ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾನ್ಸನ್ ಅಂಡ್ ಜಾನ್ಸನ್ ಕೊರೊನಾ ಲಸಿಕೆ ಸ್ಥಗಿತಗೊಳಿಸಿದ ದಕ್ಷಿಣ ಆಫ್ರಿಕಾ

|
Google Oneindia Kannada News

ಜೊಹೆನ್ಸ್‌ಬರ್ಗ್, ಏಪ್ರಿಲ್ 15: ಲಸಿಕೆ ಕುರಿತು ಕೆಲವು ಗೊಂದಲಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಜಾನ್ಸನ್ ಅಂಡ್ ಜಾನ್ಸನ್ ಕೊರೊನಾ ಲಸಿಕೆಯನ್ನು ದಕ್ಷಿಣ ಆಫ್ರಿಕಾ ಸ್ಥಗಿತಗೊಳಿಸಿದೆ. ಲಸಿಕೆ ಪಡೆದ ಆರು ಮಹಿಳೆಯರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಹಾಗೂ ರಕ್ತಕಣಗಳ ಸಂಖ್ಯೆ ಕಡಿಮೆಯಾದ ಸಮಸ್ಯೆ ಗೋಚರಿಸಿದ ಕಾರಣಕ್ಕೆ ಈಚೆಗಷ್ಟೆ ಅಮೆರಿಕ ಈ ಲಸಿಕೆ ನೀಡುವುದನ್ನು ರದ್ದುಗೊಳಿಸಿತ್ತು. ಇದೀಗ ದಕ್ಷಿಣ ಆಫ್ರಿಕಾ ಕೂಡ ಆ ಸಾಲಿಗೆ ಸೇರಿದೆ.

ಅಮೆರಿಕದಿಂದ ಹೀಗೊಂದು ಗೊಂದಲ ಉಂಟಾಗುತ್ತಿದ್ದಂತೆ ನಮ್ಮ ವಿಜ್ಞಾನಿಗಳೊಂದಿಗೆ ತುರ್ತು ಸಭೆ ನಡೆಸಿದ್ದೇವೆ. ಅಮೆರಿಕ ಆಹಾರ ಹಾಗೂ ಔಷಧ ಸಂಸ್ಥೆಯ ನಿರ್ಧಾರವನ್ನು ಲಘುವಾಗಿ ತೆಗೆದುಕೊಳ್ಳುವಂತಿಲ್ಲ ಎಂದು ಅವರು ಸಲಹೆ ನೀಡಿರುವುದಾಗಿ ಆರೋಗ್ಯ ಸಚಿವರು ತಿಳಿಸಿದ್ದಾರೆ. ವಿಜ್ಞಾನಿಗಳ ಸಲಹೆ ಮೇರೆಗೆ ಸ್ವಯಂಪ್ರೇರಿತವಾಗಿ ಲಸಿಕೆ ನೀಡುವುದನ್ನು ರದ್ದುಗೊಳಿಸಲಾಗಿದೆ. ಜಾನ್ಸನ್ ಅಂಡ್ ಜಾನ್ಸನ್ ಲಸಿಕೆಗೂ ರಕ್ತ ಹೆಪ್ಪುಗಟ್ಟುವ ಸಮಸ್ಯೆಗೂ ಇರುವ ಸಂಬಂಧದ ಕುರಿತು ಸಂಪೂರ್ಣ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಝ್ವೆಲಿ ಖೈಜ್ ತಿಳಿಸಿದ್ದಾರೆ.

 South Africa Suspends Using Johnson And Johnson Corona vaccine

 ಭಾರತದಲ್ಲಿ ಲಸಿಕೆ ಉತ್ಸವದ 4ನೇ ದಿನ ಲಸಿಕೆ ಪಡೆದ ಫಲಾನುಭವಿಗಳೆಷ್ಟು? ಭಾರತದಲ್ಲಿ ಲಸಿಕೆ ಉತ್ಸವದ 4ನೇ ದಿನ ಲಸಿಕೆ ಪಡೆದ ಫಲಾನುಭವಿಗಳೆಷ್ಟು?

ದಕ್ಷಿಣ ಆಫ್ರಿಕಾದಲ್ಲಿ ಲಸಿಕೆ ಪಡೆದ ನಂತರ ವ್ಯಕ್ತಿಗಳಲ್ಲಿ ಯಾವುದೇ ಅಡ್ಡಪರಿಣಾಮ ಉಂಟಾದ ವರದಿಯಾಗಿಲ್ಲ. ಈಗಾಗಲೇ 289,787 ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆದುಕೊಂಡಿದ್ದಾರೆ. ಇದಾಗ್ಯೂ ಮುಂಜಾಗ್ರತಾ ಕ್ರಮವಾಗಿ ಲಸಿಕೆಯನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಜಾನ್ಸನ್ ಅಂಡ್ ಜಾನ್ಸನ್ ಲಸಿಕೆ ಹಾಗೂ ಅಡ್ಡಪರಿಣಾಮಗಳ ಕುರಿತು ಸೂಕ್ತ ವರದಿ ನೀಡಬೇಕೆಂದು ಕಂಪನಿಗೆ ತಿಳಿಸಲಾಗಿದೆ.

English summary
South Africa suspends Johnson & Johnson Covid-19 vaccine after us stopped using vaccine
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X