ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ವಾಧಿಕಾರಿ ಕಿಮ್‌ ಬಗ್ಗೆ ದಕ್ಷಿಣ ಕೊರಿಯಾಕ್ಕೆ ಗೊತ್ತಿದೆಯಂತೆ!

|
Google Oneindia Kannada News

ಸಿಯೋಲ್, ಏಪ್ರಿಲ್ 28: ಜಗತ್ತಿನಲ್ಲಿ ಕೊರೊನಾ ನಂತರ, ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್ ಉನ್ ಬುದುಕಿದ್ದಾರೆಯೇ ಅಥವಾ ಸತ್ತಿದ್ದಾರೆಯೇ ಎಂಬ ಸುದ್ದಿಯೇ ದೊಡ್ಡದಾಗಿ ಗೋಚರಿಸುತ್ತಿದೆ.

Recommended Video

ಕಿಮ್ಸ್ ಆಸ್ಪತ್ರೆಯಲ್ಲಿ ನಿಲ್ಲದ ವೈದ್ಯರ ಪ್ರತಿಭಟನೆ | ರೋಗಿಗಳ ಗೋಳು ಹೇಳತೀರದು | Oneindia Kannada

ಈ ಸುದ್ದಿಗಳ ನಡುವೆಯೇ, ಉತ್ತರ ಕೊರಿಯಾದ ಅಧ್ಯಕ್ಷ ಕಿಮ್‌ ಜಾಂಗ್ ಉನ್ ಆರೋಗ್ಯ ಕುರಿತ ವದಂತಿ ಸತ್ಯಕ್ಕೆ ದೂರವಾದುದು ಎಂದು ದಕ್ಷಿಣ ಕೊರಿಯಾ ಹೇಳಿದೆ.

ಉತ್ತರ ಕೊರಿಯಾ: ಕಿಮ್ ಜಾಂಗ್ ಉನ್ ಉತ್ತರಾಧಿಕಾರಿ ಯಾರಾಗಬಹುದು?ಉತ್ತರ ಕೊರಿಯಾ: ಕಿಮ್ ಜಾಂಗ್ ಉನ್ ಉತ್ತರಾಧಿಕಾರಿ ಯಾರಾಗಬಹುದು?

ಈ ಬಗ್ಗೆ ಸ್ಪಷ್ಟನೆ ನೀಡಿರುವ ದಕ್ಷಿಣ ಕೊರಿಯಾದ ಸಚಿವ ಕಿಮ್ ಯೋನ್‌ ಚುಲ್, 'ಯಾವುದೇ ಅನಿರೀಕ್ಷಿತ ಬೆಳವಣಿಗೆಗಳು ಉತ್ತರ ಕೊರಿಯಾದಲ್ಲಿ ಘಟಿಸಿಲ್ಲ ಎಂಬುದಕ್ಕೆ ನಮ್ಮ ಬಳಿ ಸಾಕ್ಷ್ಯ ಗಳಿವೆ' ಎಂದು ವದಂತಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ದಕ್ಷಿಣ ಕೊರಿಯಾದ ಇಬ್ಬಗೆಯ ನೀತಿ

ದಕ್ಷಿಣ ಕೊರಿಯಾದ ಇಬ್ಬಗೆಯ ನೀತಿ

ಕಿಮ್‌ ಜಾಂಗ್ ಉನ್ ಆರೋಗ್ಯ ಕುರಿತ ವದಂತಿ ಸತ್ಯಕ್ಕೆ ದೂರವಾದದ್ದು ಎನ್ನುವ ದಕ್ಷಿಣ ಕೊರಿಯಾ ಈ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಬ್ಬಗೆಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಕಿಮ್ ಬದುಕಿದ್ದಾರೆ ಎಂಬ ಅವರ ವಾದಕ್ಕೆ ಪುಷ್ಠಿ ನೀಡುವ ಸಾಕ್ಷ್ಯಗಳ ಮೂಲಗಳನ್ನು ಬಹಿರಂಗಪಡಿಸಲು ದಕ್ಷಿಣ ಕೊರಿಯಾ ಸಚಿವರು ನಿರಾಕರಿಸಿದ್ದಾರೆ.

ಕಿಮ್ ಎಲ್ಲಿದ್ದಾರೆ ಎಂಬ ಸುಳಿವು ಸಿಗುತ್ತಿಲ್ಲ

ಕಿಮ್ ಎಲ್ಲಿದ್ದಾರೆ ಎಂಬ ಸುಳಿವು ಸಿಗುತ್ತಿಲ್ಲ

ಕಿಮ್ ಜಾಂಗ್ ಉನ್‌ ಬಗ್ಗೆ ಜಾಗತಿಕವಾಗಿ ತೀವ್ರ ಚರ್ಚೆ ನಡೆದಿದೆ. ಹಲವು ಅಂತಾರಾಷ್ಟ್ರೀಯ ಮಾಧ್ಯಮಗಳು ಕಿಮ್ ಬದುಕಿರುವ ಸಾದ್ಯತೆ ಇಲ್ಲ ಎಂಬ ಬಲವಾದ ಅನುಮಾನ ವ್ಯಕ್ತಪಡಿಸಿವೆ. ದಕ್ಷಿಣ ಕೊರಿಯಾದ ಈ ಸ್ಪಷ್ಟನೆ ಹೊರತಾಗಿಯೂ ಕಿಮ್ ಎಲ್ಲಿದ್ದಾರೆ ಎಂಬ ಒಂದು ಸಣ್ಣ ಸುಳಿವು ಕೂಡ ಉತ್ತರ ಕೊರಿಯಾದಿಂದ ಹೊರ ಬಿಳ್ಳುತ್ತಿಲ್ಲ.

ಕಿಮ್ ಐ ಸಂಗ್‌ ಜನ್ಮದಿನದಿಂದ ಕಾಣಿಸಿಕೊಳ್ಳುತ್ತಿಲ್ಲ

ಕಿಮ್ ಐ ಸಂಗ್‌ ಜನ್ಮದಿನದಿಂದ ಕಾಣಿಸಿಕೊಳ್ಳುತ್ತಿಲ್ಲ

ಏಪ್ರಿಲ್ 15ರಂದು ನಡೆದ ಉತ್ತರ ಕೊರಿಯಾದ ಸ್ಥಾಪಕ ಕಿಮ್ ಐ ಸಂಗ್‌ ಅವರ 108 ನೇ ಜನ್ಮದಿನ ಕಾರ್ಯಕ್ರಮದಲ್ಲಿ ಕಿಮ್‌ ಜಾಂಗ್ ಉನ್ ಭಾಗವಹಿಸದ ಹಿನ್ನೆಲೆಯಲ್ಲಿ ಅವರ ಆರೋಗ್ಯ ಕುರಿತು ಜಾಗತಿಕ ಮಟ್ಟದಲ್ಲಿ ವದಂತಿಗಳು ಮೂಡಿವೆ.

ಬ್ರೇನ್ ಡೆಡ್ ಆಗಿದೆ ಎಂಬ ಮಾತುಗಳು

ಬ್ರೇನ್ ಡೆಡ್ ಆಗಿದೆ ಎಂಬ ಮಾತುಗಳು

ಈ ನಡುವೆ ಶಸ್ತ್ರಚಿಕಿತ್ಸೆ ಬಳಿಕ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಬ್ರೇನ್ ಡೆಡ್ ಆಗಿದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಇಷ್ಟೆಲ್ಲಾ ಇದ್ದರೂ, ಉತ್ತರ ಕೊರಿಯಾದ ಮಾಧ್ಯಮಗಳು ಮಾತ್ರ ಈ ಬಗ್ಗೆ ತುಟಿಕ್ ಪಿಟಿಕ್ ಎನ್ನುತ್ತಿಲ್ಲ. ತಮ್ಮ ನಾಯಕ ಕಿಮ್ ಜಾಂಗ್ ಉನ್ ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡುವ ಕೆಲಸವನ್ನೂ ಮಾಡುತ್ತಿಲ್ಲ ಎಂದು ಆರೋಪಿಸಲಾಗಿದೆ.

English summary
South Korea Says North Korea President Kim Jong Un Is Not Dead. but no evidence from South Korea. reports says.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X