ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌತ್ ಆಫ್ರಿಕಾ ನೈಟ್‌ಕ್ಲಬ್‌ನಲ್ಲಿ 22 ಮಂದಿ ನಿಗೂಢ ಸಾವು

|
Google Oneindia Kannada News

ಕೇಪ್‌ಟೌನ್, ಜೂನ್ 26: ನೈಟ್ ಕ್ಲಬ್‌ವೊಂದರಲ್ಲಿ ಭಾನುವಾರ ಬೆಳಗ್ಗೆ 22 ಜನರು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಸೌತ್ ಆಫ್ರಿಕಾದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ಈಸ್ಟರ್ನ್ ಕೇಪ್ ಪ್ರಾಂತ್ಯದ ಈಸ್ಟ್ ಲಂಡನ್ ನಗರದ ನೈಟ್ ಕ್ಲಬ್‌ನಲ್ಲಿ ಭಾನುವಾರ ಬೆಳಗ್ಗೆ ಈ ದುರ್ಘಟನೆ ಸಂಭವಿಸಿದೆ. ಆದರೆ ಯಾವ ಕಾರಣಕ್ಕೆ ಈ 22 ಜನರು ಸಾವನ್ನಪ್ಪಿದರು ಎಂಬುದು ಮಾತ್ರ ಸ್ಪಷ್ಟವಾಗಿ ಗೊತ್ತಾಗಿಲ್ಲ. ಸತ್ತವರಲ್ಲಿ ಯುವಕರು ಮತ್ತು ಯುವತಿಯರೂ ಇದ್ದಾರೆ. ಎಲ್ಲರೂ 18-20 ವರ್ಷದ ವಯೋಮಾನದವರು ಎನ್ನಲಾಗಿದೆ.

ಇಂಗ್ಲೆಂಡ್ ಪಬ್‌ನಲ್ಲಿ ಗಲಾಟೆ: ಸೌತ್ ಆಫ್ರಿಕಾ ಕ್ರಿಕೆಟಿಗನ ಮೇಲೆ ಹಲ್ಲೆ, ಕೋಮಾದಲ್ಲಿ ಮಾಂಡ್ಲಿ ಇಂಗ್ಲೆಂಡ್ ಪಬ್‌ನಲ್ಲಿ ಗಲಾಟೆ: ಸೌತ್ ಆಫ್ರಿಕಾ ಕ್ರಿಕೆಟಿಗನ ಮೇಲೆ ಹಲ್ಲೆ, ಕೋಮಾದಲ್ಲಿ ಮಾಂಡ್ಲಿ

ಎನ್ಯೋಬೆನಿ ಟ್ಯಾವರ್ನ್ ಎಂಬ ಈ ನೈಟ್ ಕ್ಲಬ್‌ನಲ್ಲಿ 22 ಜನರ ದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಕಂಡು ಬಂದಿತ್ತು. ಸಾವನ್ನಪ್ಪಿದವರ ಕುಟುಂಬ ಸದಸ್ಯರ ಆಕ್ರಂದನ ಕರುಳು ಹಿಂಡುವಂತಿತ್ತು. ಘಟನಾ ಸ್ಥಳಕ್ಕೆ ಹೋಗಿ ದೇಹಗಳನ್ನು ನೋಡಲು ಅವಕಾಶ ಕೊಡುವಂತೆ ಜನರು ಮನವಿ ಮಾಡಿಕೊಳ್ಳುತ್ತಿದ್ದರು ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.

ದುರ್ಘಟನೆ ನಡೆದಾಗ ಎನ್ಯೋಬೆನ್ ಟ್ಯಾವರ್ನ್ ನೈಟ್ ಕ್ಲಬ್‌ನಲ್ಲಿ ಎಷ್ಟು ಮಂದಿ ಇದ್ದರೆಂಬುದು ಗೊತ್ತಾಗಿಲ್ಲ. ಘಟನೆಯನ್ನು ಕಂಡು ಬದುಕುಳಿದಿರುವವರು ಯಾರಾದರೂ ಇದ್ದಾರಾ ಎಂಬುದು ತಿಳಿದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹೊಸ ಮಸೂದೆಗೆ ಜೋ ಬೈಡೆನ್ ಸಹಿ: ಅಮೆರಿಕದಲ್ಲಿ ಗನ್ ಬಳಕೆಗೆ ಬೀಳುತ್ತಾ ಕಡಿವಾಣಹೊಸ ಮಸೂದೆಗೆ ಜೋ ಬೈಡೆನ್ ಸಹಿ: ಅಮೆರಿಕದಲ್ಲಿ ಗನ್ ಬಳಕೆಗೆ ಬೀಳುತ್ತಾ ಕಡಿವಾಣ

ನಿಗೂಢ ಸಾವು

ನಿಗೂಢ ಸಾವು

ನೈಟ್ ಕ್ಲಬ್‌ನಲ್ಲಿ ಚೇರ್, ಟೇಬಲ್‌ಗಳ ಮೇಲೆಲ್ಲಾ ದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ನೆಲದ ಮೇಲೂ ಕೆಲ ದೇಹಗಳು ಬಿದ್ದಿದ್ದವು. ಈ ನೈಟ್‌ಕ್ಲಬ್‌ನಲ್ಲಿದ್ದ ಜನರಿಗೆ ವಿಷ ಪ್ರಾಶನವಾಗಿರಬಹುದು ಎಂಬ ಶಂಕೆ ಇದೆ. ಅಥವಾ ಯಾವುದೋ ಕಾರಣಕ್ಕೆ ನೂಕುನುಗ್ಗಲು ಆಗಿ ಕಾಲ್ತುಳಿತದಿಂದ ಜನರು ಸತ್ತಿರುವ ಸಾಧ್ಯತೆ ಇರಬಹುದು ಎಂದು ಸೌತ್ ಆಫ್ರಿಕಾದ ಪತ್ರಿಕೆಯೊಂದರ ವರದಿಯಲ್ಲಿ ಶಂಕಿಸಲಾಗಿದೆ. ವಿಚಿತ್ರ ಎಂದರೆ ಯಾವ ದೇಹಕ್ಕೂ ಗಾಯದ ಗುರುತು ಇಲ್ಲ. ಕಾಲ್ತುಳಿತದಿಂದ ಸಾವನ್ನಪ್ಪಿದ್ದರೆ ಗಾಯವಾಗಿರುತ್ತಿತ್ತು. ಅಂಥ ಗಾಯ ಕಂಡುಬರದ ಹಿನ್ನೆಲೆಯಲ್ಲಿ ಕಾಲ್ತುಳಿತ ಘಟನೆಯ ಸಾಧ್ಯತೆ ಇಲ್ಲ ಎನ್ನಲಾಗಿದೆ.

ವಿದ್ಯಾರ್ಥಿಗಳ ಸೆಲಬ್ರೇಷನ್ ಪಾರ್ಟಿ

ವಿದ್ಯಾರ್ಥಿಗಳ ಸೆಲಬ್ರೇಷನ್ ಪಾರ್ಟಿ

ನೈಟ್ ಕ್ಲಬ್‌ನಲ್ಲಿ ಸಾವನ್ನಪ್ಪಿದವರೆಲ್ಲರೂ 18-20 ವರ್ಷದ ಯುವಕ ಮತ್ತು ಯುವತಿಯರೇ ಆಗಿದ್ದಾರೆ. ಇವರು ಶಾಲಾ ವಿದ್ಯಾರ್ಥಿಗಳಾಗಿದ್ದು, ಇತ್ತೀಚೆಗಷ್ಟೇ ಪರೀಕ್ಷೆಗಳನ್ನು ಬರೆದಿದ್ದರು. ಅದೇ ಖುಷಿಯಲ್ಲಿ ಎಲ್ಲರೂ ಸೇರಿ ಗೆಟ್ ಟುಗೆದರ್ ರೀತಿ ಪಾರ್ಟಿ ಮಾಡಿಕೊಂಡಿದ್ದಾರೆ. ಆಗ ಈ ದುರಂತ ಸಂಭವಿಸಿದೆ.

ಎಷ್ಟು ಮಂದಿ ಇದ್ದರು?

ಎಷ್ಟು ಮಂದಿ ಇದ್ದರು?

ನೈಟ್ ಕ್ಲಬ್‌ನಲ್ಲಿ ಶನಿವಾರ ರಾತ್ರಿ ನಡೆದ ಈ ಪಾರ್ಟಿಯಲ್ಲಿ ಎಷ್ಟು ಮಂದಿ ಸೇರಿದ್ದರೆಂಬ ಮಾಹಿತಿ ಮಾತ್ರ ಗೊತ್ತಾಗಿಲ್ಲ. ಆದರೆ, ಸಾವಿನ ದುರಂತದ ಸುದ್ದಿ ಮಾಧ್ಯಮಗಳಲ್ಲಿ ಬಂದ ಬಳಿಕ ಬಹಳಷ್ಟು ಜನರು ನೈಟ್ ಕ್ಲಬ್‌ನತ್ತ ಧಾವಿಸಿ ಒಳಗೆ ಹೋಗಲು ಪ್ರಯತ್ನಿಸುತ್ತಿದ್ದುದು ಕಂಡುಬಂದಿದೆ.

ರಾತ್ರಿ ಮನೆಗೆ ಬರದೇ ಹೋದ ಮಕ್ಕಳ ಪೋಷಕರು ನೈಟ್ ಕ್ಲಬ್‌ನಲ್ಲಿ ಹುಡುಕಾಟದಲ್ಲಿದ್ದರೆನ್ನಲಾಗಿದೆ. ಸಾವನ್ನಪ್ಪಿದ ಮಕ್ಕಳ ದೇಹವನ್ನು ಗುರುತಿಸುವ ಕೆಲಸ ನಡೆಯುತ್ತಿದೆ.

ಮರಣೋತ್ತರ ಪರೀಕ್ಷೆಯಿಂದ ಸತ್ಯಾಂಶ

ಮರಣೋತ್ತರ ಪರೀಕ್ಷೆಯಿಂದ ಸತ್ಯಾಂಶ

"ನೈಟ್ ಕ್ಲಬ್‌ನಲ್ಲಿ 22 ಮಂದಿ ಯಾವ ಕಾರಣಕ್ಕೆ ಸತ್ತರು ಎಂಬುದು ಇನ್ನೂ ನಿಖರವಾಗಿ ಗೊತ್ತಾಗಿಲ್ಲ. ಶವಪರೀಕ್ಷೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯಿಂದ ಈ ಸಾವಿಗೆ ಏನು ಕಾರಣ ಎಂಬುದು ಗೊತ್ತಾಗುತ್ತದೆ"ಎಂದು ಈಸ್ಟರ್ನ್ ಕೇಪ್ ಪ್ರಾಂತ್ಯದ ಆರೋಗ್ಯ ಇಲಾಖೆಯ ವಕ್ತಾರ ಸಿಯಾಂಡಾ ಮನಾನ ಹೇಳಿದ್ದಾರೆ.

ಸದ್ಯ, ವಿಧಿವಿಜ್ಞಾನದ ತಂಡ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದೆ. ಪೊಲೀಸರು ಕೂಡ ಪರಿಶೀಲನೆ ನಡೆಸಿದ್ಧಾರೆ. ತನಿಖೆ ಕೂಡ ನಡೆಯುತ್ತಿದೆ. ದುರ್ಘಟನೆಯಲ್ಲಿ ಯಾರಾದರೂ ಬದುಕುಳಿದಿದ್ದಾರಾ ಎಂಬುದನ್ನು ಪತ್ತೆ ಮಾಡುವ ಪ್ರಯತ್ನ ನಡೆದಿದೆ. ಶವಪರೀಕ್ಷೆಯಿಂದ ಘಟನೆಗೆ ಕಾರಣ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಬದುಕುಳಿದವರು ಯಾರಾದರು ಇದ್ದರೆ ಘಟನೆ ಹೇಗಾಯಿತು ಎಂಬುದು ತಿಳಿಯಬಹುದು.

(ಒನ್ಇಂಡಿಯಾ ಸುದ್ದಿ)

English summary
22 young men and women were found dead at a nigh club in East London city of Eastern Cape province in South Africa. There are no injury marks on the bodies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X