ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕು ಹೆಚ್ಚಳ: ದಕ್ಷಿಣ ಕೊರಿಯಾದಲ್ಲಿ ಮತ್ತೆ ಶಾಲೆಗಳಿಗೆ ರಜೆ

|
Google Oneindia Kannada News

ದಕ್ಷಿಣ ಕೊರಿಯಾದಲ್ಲಿ ಕೊರೊನಾ ಸೋಂಕು ಹಿಡಿತಕ್ಕೆ ಬಂದು ಶಾಲಾ, ಕಾಲೇಜುಗಳು ಆರಂಭವಾಗಿದ್ದವು, ಈಗ ಮತ್ತೆ ಸೋಂಕು ಶುರುವಾಗಿದ್ದು ನಿತ್ಯ 100 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದೆ.

Recommended Video

Pakistanಕ್ಕೆ ಎಲ್ಲಾ ವಿಚಾರದಲ್ಲೂ ಸಾಥ್ ನೀಡಲು ಮುಂದಾದ China | Oneindia Kannada

ಹೀಗಾಗಿ ಮತ್ತೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ, ಕಳೆದ 12 ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.

ಸಿಯೋಲ್‌ನಲ್ಲಿ ಕೊರೊನಾ ಸೋಂಕು ಹೆಚ್ಚಳ: ದಕ್ಷಿಣ ಕೊರಿಯಾಗೆ ಆತಂಕ ಸಿಯೋಲ್‌ನಲ್ಲಿ ಕೊರೊನಾ ಸೋಂಕು ಹೆಚ್ಚಳ: ದಕ್ಷಿಣ ಕೊರಿಯಾಗೆ ಆತಂಕ

ಈ ಕುರಿತು ಶಿಕ್ಷಣ ಸಚಿವ ಯೋ ಮಾತನಾಡಿದ್ದು, 193ಕ್ಕೂ ಹೆಚ್ಚು ಶಿಕ್ಷಕರು ಮಕ್ಕಳು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಕಳೆದ ಎರಡು ವಾರಗಳಿಂದ ಸಿಯೋಲ್‌ನಲ್ಲಿ ಸೋಂಕು ಹೆಚ್ಚಾಗಿದೆ.

South Korea Closes Schools Again Amid Spike In Coronavirus Cases

ಕಿಂಡರ್‌ಗಾರ್ಡನ್, ಎಲಿಮೆಂಟರಿ, ಮಧ್ಯಮ,ಹೈಸ್ಕೂಲ್ ಮಕ್ಕಳು ಸೆಪ್ಟೆಂಬರ್‌ವರೆಗೆ ಆನ್‌ಲೈನ್‌ನಲ್ಲಿ ಶಿಕ್ಷಣ ಪಡೆಯಲಿದ್ದಾರೆ ಎಂದು ಯೋ ತಿಳಿಸಿದ್ದಾರೆ. ಹೊಸದಾಗಿ 280 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಕಳೆದ 12 ದಿನಗಳಿಂದ 3,175 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ.

ಇನ್ನು ಬೀಜಿಂಗ್‌ ಯೂನಿವರ್ಸಿಟಿಗೆ ಬಂದ ವಿದ್ಯಾರ್ಥಿಗಳಿಗೆ ಕೊರೊನಾ ಪರೀಕ್ಷೆ ಕಡ್ಡಾಯವಾಗಿದೆ. ಒಟ್ಟು 600,000 ಮಂದಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ವಿಶ್ವವಿದ್ಯಾಲಯಗಳು ಸೆಪ್ಟೆಂಬರ್‌ 9 ರಿಂದ ಆರಂಭಗೊಳ್ಳಲಿವೆ.

ಸಿಯೋಲ್‌ನಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗಲು ಚರ್ಚ್‌ಗಳು ಮುಖ್ಯ ಕಾರಣ, ನೈಟ್‌ ಕ್ಲಬ್, ಕರಾವೋಕ್ ಬಾರ್ಸ್, ಬಫೆಟ್ ರೆಸ್ಟೋರೆಂಟ್‌ಗಳು, ಕಂಪ್ಯೂಟರ್‌ ಗೇಮಿಂಗ್ ಕೆಫೆಗಳನ್ನು ಮತ್ತೆ ಬಂದ್ ಮಾಡಲಾಗಿದೆ.

ಜಿಯಾಂಗ್‌ನಲ್ಲಿ ಪ್ರತಿನಿತ್ಯ 50 ಸಾವಿರ ಪರೀಕ್ಷೆಗಳನ್ನು ಮಾಡಿಸಲಾಗುತ್ತಿದೆ. ಈ ಮೊದಲು ದಿನಕ್ಕೆ 20 ಸಾವಿರ ಟೆಸ್ಟ್‌ಗಳನ್ನು ಮಾತ್ರ ಮಾಡಲಾಗುತ್ತಿತ್ತು.

English summary
South Korea is closing schools and switching back to remote learning in the greater capital area as the country reported triple-digit daily increase in coronavirus cases for the 12th straight day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X