ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಿಂದ ಪಡೆದ ಲಸಿಕೆಗಳನ್ನು ಬೇರೆ ದೇಶಗಳಿಗೆ ಮಾರಲು ಮುಂದಾದ ದಕ್ಷಿಣ ಆಫ್ರಿಕಾ

|
Google Oneindia Kannada News

ಜೊಹಾನ್ಸ್‌ಬರ್ಗ್, ಫೆಬ್ರವರಿ 19: ಭಾರತದಿಂದ ಖರೀದಿಸಿದ್ದ ಕೋವಿಶೀಲ್ಡ್ ಲಸಿಕೆಯ ಒಂದು ಮಿಲಿಯನ್ ಡೋಸ್‌ಗಳನ್ನು ದಕ್ಷಿಣ ಆಫ್ರಿಕಾ ಆಫ್ರಿಕನ್ ಒಕ್ಕೂಟದಲ್ಲಿನ ತನ್ನ ಸಹೋದರಿ ದೇಶಗಳಿಗೆ ಮಾರಾಟ ಮಾಡಲಿದೆ ಎಂದು ಆರೋಗ್ಯ ಸಚಿವ ಜ್ವೇಲಿ ಮೈಜ್ ತಿಳಿಸಿದ್ದಾರೆ.

ದೇಶದ ಲಸಕೆ ಕಾರ್ಯಕ್ರಮಕ್ಕೆ ಉತ್ತೇಜನ ನೀಡುವ ಜಾನ್ಸನ್ ಆಂಡ್ ಜಾನ್ಸನ್‌ನ ಮೊದಲ ಲಸಿಕೆಗಳು ದಕ್ಷಿಣ ಆಫ್ರಿಕಾಕ್ಕೆ ತಲುಪಿವೆ. ಭಾರತದ ಸೆರಮ್ ಸಂಸ್ಥೆ ಕಳುಹಿಸಿದ್ದ ಲಸಿಕೆಗಳ ಬದಲು ದಕ್ಷಿಣ ಆಫ್ರಿಕಾದಲ್ಲಿ ಇನ್ನು ಜಾನ್ಸನ್ ಆಂಡ್ ಜಾನ್ಸನ್ ಲಸಿಕೆಗಳು ಬಳಕೆಯಾಗಲಿವೆ. ಕೋವಿಶೀಲ್ಡ್ ಲಸಿಕೆಗಳು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ರೂಪಾಂತರಿ ಮಾದರಿ ವೈರಸ್‌ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ ಎಂದು ದೃಢಪಟ್ಟ ಹಿನ್ನೆಲೆಯಲ್ಲಿ ಅದು ಭಾರತದ ಲಸಿಕೆ ಬಳಕೆಯನ್ನು ಕೈಬಿಟ್ಟಿದೆ.

1 ಮಿಲಿಯನ್ ಕೊರೊನಾ ಲಸಿಕೆಗಳನ್ನು ಹಿಂಪಡೆಯುವಂತೆ ಭಾರತಕ್ಕೆ ಕೇಳಿದ ದಕ್ಷಿಣ ಆಫ್ರಿಕಾ1 ಮಿಲಿಯನ್ ಕೊರೊನಾ ಲಸಿಕೆಗಳನ್ನು ಹಿಂಪಡೆಯುವಂತೆ ಭಾರತಕ್ಕೆ ಕೇಳಿದ ದಕ್ಷಿಣ ಆಫ್ರಿಕಾ

ಭಾರತದಿಂದ ಆಸ್ಟ್ರಾಜೆನಿಕಾ-ಆಕ್ಸ್‌ಫರ್ಡ್‌ನ ಲಸಿಕೆಗಳ ಒಂದು ಮಿಲಿಯನ್ ಡೋಸ್‌ಗಳನ್ನು ಕಳೆದ ತಿಂಗಳು ದಕ್ಷಿಣ ಆಫ್ರಿಕಾಕ್ಕೆ ಕಳುಹಿಸಲಾಗಿತ್ತು. ಅಲ್ಲಿ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ಇತರೆ ಆದ್ಯತೆಯ ಕಾರ್ಯಕರ್ತರಿಗೆ ಲಸಿಕೆ ನೀಡುತ್ತಿದ್ದು, ಅದಕ್ಕಾಗಿ ಈ ತಿಂಗಳು ಇನ್ನೂ ಐದು ಲಕ್ಷ ಲಸಿಕೆಗಳನ್ನು ಕಳುಹಿಸಬೇಕಿತ್ತು.

ಸೀಮಿತ ಪರಿಣಾಮ

ಸೀಮಿತ ಪರಿಣಾಮ

ಆದರೆ ಹೊಸ ಮಾದರಿ ವೈರಸ್ ವಿರುದ್ಧ ಈ ಲಸಿಕೆಯು ಸೀಮಿತ ಪ್ರಮಾಣದಲ್ಲಷ್ಟೇ ಪರಿಣಾಮಕಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಇದನ್ನು ವ್ಯಾಪಕವಾಗಿ ಬಳಸದೆ ಇರಲು ದಕ್ಷಿಣ ಆಫ್ರಿಕಾ ನಿರ್ಧರಿಸಿದೆ. ಅಸ್ಟ್ರಾಜೆನಿಕಾದ ಲಸಿಕೆ ಬಳಕೆಗೆ ಲಭ್ಯವಾಗುತ್ತಿದ್ದಂತೆಯೇ ಅದನ್ನು ಖರೀದಿಸಲು ದಕ್ಷಿಣ ಆಫ್ರಿಕಾ ದೌಡಾಯಿಸಿತ್ತು.

ಭಾರತ ಸರ್ಕಾರಕ್ಕೆ ಕೃತಜ್ಞ

ಭಾರತ ಸರ್ಕಾರಕ್ಕೆ ಕೃತಜ್ಞ

'ಈ ಲಸಿಕೆಗಳನ್ನು ಇಡೀ ಜಗತ್ತು ಒಪ್ಪಿಕೊಳ್ಳುತ್ತಿದೆ. ಹೀಗಾಗಿ ನಾವೂ ನಮ್ಮ ಕಡೆಯಿಂದ ಅದನ್ನು ಆದಷ್ಟು ಬೇಗ ಪಡೆದುಕೊಳ್ಳಲು ಮುಂದಾಗಿದ್ದೆವು. ವಾಸ್ತವವಾಗಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಬಹಳ ಉತ್ತಮ ಸಂಬಂಧ ಹೊಂದಿವೆ. ದೇಶವು ಈ ಸಂಕಷ್ಟದ ಸಮಯದಲ್ಲಿ ಇರುವುದನ್ನು ಕಂಡು ಭಾರತ ಸಾಕಷ್ಟು ನೆರವು ನೀಡಿದೆ. ಭಾರತ ಸರ್ಕಾರಕ್ಕೆ ನಾನು ಬಹಳ ಕೃತಜ್ಞನಾಗಿದ್ದೇನೆ' ಎಂದು ಜ್ವೇಲಿ ಮೈಜ್ ತಿಳಿಸಿದ್ದಾರೆ.

ರೂಪಾಂತರದ ಮೇಲೆ ಕೆಲಸ ಮಾಡದ ಆಸ್ಟ್ರಾಜೆನೆಕಾ; ಲಸಿಕೆ ನಿಲ್ಲಿಸಿದ ದಕ್ಷಿಣ ಆಫ್ರಿಕಾ ರೂಪಾಂತರದ ಮೇಲೆ ಕೆಲಸ ಮಾಡದ ಆಸ್ಟ್ರಾಜೆನೆಕಾ; ಲಸಿಕೆ ನಿಲ್ಲಿಸಿದ ದಕ್ಷಿಣ ಆಫ್ರಿಕಾ

ಅರ್ಧ ಬೆಲೆಗೆ ಮಾರುತ್ತಿಲ್ಲ

ಅರ್ಧ ಬೆಲೆಗೆ ಮಾರುತ್ತಿಲ್ಲ

ಭಾರತವು ಈಗಾಗಲೇ ಕಳುಹಿಸಿರುವ ಒಂದು ಮಿಲಿಯನ್ ಲಸಿಕೆ ಡೋಸ್‌ಗಳು ಏಪ್ರಿಲ್ ಅಂತ್ಯದವರೆಗೂ ಅವಧಿ ಹೊಂದಿವೆ. ಹೀಗಾಗಿ ಆಫ್ರಿಕನ್ ಒಕ್ಕೂಟದ ಇತರೆ ದೇಶಗಳಿಗೆ ಅವುಗಳನ್ನು ನೀಡಲಾಗುವುದು. ಭಾರತಕ್ಕೆ ಅವುಗಳನ್ನು ವಾಪಸ್ ಕಳುಹಿಸುವುದರ ಬದಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಲಸಿಕೆಗಳನ್ನು ದಾನ ಮಾಡಲಾಗುತ್ತದೆ ಅಥವಾ ಅರ್ಧ ಬೆಲೆಗೆ ಮಾರಲಾಗುತ್ತದೆ ಎನ್ನುವುದು ಸತ್ಯವಲ್ಲ ಎಂದಿದ್ದಾರೆ.

ನಮ್ಮ ಹಣ ವಾಪಸ್ ಬರಲಿದೆ

ನಮ್ಮ ಹಣ ವಾಪಸ್ ಬರಲಿದೆ

'ಸೆರಮ್ ಸಂಸ್ಥೆಯು ಖಾಸಗಿಯಾಗಿದ್ದರೂ ಸರ್ಕಾರದೊಂದಿಗೆ ಸಂಬಂಧ ಸಹಕಾರ ಹೊಂದಿದೆ. ಈ ಡೋಸ್‌ಗಳನ್ನು ತಯಾರಿಸುವಾಗ ಭಾರತ ಸರ್ಕಾರದ ಜತೆ ಸಾಕಷ್ಟು ಸಮಾಲೋಚನೆಗಳು ನಡೆದಿರುತ್ತವೆ ಎನ್ನುವುದು ನಮಗೆ ತಿಳಿದಿದೆ. ನಾವು ಈ ಲಸಿಕೆಗಳು ವ್ಯರ್ಥವಾದ ಕಾರಣ ನಾಶಪಡಿಸುವ ಬಗ್ಗೆ ಆಲೋಚನೆ ನಡೆಸುತ್ತಿದ್ದೆವು. ಆದರೆ 25ಕ್ಕೂ ಅಧಿಕ ದೇಶಗಳಿಗೆ ಈ ಡೋಸ್‌ಗಳು ಬೇಕಿವೆ. ದಕ್ಷಿಣ ಆಫ್ರಿಕಾ ಇದರಿಂದ ತನ್ನ ಹಣವನ್ನು ವಾಪಸ್ ಪಡೆದುಕೊಳ್ಳಬಹುದು' ಎಂದು ಹೇಳಿದ್ದಾರೆ.

English summary
South Africa said it will sell Covishield vaccines bought from India to African Union countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X