ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್ ಚುನಾವಣೆಯಲ್ಲಿ ನಾರಾಯಣ ಮೂರ್ತಿ ಅಳಿಯನಿಗೆ ಭರ್ಜರಿ ಗೆಲುವು

ಬ್ರಿಟನ್ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಆಡಳಿತರೂಢ ಕನ್ಸರ್ವೇಟಿವ್ ಪಕ್ಷದಿಂದ ಕಣಕ್ಕಿಳಿದಿದ್ದ ನಾರಾಯಣ ಮೂರ್ತಿ ಅಳಿಯ ರಿಶಿ ಸುನಕ್ ಭರ್ಜರಿ ಗೆಲುವು ಸಾಧಿಸಿದ್ದಾರೆ.

By Sachhidananda Acharya
|
Google Oneindia Kannada News

ಲಂಡನ್, ಜೂನ್ 9: ಬ್ರಿಟನ್ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಆಡಳಿತರೂಢ ಕನ್ಸರ್ವೇಟಿವ್ ಪಕ್ಷದಿಂದ ಕಣಕ್ಕಿಳಿದಿದ್ದ ನಾರಾಯಣ ಮೂರ್ತಿ ಅಳಿಯ ರಿಶಿ ಸುನಕ್ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಉತ್ತರ ಯಾಕ್ ಶೈರ್ ನಲ್ಲಿ ಬರುವ ರಿಚ್ಮಂಡ್ (ಯಾರ್ಕ್) ಕ್ಷೇತ್ರದಲ್ಲಿ ಕನ್ಸರ್ವೇಟಿವ್ ಪಕ್ಷದಿಂದ ಕಣಕ್ಕಿಳಿದಿದ್ದ ರಿಶಿ ಸುನಕ್ 23,108 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ರಿಶಿ ಸುನಕ್ 36,458 ಮತ ಪಡೆದಿದ್ದರೆ ಅವರ ಪ್ರತಿಸ್ಪರ್ಧಿ ಲೇಬರ್ ಪಕ್ಷದ ಡ್ಯಾನ್ ಪೆರ್ರಿ 13,350 ಮತಗಳನ್ನು ಪಡೆಯಲಷ್ಟೇ ಶಕ್ತವಾಗಿದ್ದಾರೆ.

[ಬ್ರಿಟನ್ ಚುನಾವಣೆ : ಕನ್ನಡಿಗ ನೀರಜ್ ಪಾಟೀಲಗೆ ಸೋಲು]

Sun-in-law of NR Narayana Murthy, Rishi Sunak won in the UK praliamentary Election

ಈ ಮೂಲಕ ಶೇಕಡಾ 63.9 ಮತಗಳನ್ನು ಪಡೆದು ಎರಡನೇ ಬಾರಿಗೆ ಬ್ರಿಟನ್ ಸಂಸತ್ತಿನ ಕೆಳಮನೆ 'ಹೌಸ್ ಆಫ್ ಕಾಮನ್ಸ್' ಪ್ರವೇಶಿಸಿದ್ದಾರೆ. 2015ರಲ್ಲಿಯೂ ಅವರು ಇದೇ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು.

ನಾರಾಯಣ ಮೂರ್ತಿ ಪುತ್ರಿ ಅಕ್ಷತಾ ಮೂರ್ತಿಯವರನ್ನು ರಿಶಿ ಸುನಕ್ ವರಿಸಿದ್ದಾರೆ. ಅವರು ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದುಕೊಂಡಿದ್ದಾರೆ.

Sun-in-law of NR Narayana Murthy, Rishi Sunak won in the UK praliamentary Election

ಇನ್ನು ಬ್ರಿಟನ್ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ 650 ಸ್ಥಾನಗಳ ಪೈಕಿ ಕನ್ಸರ್ವೇಟಿವ್ ಪಕ್ಷ 318 ಸ್ಥಾನಗಳನ್ನು ಗೆದ್ದಿದ್ದು ಬಹುಮತಕ್ಕೆ 6 ಸ್ಥಾನಗಳ ಕೊರತೆ ಅನುಭವಿಸುತ್ತಿದೆ.

English summary
Conservative candidate and son-in-law of NR Narayana Murthy, Rishi Sunak has retained the Richmond (York) seat with an increased majority. With 35,458 votes Mr Sunak comfortably held on to the seat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X