ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಕಿ ಬಿದ್ದಿದೆ ಚಂದಿರಗೆ ಓ ಬೇಗ ಬನ್ನಿ...!

|
Google Oneindia Kannada News

ಫ್ರಾಂಕ್ ಫರ್ಟ್, ಅಕ್ಟೋಬರ್ 7: ಆಕಾಶದ ತುಂಬ ಹಾಲ್ಬೆಳಕು ಚೆಲ್ಲುವ ಬೆಳ್ಳಿ ಚಂದ್ರಂಗೆ ಬೆಂಕಿ ಬಿದ್ದರೆ ಹೇಗಿರುತ್ತೆ? ಬೆಂಕಿ ಸೂರ್ಯನ ಬೆಳಕನ್ನುಂಡು ಉಂಡು ಚಂದ್ರನೂ ಸೂರ್ಯನ ಹಾಗೇ ಆಗಿಬಿಟ್ಟರೆ..!

ಜರ್ಮನಿಯ ಫ್ರಾಂಕ್ ಫರ್ಟ್ ನಲ್ಲಿ ಇತ್ತೀಚೆಗೆ ಒಂದು ದಿನ ಚಂದಿರ ಹೊಂಬಣ್ಣದ ರಂಗು ಪಡೆದು ಮೋಡದ ನಡುವಲ್ಲೂ ರುದ್ರರಮಣೀಯವಾಗಿ ಕಾಣಿಸಿಕೊಂಡ!

<span class=ಬಾನಂಗಳದಲ್ಲಿ ರಂಗುರಂಗೇರಿದ ಚಂದಿರನ ಶೃಂಗಾರಕಾವ್ಯ" title="ಬಾನಂಗಳದಲ್ಲಿ ರಂಗುರಂಗೇರಿದ ಚಂದಿರನ ಶೃಂಗಾರಕಾವ್ಯ" />ಬಾನಂಗಳದಲ್ಲಿ ರಂಗುರಂಗೇರಿದ ಚಂದಿರನ ಶೃಂಗಾರಕಾವ್ಯ

ನೀಲಿಬಣ್ಣದ ಹಿನ್ನೆಲೆ, ಬೆಟ್ಟ ಗುಡ್ಡಗಳು, ಆಗಸದ ತುಂಬ ಹೊನ್ನ ಬೆಳಕು ಸೂಸುತ್ತಿರುವ ಚಂದ್ರ ಆಕಾಶಕ್ಕೊಂದು ರಮಣೀಯ ಸೊಬಗು ನೀಡಿದ ದೃಶ್ಯ ಅದು.

ಇವಷ್ಟೇ ಸಾಲದು ಎಂಬಂತೆ ಹೊಂಬಣ್ಣದ ಚಂದ್ರಂಗೆಲ್ಲಿ ದೃಷ್ಟಿಯಾದೀತೋ ಎಂದು ಆತನನ್ನು ತನ್ನ ಸೆರಗಲ್ಲಿ ಸಾಧ್ಯವಾದಷ್ಟು ಮರೆಯಾಗಿಸೋ ಪ್ರಯತ್ನ ಮಾಡುತ್ತಿರುವ ಸೊಕ್ಕಿನ ಮೋಡ ಬೇರೆ! ಆ ಸೊಬಗು ನೋಡಿಯೇ ಅನುಭವಿಸಬೇಕು!

ವಾವ್.. ನೋಡಲೇಬೇಕು, ಉಪಗ್ರಹ ತೆಗೆದ ಭೂಮಿಯ ಅದ್ಭುತ ಚಿತ್ರ! ವಾವ್.. ನೋಡಲೇಬೇಕು, ಉಪಗ್ರಹ ತೆಗೆದ ಭೂಮಿಯ ಅದ್ಭುತ ಚಿತ್ರ!

ಇದರೊಟ್ಟಿಗೆ ಜಗತ್ತಿನ ನಾನಾ ಕಡೆಗಳಲ್ಲಿ ನಡೆದ ಮಹತ್ವದ ಘಟನೆಗಳ ಚಿತ್ರ ಮತ್ತದರ ಸಂಕ್ಷಿಪ್ತ ವಿವರ ಇಲ್ಲಿದೆ.

ಕಳ್ಳ ಚಂದಮಾಮಂಗೆ ಚಿನ್ನದಂಗಿ ತೊಡಿಸಿ...

ಕಳ್ಳ ಚಂದಮಾಮಂಗೆ ಚಿನ್ನದಂಗಿ ತೊಡಿಸಿ...

ಜರ್ಮನಿಯ ಫ್ರಾಂಕ್ ಫರ್ಟ್ ನಲ್ಲಿ ಹುಣ್ಣಿಮೆಯ ದಿನ ಕಾಣಿಸಿಕೊಂಡ ಹೊಂಬಣ್ಣದ ಚಂದ್ರನ ಮನಮೋಹಕ ದೃಶ್ಯ.

ಗಾಳಿಗಿಂತ ಹಗುರ ಈ ದೇಹ...

ಗಾಳಿಗಿಂತ ಹಗುರ ಈ ದೇಹ...

ಕೆನಡಾದಲ್ಲಿ ನಡೆಯುತ್ತಿರುವ ವಿಶ್ವ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ ಚಾಂಪಿಯನ್ ಶಿಪ್ ನಲ್ಲಿ ಕೆನಡಾದ ಎಲಜಬೆತ್ ಬ್ಲಾಕ್ ಜಿಮ್ನಾಸ್ಟಿಕ್ ಪ್ರದರ್ಶನ ಮಾಡಿದ್ದು ಹೀಗೆ.

ಕೊನೆಗೂ ಬೋನಿಗೆ ಬಿತ್ತು!

ಕೊನೆಗೂ ಬೋನಿಗೆ ಬಿತ್ತು!

ಗುರ್ಗಾಂವ್ ನ ಮಾರುತಿ ಸುಜುಕಿ ಪ್ಲಾಂಟ್ ನೊಳಕ್ಕೆ ಅಚಾನಕ್ಕಾಗಿ ಬಂದಿದ್ದ ಚಿರತೆಯೊಂದನ್ನು ಇಲ್ಲಿನ ಅರಣ್ಯಾಧಿಕಾರಿಗಳು, ಸಿಬ್ಬಂದಿಗಳು 30 ಗಂಟೆಗಳ ಕಾರ್ಯಾಚರಣೆಯ ನಂತರ ಯಶಸ್ವಿಯಾಗಿ ಸೆರೆಹಿಡಿದರು. ಸೆರೆ ಹಿಡಿದ ನಂತರ ಬೋನಿನಲ್ಲಿ ಮಲಗಿದ್ದ ಚಿರತೆ ಕಾಣಿಸಿದ್ದು ಹೀಗೆ.

ಫೈಟರ್ ವಿಮಾನದಲ್ಲಿ ರಕ್ಷಣಾ ಸಚಿವೆ

ಫೈಟರ್ ವಿಮಾನದಲ್ಲಿ ರಕ್ಷಣಾ ಸಚಿವೆ

ರಕ್ಷಣಾ ಸಚಿವರಾಗಿ ನೇಮಕರಾದ ನಂತರ ಸದಾ ಒಂದಿಲ್ಲೊಂದು ಸ್ಥಳಗಳಿಗೆ ಭೇಟಿ ನೀಡಿ ಭದ್ರತಾ ವ್ಯವಸ್ಥೆಯ ಕುರಿತು ಅಭ್ಯಸಿಸುತ್ತಿರುವ ನಿರ್ಮಲಾ ಸೀತಾರಾಮನ್, ಗುಜರಾತಿನ ಜಮ್ನಗರ್ ವಾಯುನೆಲೆಯಲ್ಲಿ ಮಿಗ್ 29 ಫೈಟರ್ ಏರ್ ಕ್ರಾಫ್ಟ್ ನಲ್ಲಿ ಕುಳಿತ ಕ್ಷಣ.

ಆಟೋಗ್ರಾಫ್ ಬೇಕಾ..?!

ಆಟೋಗ್ರಾಫ್ ಬೇಕಾ..?!

ಚೆನ್ನೈನಲ್ಲಿ ನಡೆದ ಕಾಟನ್ ಮತ್ತು ಸಿಲ್ಕ್ ಸೀರೆಗಳ ಪ್ರದರ್ಶನವನ್ನು ಉದ್ಘಾಟಿಸಿದ ಬಾಲಿವುಡ್ ನಟಿ ವಿದ್ಯಾಬಾಲನ್ ಅಭಿಮಾನಿ, ಭರತನಾಟ್ಯ ಕಲಾವಿದೆಯೊಬ್ಬರಿಗೆ ಆಟೋಗ್ರಾಫ್ ನೀಡಿದ ಕ್ಷಣ.

ನಮ್ಮ ಭೂಮಿ ನಮಗೆ ಕೊಡಿ

ನಮ್ಮ ಭೂಮಿ ನಮಗೆ ಕೊಡಿ

ರೈತರ ಜಮೀನನ್ನು ಅಭಿವೃದ್ಧಿ ಕಾರ್ಯಕ್ಕಾಗಿ ಸ್ವಾಧೀನ ಪಡಿಸಿಕೊಂಡ ಜೈಪುರ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಜೈಪುರದ ರೈತ ಮಹಿಳೆಯರು ಪ್ರತಿಭಟನೆ ನಡೆಸಿದರು. ತಮ್ಮ ದೇಹವನ್ನು ಕತ್ತಿನವರೆಗೂ ಮಣ್ಣಿನಲ್ಲಿ ಹುಗಿದುಕೊಂಡು ತಮ್ಮ ವಿರೋಧ ವ್ಯಕ್ತಪಡಿಸಿದರು.

ನಮ್ಮನ್ನು ಎಲ್ಲರಂತೆಯೇ ನೋಡಿ

ನಮ್ಮನ್ನು ಎಲ್ಲರಂತೆಯೇ ನೋಡಿ

ಸಮಾಜದಲ್ಲಿ ನಮ್ಮನ್ನು ಬೇರೆಯದೇ ಪಂಗಡ ಎಂಬಂತೆ ನೋಡದೆ, ಕಡೆಗಣಿಸದೆ ನಮ್ಮನ್ನೂ ಎಲ್ಲರಂತೆಯೇ ನೋಡಿ ಎಂಬ ಸಂದೇಶದೊಂದಿಗೆ ತಿರುವನಂತಪುರಂ ನಲ್ಲಿ ತೃತೀಯಲಿಂಗಿಗಳು ಪ್ರತಿಭಟನೆ ನಡೆಸಿದರು.

English summary
The full moon is partly covered by clouds as it rises over the outskirts of Frankfurt, Germany. The sciene looks like, someone sets fire on moon!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X