಗೆ ತಲುಪಿದ ಸ್ಪೇಸ್‌ ಎಕ್ಸ್‌ ನೌಕೆ

|

ವಾಷಿಂಗ್ಟನ್, ಆಗಸ್ಟ್‌ 03: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಯತ್ತ ಹೊರಟಿದ್ದ ಸ್ಪೇಸ್ ಎಕ್ಸ್ ಮತ್ತು ನಾಸಾ ಸಂಯೋಜನೆಯ ಕ್ರೀವ್ ಡ್ರ್ಯಾಗನ್ ಕ್ಯಾಪ್ಸೂಲ್ ಯಶಸ್ವಿಯಾಗಿ ಸಮುದ್ರದಲ್ಲಿ ಲ್ಯಾಂಡಿಂಗ್ ಆಗಿದೆ.

   SpaceX and NASA completes space mission successfully | Oneindia Kannada

   ಫಾಲ್ಕನ್-9 ನೌಕೆ ಹೊತ್ತು ಸಾಗಿದ್ದ 'ಕ್ರೀವ್ ಡ್ರ್ಯಾಗನ್ ಕ್ಯಾಪ್ಸೂಲ್' ಮೇ 30ರಂದು ಅಂತಾರಾಷ್ಟ್ರೀಯ ಬಾಹ್ಯಾಕಾರ ನಿಲ್ದಾಣಕ್ಕೆ ಯಶಸ್ವಿಯಾಗಿ ಲಾಂಚ್ ಆಗಿತ್ತು. ಭೂಮಿಯತ್ತ ಹೊರಟಿದ್ದ ಅಮೆರಿಕಾದ ಮೊದಲ ಸಿಬ್ಬಂದಿ ಆಕಾಶನೌಕೆ ಭಾನುವಾರ ಸುರಕ್ಷಿತವಾಗಿ ಭೂಮಿಗೆ ಮರಳಿತು, ಗಲ್ಫ್ ಆಫ್ ಮೆಕ್ಸಿಕೊದ ಸಮುದ್ರದಲ್ಲಿ ಪ್ಯಾರಚೂಟ್ ಮೂಲಕ ಕೆಳಗೆ ಬಿದ್ದಿತು.

   ಭೂಮಿಗೆ ಬರುತ್ತಿದೆ ಸ್ಪೇಸ್ ಎಕ್ಸ್ ನೌಕೆ..!

   Tweet:

   ಈ ಯೋಜನೆಯು ಸ್ಪೇಸ್‌ಎಕ್ಸ್ ಮತ್ತು ನಾಸಾ ಜಂಟಿಯಾಗಿ ನಡೆಸಿದ ಯಶಸ್ವಿ ಮಿಷನ್ ಆಗಿದ್ದು, ಅಮೆರಿಕಾ ತನ್ನ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಮತ್ತು ಅವರನ್ನು ಮರಳಿ ಕರೆತರುವ ಸಾಮರ್ಥ್ಯವನ್ನು ಮತ್ತೊಮ್ಮೆ ಹೊಂದಿದೆ ಎಂಬುದನ್ನು ತೋರಿಸಿಕೊಟ್ಟಿತು.

   ಸ್ಪೇಸ್‌ಎಕ್ಸ್ ಕ್ರೂ ಡ್ರ್ಯಾಗನ್ ಎಂಡೀವರ್ ಫ್ಲೋರಿಡಾದ ಪೆನ್ಸಕೋಲಾಕ್ಕೆ ಮಧ್ಯಾಹ್ನ 2:48 ಕ್ಕೆ (1848 ಜಿಎಂಟಿ) ನೀರಿನಲ್ಲಿ ಚಿಮ್ಮಿತು. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಒಂದೇ ರಾಕೆಟ್‌ನಲ್ಲಿ ಹೊರಟಿದ್ದ ಗಗನಯಾತ್ರಿಗಳು, ಭೂಕಕ್ಷೆ ಪ್ರವೇಶಿಸುತ್ತಿದ್ದಂತೆ ಕ್ಯಾಪ್ಸೂಲ್‌ ಅನ್ನು ಮುಖ್ಯ ರಾಕೆಟ್‌ನಿಂದ ಬೇರ್ಪಡಿಸಿತು. ನಂತರ ಕ್ಯಾಪ್ಸೂಲ್‌ ಇಂಜಿನ್‌ ಉರಿಸಿ ಸಮುದ್ರ ತೀರಕ್ಕೆ ಸೇರಿತು.

   ಇದು 1975 ರ ಅಪೊಲೊ-ಸೋಯುಜ್ ಕಾರ್ಯಾಚರಣೆಯ ನಂತರ ಯುಎಸ್ ಬಾಹ್ಯಾಕಾಶ ನೌಕೆಗೆ ಮೊದಲ ಬಾರಿಗೆ ನೀರಿಗೆ ಇಳಿಯಿತು. ಈ ನೌಕೆಯಲ್ಲಿ ನಾಸಾ ಸಂಸ್ಥೆಗೆ ಸೇರಿದ ಇಬ್ಬರು ಗಗನಯಾನಿಗಳು ಇದ್ದರು. ರಾಬರ್ಟ್ ಬೆಹ್ನ್ಕೆನ್ ಮತ್ತು ಡೌಗ್ಲಾಸ್ ಹರ್ಲಿ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ.

   English summary
   The successful mission, carried out jointly by SpaceX and NASA splashed down, marking the first splashdown of an American crew spacecraft in 45 years
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X