ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಮಿಕ್ರಾನ್ ಲಕ್ಷಣಗಳು ಮೊದಲಿನ 3 ಅಲೆಗಳಿಗಿಂತ ಸೌಮ್ಯವಾಗಿರಲಿವೆ: ತಜ್ಞರು

|
Google Oneindia Kannada News

ಜೋಹಾನ್ಸ್ ಬರ್ಗ್, ಡಿಸೆಂಬರ್ 09: ಓಮಿಕ್ರಾನ್ ಲಕ್ಷಣಗಳು ಮೊದಲ ಮೂರು ಅಲೆಗಳಿಗಿಂತ ಸೌಮ್ಯವಾಗಿರಲಿವೆ ಎಂದು ದಕ್ಷಿಣ ಆಫ್ರಿಕಾದ ತಜ್ಞರು ಮಾಹಿತಿ ನೀಡಿದ್ದಾರೆ. ಗೌಟೆಂಗ್ ಪ್ರಾಂತ್ಯದಲ್ಲಿ ಪ್ರಸ್ತುತ ನಾಲ್ಕನೇ ಅಲೆ ಶುರುವಾಗಿದೆ. ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳಲ್ಲಿ ಕಂಡುಬಂದಿರುವ ರೋಗ ಲಕ್ಷಣಗಳು ಕಳೆದ ಮೂರು ಅಲೆಗಳಿಗಿಂತ ಸೌಮ್ಯವಾಗಿವೆ ಎಂಬುದು ತಿಳಿದುಬಂದಿದೆ. ಹೆಚ್ಚಿನ ಕೋವಿಡ್ ರೋಗಿಗಳಿಗೆ ಆಮ್ಲಜನಕ ಅಥವಾ ತೀವ್ರ ನಿಗಾ ಘಟಕದ ಅಗತ್ಯವಿಲ್ಲ ಓಮಿಕ್ರಾನ್ ಕುರಿತು ಮಾಹಿತಿ ಪಡೆಯಲು ವಿಜ್ಞಾನಿಗಳು ಇನ್ನೂ ಹಲವು ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ.

ಮೊದಲ ಮೂರು ಅಲೆ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿನ ದಾಖಲಾತಿ ದರವು ಏರುಗತಿಯಲ್ಲಿತ್ತು, ಪ್ರಸ್ತುತ ನೆಟ್‌ ಕೇರ್ ಆಸ್ಪತ್ರೆ ನೀಡಿರುವ ಮಾಹಿತಿ ಪ್ರಕಾರ ಸುಮಾರು ಶೇ. 90ರಷ್ಟು ಕೋವಿಡ್ ರೋಗಿಗಳಿಗೆ ಕೃತಕ ಆಮ್ಲಜನಕದ ಅಗತ್ಯವಿಲ್ಲ. ಒಟ್ಟು 337 ಕೊರೊನಾ ಸೋಂಕಿತರಲ್ಲಿ ಎಂಟು ಮಂದಿಯನ್ನು ಮಾತ್ರ ವೆಂಟಿಲೇಟರ್‌ನಲ್ಲಿ ಇಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಓಮಿಕ್ರಾನ್‌: ದಕ್ಷಿಣ ಆಫ್ರಿಕಾದಲ್ಲಿ ಆಸ್ಪತ್ರೆಗೆ ದಾಖಲಾತಿ ಪ್ರಮಾಣ ಒಂದೇ ದಿನದಲ್ಲಿ ದ್ವಿಗುಣಓಮಿಕ್ರಾನ್‌: ದಕ್ಷಿಣ ಆಫ್ರಿಕಾದಲ್ಲಿ ಆಸ್ಪತ್ರೆಗೆ ದಾಖಲಾತಿ ಪ್ರಮಾಣ ಒಂದೇ ದಿನದಲ್ಲಿ ದ್ವಿಗುಣ

ನವೆಂಬರ್ 15 ರಿಂದ 800 ಮಂದಿ ಕೊರೊನಾ ಸೋಂಕಿತರು ನೆಟ್‌ಕೇರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರಲ್ಲಿ ಸುಮಾರು ಶೇ.75ರಷ್ಟು ಮಂದಿ ಲಸಿಕೆ ಹಾಕಿಸಿಕೊಂಡಿಲ್ಲ. ಈ ಸಮಯದಲ್ಲಿ ಕೋವಿಡ್‌ನಿಂದ ಮೃತಪಟ್ಟ ನಾಲ್ಕು ಮಂದಿ ಪೈಕಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು ಹಾಗೂ ಎಲ್ಲರೂ 58 ರಿಂದ 91 ವರ್ಷದೊಳಗಿನವಾರಗಿದ್ದರು. ಈ ಪೈಕಿ ಮೂವರು ರೋಗಿಗಳು ಲಸಿಕೆ ಪಡೆದುಕೊಂಡಿರಲಿಲ್ಲ.

South Africa Expert Says Omicron Symptoms Far Milder Than First Three Waves

ಭಾರತದಲ್ಲಿ ಕೊರೊನಾವೈರಸ್‌ನ ಹೊಸ ರೂಪಾಂತರವಾದ ಕೊರೊನಾವೈರಸ್ ಓಮಿಕ್ರಾನ್ ಎರಡು ಪ್ರಕರಣಗಳು ಕರ್ನಾಟಕದಲ್ಲಿ ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಇದೀಗ ದೇಶಾದ್ಯಂತ ಆತಂಕ ಮನೆ ಮಾಡಿದೆ. ಕೊರೊನಾದ ಡೆಲ್ಟಾ ರೂಪಾಂತರಕ್ಕಿಂತ ಓಮಿಕ್ರಾನ್ ಹೆಚ್ಚು ಸಾಂಕ್ರಾಮಿಕವಾಗಿದೆ ಎನ್ನಲಾಗಿದೆ.

ಮೊದಲ ಬಾರಿಗೆ, ದಕ್ಷಿಣ ಆಫ್ರಿಕಾದಲ್ಲಿಕಂಡುಬಂದ ಈ ರೂಪಾಂತರ, ಪ್ರಪಂಚದಾದ್ಯಂತ ಇತರ ದೇಶಗಳಿಗೆ ವೇಗವಾಗಿ ಹರಡಿದೆ. ಈ ಹಿನ್ನೆಲೆಯಲ್ಲಿ ಇದು ಹೆಚ್ಚು ಸಾಂಕ್ರಾಮಿಕವಾಗಿದೆ ಎಂಬುದು ಸ್ಪಷ್ಟವಾಗಿದೆ. ಹೊಸ ರೂಪಾಂತರವು ಎಷ್ಟು ಮಾರಕವಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಪ್ರಪಂಚದಾದ್ಯಂತದ ವಿಜ್ಞಾನಿಗಳು ಮತ್ತು WHO ತಂಡವು ಸಂಶೋಧನೆಯಲ್ಲಿ ತೊಡಗಿದೆ.

ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿರುವ ದಕ್ಷಿಣ ಆಫ್ರಿಕಾದ ವೈದ್ಯರು: ದಕ್ಷಿಣ ಆಫ್ರಿಕಾದ ವೈದ್ಯರು ಓಮಿಕ್ರಾನ್ ರೋಗಲಕ್ಷಣಗಳು ಮತ್ತು ಲಸಿಕೆ ಪರಿಣಾಮದ ಬಗ್ಗೆ ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ವೈದ್ಯಕೀಯ ಸಂಘದ ಅಧ್ಯಕ್ಷ ಡಾ ಏಂಜೆಲಿಕ್ ಕೊಯೆಟ್ಜಿ ಮಾತನಾಡಿ, ಅನೇಕ ದೇಶಗಳಲ್ಲಿ ಸೋಂಕಿನ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳ ಕಾಣುತ್ತಿವೆ ಎಂದಿದ್ದಾರೆ.

ಇವು ಓಮಿಕ್ರಾನ್ ರೂಪಾಂತರದ 3 ಪ್ರಮುಖ ಗುಣಲಕ್ಷಣಗಳಾಗಿವೆ: ವರದಿಯ ಪ್ರಕಾರ, ಓಮಿಕ್ರಾನ್ ರೂಪಾಂತರದ ರೋಗಲಕ್ಷಣಗಳು ಹಿಂದಿನ ತಳಿಗಳಿಗಿಂತ ಭಿನ್ನವಾಗಿರಬಹುದು ಎಂದು ವೈದ್ಯ ಏಂಜೆಲಿಕ್ ಕೊಯೆಟ್ಜಿ ಅಭಿಪ್ರಾಯಪಟ್ಟಿದ್ದಾರೆ. ಓಮಿಕ್ರಾನ್‌ನ ಮುಖ್ಯ ಲಕ್ಷಣಗಳ ಬಗ್ಗೆ ಮಾತನಾಡಿರುವ ಏಂಜೆಲಿಕ್ ಕೊಯೆಟ್ಜಿ, ರೋಗಿಗಳಲ್ಲಿ ಹೆಚ್ಚು ಆಯಾಸ, ಮೈ ಕೈ ನೋವು ಮತ್ತು ತಲೆನೋವು ಕಂಡುಬರುತ್ತಿದೆ ಎಂದು ಹೇಳಿದ್ದಾರೆ. ಇದಲ್ಲದೆ, ಕೆಲವು ರೋಗಿಗಳಲ್ಲಿ ದೌರ್ಬಲ್ಯದ ಲಕ್ಷಣಗಳು ಕೂಡಾ ವರದಿಯಾಗಿವೆ. ಇಲ್ಲಿಯವರೆಗೆ ಯಾವುದೇ ರೋಗಿಗಿಯಲ್ಲಿ ವಾಸನೆಯ ನಷ್ಟ ಅಥವಾ ನಾಲಗೆ ರುಚಿ ನಷ್ಟ ತೀವ್ರ ಜ್ವರದಂತಹ ಸಮಸ್ಯೆ ಕೇಳಿ ಬಂದಿಲ್ಲ.

ಹೊಸ ರೂಪಾಂತರದಲ್ಲಿ ಲಸಿಕೆ ಪರಿಣಾಮಕಾರಿಯಾಗಿರುತ್ತದೆಯೇ?: ಕರೋನಾ ಲಸಿಕೆಯು ಓಮಿಕ್ರಾನ್ ರೂಪಾಂತರದ ಮೇಲೆ ಪರಿಣಾಮ ಬೀರುತ್ತದೆ ಎಂದು ತೋರುತ್ತಿದೆ ಎಂದು ವೈದ್ಯ ಏಂಜೆಲಿಕ್ ಕೊಯೆಟ್ಜಿ ಹೇಳಿದ್ದಾರೆ. ಏಕೆಂದರೆ ಲಸಿಕೆ ಹಾಕಿದ ಜನರು ಸೌಮ್ಯ ರೋಗಲಕ್ಷಣಗಳನ್ನು ಹೊಂದಿದ್ದಾರೆ.

ಓಮಿಕ್ರಾನ್ ರೂಪಾಂತರವು ಪ್ರಾಥಮಿಕ ಆರೋಗ್ಯ ರಕ್ಷಣೆಯ ಹಂತದಲ್ಲಿ ಡೆಲ್ಟಾ ರೂಪಾಂತರಕ್ಕಿಂತ ಕಡಿಮೆಯಾಗಿದೆ. ಆದರೆ ಆಸ್ಪತ್ರೆಯ ಮಟ್ಟದಲ್ಲಿ ಈ ಚಿತ್ರಣ ಬದಲಾಗುವ ಸಾಧ್ಯತೆ ಇದೆ. ಯಾಕೆಂದರೆ ಇದು ಹೊಸ ರೂಪಾಂತರದ ಆರಂಭಿಕ ದಿನಗಳಾಗಿವೆ ಮತ್ತು ಹೆಚ್ಚಿನ ಜನರು ಆಸ್ಪತ್ರೆಗಳಿಗೆ ದಾಖಲಾಗಿಲ್ಲ.

Recommended Video

ಬಿಪಿನ್ ರಾವತ್ ನಿಧನದಿಂದ ತೆರವಾದ CDS ಹುದ್ದೆ ಅಲಂಕರಿಸೋದು ಯಾರು? | Oneindia Kannada

English summary
Netcare Ltd., which operates the largest private healthcare network in South Africa, is seeing milder Covid-19 cases even as omicron is driving up the number of people testing positive for the virus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X