ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದ್ಯದಲ್ಲೇ ಕಾರುಗಳಿಗೂ ಬರಲಿದೆ ಆ್ಯಂಡ್ರಾಯ್ಡ್ ವ್ಯವಸ್ಥೆ

ಕಾರು ಡ್ರೈವ್ ಮಾಡುವಾಗಲೇ ಗೂಗಲ್ ಮ್ಯಾಪ್ ಸೇರಿದಂತೆ ಗೂಗಲ್ ಎಲ್ಲಾ ಆ್ಯಪ್ ಗಳ ಬಳಕೆಯನ್ನು ಪಡೆಯಬಹುದು. ಮಾತ್ರವಲ್ಲ, ಎಣಿಯಿಲ್ಲದ ಸೌಕರ್ಯ, ಸೌಲಭ್ಯಗಳು ಕಾರಿನಲ್ಲೇ ಸಿಗಲಿವೆ.

|
Google Oneindia Kannada News

ಕ್ಯಾಲಿಫೋರ್ನಿಯಾ, ಮೇ 16: ನಾವೆಲ್ಲರೂ ತಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ಬಳಸುತ್ತಿರುವ ಗೂಗಲ್ ಆ್ಯಂಡ್ರಾಯ್ಡ್ ಆಪರೇಟಿಂಗ್ ವ್ಯವಸ್ಥೆ ಶೀಘ್ರದಲ್ಲೇ ಕಾರುಗಳಿಗೆ ಅಳವಡಿಸಲಾಗುತ್ತದೆ. ಆ್ಯಂಡ್ರಾಯ್ಡ್ ಕಂಪನಿಯ ಮಾಲೀಕತ್ವ ಹೊಂದಿರುವ ಗೂಗಲ್ ಕಂಪನಿ ಈ ವಿಚಾರ ತಿಳಿಸಿದೆ.

ಇದು ಜಾರಿಗೆ ಬಂದರೆ, ಕಾರು ಡ್ರೈವ್ ಮಾಡುವಾಗಲೇ ಗೂಗಲ್ ಮ್ಯಾಪ್ ಸೇರಿದಂತೆ ಗೂಗಲ್ ಎಲ್ಲಾ ಆ್ಯಪ್ ಗಳ ಬಳಕೆಯನ್ನು ಪಡೆಯಬಹುದು. ಅಲ್ಲದೆ, ನಿಮ್ಮ ಫೋನ್ ನೊಂದಿಗೆ ಕಾರಿನಲ್ಲಿರುವ ಆ್ಯಂಡ್ರಾಯ್ಡ್ ಥಳುಕು ಹಾಕಿಕೊಂಡಲ್ಲಿ ಎಣಿಯಿಲ್ಲದ ಸೌಕರ್ಯ, ಸೌಲಭ್ಯಗಳು ಸಿಗಲಿವೆ ಎಂದು ಹೇಳಲಾಗಿದೆ.

Soon, Google's Android may power your car, just like it runs your smartphone

ಇದಕ್ಕೆ ಆ್ಯಂಡ್ರಾಯ್ಡ್ ಆಟೋ ಮೋಟಿವ್ ಎಂದು ಹೆಸರಿಡಲಾಗಿದ್ದು, ಇದೊಂದು ಇನ್ಫೋಟೈನ್ ಮೆಂಟ್ (ಮಾಹಿತಿ ಆಧಾರಿತ ಮನರಂಜನೆ) ತಂತ್ರಜ್ಞಾನವಾಗಿರಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ಆದರೆ, ಈಗಗಾಗಲೇ ಜನಪ್ರಿಯ ಕಾರು ತಯಾರಿಕಾ ಸಂಸ್ಥೆಗಳಾದ ಹೊಂಡಾ ಹಾಗೂ ಹುಂಡೈ ಗಳು ಈಗಾಗಲೇ ತಮ್ಮಲ್ಲಿ ಆ್ಯಂಡ್ರಾಯ್ಡ್ ಇನ್ಫೋಟೈನ್ ಮೆಂಟ್ ವ್ಯವಸ್ಥೆ ಅಳವಡಿಸಲು ಆರಂಭಿಸಿವೆ.

ಆದರೆ, ಇವೆಲ್ಲವೂ ಆ್ಯಂಡ್ರಾಯ್ಡ್ ಬೆಂಬಲಿತ ಮಾತ್ರ. ಕಾರುಗಳಿಗಾಗಿಯೇ ಸಿದ್ಧಗೊಂಡ ಆ್ಯಂಡ್ರಾಯ್ಡ್ ಅಲ್ಲ. ಹಾಗಾಗಿ, ತಾನೇ ಕಾರುಗಳಿಗೆಂದೇ ಪ್ರತ್ಯೇಕವಾಗಿ ಆ್ಯಂಡ್ರಾಯ್ಡ್ ಸಿಸ್ಟಂ ಜಾರಿಗೆ ತರುತ್ತಿರುವುದಾಗಿ ಗೂಗಲ್ ಹೇಳಿಕೊಂಡಿದೆ.

English summary
Google on Monday announced it was now planning to install Android operating system straight into cars. The search engine giant, trying to establish itself in the automobile industry with high-technology, now could get a major fillip from the use of its mobile operating system in high-end cars.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X