ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಕಕಾಲದಲ್ಲಿ 10 ಮಕ್ಕಳಿಗೆ ಜನ್ಮ ನೀಡಿ ದಾಖಲೆ ಬರೆದ ಮಹಿಳೆ

|
Google Oneindia Kannada News

ದ. ಆಫ್ರಿಕಾ, ಜೂನ್ 9: ದಕ್ಷಿಣ ಆಫ್ರಿಕಾದ ಮಹಿಳೆಯೊಬ್ಬರು ಏಕಕಾಲದಲ್ಲಿ ಹತ್ತು ಮಕ್ಕಳಿಗೆ ಜನ್ಮ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಅಷ್ಟೇ ಅಲ್ಲ, ಹಳೆಯ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.

ದಕ್ಷಿಣ ಆಫ್ರಿಕಾದ ಗೌಟೆಂಗ್ ನಿವಾಸಿ ಗೋಸಿಯಾಮ್ ತಾಮರಾ ಸಿತೋಲ್ ಎಂಬ 37 ವರ್ಷದ ಮಹಿಳೆ ಸೋಮವಾರ ಹತ್ತು ಮಕ್ಕಳಿಗೆ ಜನ್ಮ ನೀಡಿರುವುದಾಗಿ ವರದಿಯಾಗಿದೆ. ಎಲ್ಲಾ ಮಕ್ಕಳು ಹಾಗೂ ತಾಯಿ ಆರೋಗ್ಯವಾಗಿರುವುದಾಗಿ ತಿಳಿದುಬಂದಿದೆ.

ಅವಳಿ ಮಕ್ಕಳಿಗೆ 'ಕೊರೊನಾ', 'ಕೋವಿಡ್' ಎಂದು ಹೆಸರಿಟ್ಟ ತಂದೆ ತಾಯಿಅವಳಿ ಮಕ್ಕಳಿಗೆ 'ಕೊರೊನಾ', 'ಕೋವಿಡ್' ಎಂದು ಹೆಸರಿಟ್ಟ ತಂದೆ ತಾಯಿ

ತಮಗೆ ಎಂಟು ಮಕ್ಕಳಾಗುತ್ತವೆ ಎಂದು ತಿಳಿದುಕೊಂಡಿದ್ದೆವು. ಆದರೆ ಸೋಮವಾರ ಹತ್ತು ಮಕ್ಕಳಿಗೆ ಗೋಸಿಯಾಮ್ ಜನ್ಮ ನೀಡಿದ್ದಾರೆ. ಏಳು ಗಂಡು ಮಕ್ಕಳು ಹಾಗೂ ಮೂರು ಹೆಣ್ಣು ಮಕ್ಕಳು ಜನಿಸಿವೆ. ಗೋಸಿಯಾಮ್‌ಗೆ ಏಳು ತಿಂಗಳು, ಏಳು ದಿನಗಳಾಗಿದ್ದವು ಎಂದು ಮಹಿಳೆ ಪತಿ ಟೆಬೊಹೊ ಟ್ವಿಟ್ಟರ್‌ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.

South African Woman Gives Birth To 10 Children

ಗೋಸಿಯಾಮ್ ಅವರಿಗೆ ಈ ಮುನ್ನವೇ ಅವಳಿ ಮಕ್ಕಳಿದ್ದು, ಆ ಮಕ್ಕಳಿಗೆ 6 ವರ್ಷ. ಇದೀಗ ಹತ್ತು ಮಕ್ಕಳು ಜನಿಸಿದ್ದು, ಒಟ್ಟು 12 ಮಕ್ಕಳ ತಾಯಿಯಾಗಿದ್ದಾರೆ ಗೋಸಿಯಾಮ್.

"ನಾವು ಅವಳಿ ಅಥವಾ ತ್ರಿವಳಿ ಮಕ್ಕಳಾಗಬಹುದು ಎಂದುಕೊಂಡಿದ್ದೆವು. ಆದರೆ ವೈದ್ಯರು ಇಷ್ಟು ಮಕ್ಕಳು ಎಂದು ಹೇಳಿದಾಗ ಆಶ್ಚರ್ಯವಾಯಿತು. ಯಾವುದೇ ತೊಂದರೆಯಿಲ್ಲದೇ ಮಕ್ಕಳು ಜನಿಸಿದವು. ಮಕ್ಕಳು ಆರೋಗ್ಯಕರವಾಗಿವೆ" ಎಂದು ತಿಳಿಸಿದ್ದಾರೆ.

ಮೊರೊಕ್ಕಾದ ಮಲಿಯಾನ್ ಹಲೀಮಾ ಎಂಬ ಮಹಿಳೆ ಒಂಬತ್ತು ಮಕ್ಕಳಿಗೆ ಜನ್ಮ ನೀಡಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಆ ದಾಖಲೆಯನ್ನು ಗೋಸಿಯಾಮ್ ಮುರಿದಿದ್ದಾರೆ.

English summary
A South African woman gave birth to 10 babies. She broke the Guinness Book of World Record that was held by Malian Halima Cissee, who gave birth to nine babies last month In Morocco,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X